ನವದೆಹಲಿ : ಅಪಾಯಕಾರಿ ಅಂಶಗಳು ಕಂಡುಬಂದ ಹಿನ್ನೆಲೆಯಲ್ಲಿ ನೆಸ್ಲೆ ಕಂಪನಿಯ ಮ್ಯಾಗಿ ನೂಡಲ್ಸ್ ಅನ್ನು ಮಾರುಕಟ್ಟೆಯಿಂದ ಹಿಂದಕ್ಕೆ ಪಡೆದ ಬೆನ್ನಲ್ಲೇ, ಇಂಡೋ ನಿಸ್ಸಾನ್ ಕಂಪನಿಯ ಟಾಪ್ ರಾಮೆನ್ ನೂಡಲ್ಸ್ ಅನ್ನು ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯಲು ನಿರ್ಧರಿಸಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಗೌತಮ್ ಶರ್ಮಾ, ನಮ್ಮ ಕಂಪನಿಯ ಟಾಪ್ ರಾಮೆನ್ ನೂಡಲ್ಸ್ ಅನ್ನು ಎಫ್ಎಸ್ಎಸ್ಎಐನಿಂದ ನೊಂದಾಯಿತವಾಗಿರುವ ಎರಡು ಖಾಸಗಿ ಲ್ಯಾಬ್ ಗಳಲ್ಲಿ ಪರೀಕ್ಷೆಗೆ ಗುರಿಪಡಿಸಲಾಗಿತ್ತು. ಇದರ ಫಲಿತಾಂಶವನ್ನು ಈಗಾಗಲೇ ನಾವು ಎಫ್ಎಸ್ಎಸ್ಎಐಗೆ ಸಲ್ಲಿಸಿದ್ದೇವೆ. ಇನ್ನು ಹಲವು ರಾಜ್ಯಗಳಲ್ಲಿ ಕೂಡಾ ಪ್ರತ್ಯೇಕವಾಗಿ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ಕೆಲವು ಕಡೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ರುಚಿ ಹೆಚ್ಚಿಸುವ ಅಂಶಗಳು ಕಂಡುಬಂದಿದ್ದವು' ಎಂದಿದ್ದಾರೆ.
ಹೀಗಾಗಿ ನಾವು ಎಫ್ಎಸ್ಎಸ್ಎಐನಿಂದ ಸ್ಪಷ್ಟನೆ ಕೋರಿದ್ದೆವು. ಈ ವೇಳೆ ನಾವು ಉತ್ಪನ್ನಗಳಿಗೆ ಅನುಮತಿ ನೀಡುವವರೆಗೂ, ನೂಡಲ್ಸ್ ಅನ್ನು ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯುವಂತೆ ಸೂಚಿಸಲಾಯ್ತು. ಹೀಗಾಗಿ ಟಾಪ್ ರಾಮೆನ್ ನೂಡಲ್ಸ್ ಅನ್ನು ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ.