Untitled Document
Sign Up | Login    
Dynamic website and Portals
  
July 4, 2015

ಐಸಿಸ್ ಉಗ್ರರ ನೆರವಿನಿಂದ ಜೈಲಿನಿಂದ ತಪ್ಪಿಸಿಕೊಳ್ಳಲು ಯಾಸಿನ್ ಭಟ್ಕಳ್ ಸಂಚು

ಯಾಸಿನ್ ಭಟ್ಕಳ್ (ಫೈಲ್ ಚಿತ್ರ) ಯಾಸಿನ್ ಭಟ್ಕಳ್ (ಫೈಲ್ ಚಿತ್ರ)

ಹೈದರಾಬಾದ್ : ಹೈದರಾಬಾದ್ ಜೈಲಿನಿಂದ ದೆಹಲಿಯಲ್ಲಿರುವ ಪತ್ನಿ ಝಾಹಿದಾಗೆ ಕರೆ ಮಾಡಿರುವ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಯಾಸಿನ್ ಭಟ್ಕಳ್, ಐಸಿಸ್ ಉಗ್ರರ ನೆರವಿನಿಂದ ಜೈಲಿನಿಂದ ತಪ್ಪಿಸಿಕೊಳ್ಲುವುದಾಗಿ ಹೇಳಿದ್ದಾನೆಂದು ಗುಪ್ತಚರ ಇಲಾಖೆಗೆ ಮಾಹಿತಿ ಲಭ್ಯವಾಗಿದೆ ಎಂದು ಟೈಮ್ಸ್ ಒಫ್ ಇಂಡಿಯಾ ವರದಿ ಮಾಡಿದೆ.

ಐದು ನಿಮಿಷದ ಮಾತುಕತೆಯಲ್ಲಿ ಯಾಸಿನ್ ಭಟ್ಕಳ್, ನನಗೆ ಡಮಾಸ್ಕಸ್ ನಿಂದ ನೆರವು ಸಿಗುತ್ತಿದೆ, ಅದಷ್ಟು ಬೇಗ ಹೊರಬರುತ್ತೇನೆ ಎಂದು ಹೇಳಿದ್ದಾನೆ. ಯಾಸಿನ್ ಭಟ್ಕಳ್ ನ ಈ ಹೇಳಿಕೆ ಅಧಿಕಾರಿಗಳಿಗೆ ಆತಂಕ ಉಂಟು ಮಾಡಿದೆ. ಈ ಹಿನ್ನಲೆಯಲ್ಲಿ ಹೈದರಾಬಾದ್ ಜೈಲಿನ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಯಾಸಿನ್ ಭಟ್ಕಳ್ ಸುಮಾರು 10 ಸಲ ತನ್ನ ಪತ್ನಿಗೆ ಮಾಡಿರುವ ಕರೆಗಳಲ್ಲಿ, ತಾನು ಅದಷ್ಟು ಬೇಗ ಜೈಲಿನಿಂದ ಹೊರಬರುವುದಾಗಿ ಹೇಳಿರುವುದು ಸಾಮಾನ್ಯ ವಿಷಯವಾಗಿದೆ.

ಬಂಧಿತ ಯಾಸಿನ್ ಭಟ್ಕಳ್ ಗೆ ಅಧಿಕೃತ ಫೋನ್ ಬಳಕೆ ಮಾಡಲು ನ್ಯಾಯಾಲಯದಿಂದ ಅನುಮತಿ ಇರುವುದರಿಂದ, ವಾರಕ್ಕೆ ಎರಡು ಬಾರಿ ಕುಟುಂಬದವರ ಜೊತೆ ಮಾತನಾಡಬಹುದಾಗಿದೆ. ಯಾಸಿನ್ ನ ಸಂಬಂಧಿಕರ ಹೆಸರು ಮತ್ತು ಫೋನ್ ನಂಬರ್ ದಾಖಲಾಗಿದೆ ಮತ್ತು ಎಲ್ಲ ಸಂಭಾಷಣೆಯನ್ನು ಜೈಲಿನ ಅಧಿಕಾರಿಗಳು ರೆಕಾರ್ಡ್ ಮಾಡುತ್ತಾರೆ.

ಆದರೆ ಈ ವಿಷಯವಾಗಿ ಮಾತನಾಡಿರುವ, ತೆಲಂಗಾಣ ಜೈಲಿನ ಮುಖ್ಯಸ್ಥ ವಿ ಕೆ ಸಿಂಗ್, ಅಧಿಕೃತ ಫೋನ್ ನಿಂದಲೇ ಈ ರೀತಿ ಹೇಳಿರುವುದರಿಂದ ಇದು ಪೋಲೀಸರನ್ನು ದಾರಿತಪ್ಪಿಸಲು ಹೇಳಿರುವ ಹೇಳಿಕೆಯಾಗಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಎಲ್ಲಾ ಸಂಭಾಷಣೆಗಳು ರೆಕಾರ್ಡ್ ಆಗುತ್ತವೆ ಎಂಬುದು ಯಾಸಿನ್ ಭಟ್ಕಳ್ ಗೆ ತಿಳಿದಿದೆ ಎಂದಿದ್ದಾರೆ.

ಹಲವಾರು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಸಂಸ್ಥಾಪಕ ಯಾಸಿನ್ ಭಟ್ಕಳ್‌ ನನ್ನು 2013ರಲ್ಲಿ ಭಾರತ-ನೇಪಾಳ ಗಡಿ ಭಾಗದಲ್ಲಿ ಬಂಧಿಸಲಾಗಿತ್ತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Crime

ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಬೆಂಗಳೂರಿನ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತಗೊಂಡ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
  • ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದ ಎಸ್ ಐ ಟಿ
  • ಸೈನೈಡ್ ಮೋಹನ್ ಗೆ ಜೀವಾವಧಿ ಜೈಲು ಶಿಕ್ಷೆ: ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited