Untitled Document
Sign Up | Login    
Dynamic website and Portals
  
June 27, 2015

3 ದೇಶಗಳಲ್ಲಿ ಐಸಿಸ್‌ ಉಗ್ರರ ದಾಳಿ: 50ಕ್ಕೂ ಹೆಚ್ಚು ಬಲಿ

ಲಂಡನ್ : ವಿಶ್ವದ ಹಲವೆಡೆ ಅಟ್ಟಹಾಸ ಮೆರೆಯುತ್ತಿರುವ ಸುನ್ನಿ ಪಂಥೀಯ ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಒಂದೇ ದಿನ ಫ್ರಾನ್ಸ್‌, ಟ್ಯುನೀಸಿಯಾ ಮತ್ತು ಕುವೈತ್‌ ನಲ್ಲಿ ದೊಡ್ಡ ಪ್ರಮಾಣದ ಭಯೋತ್ಪಾದಕ ದಾಳಿಗಳನ್ನು ಎಸಗಿದ್ದಾರೆ. ಭಾರಿ ಸಂಖ್ಯೆಯ ಸಾವು ನೋವಿಗೆ ಕಾರಣರಾಗಿದ್ದಾರೆ. ಪಾಶ್ಚಾತ್ಯರು ಮತ್ತು ಶಿಯಾ ಪಂಥೀಯರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿವೆ.

ಫ್ರಾನ್ಸ್‌ನಲ್ಲಿ ಶಂಕಿತ ಐಸಿಸ್ಉಗ್ರರು ಗ್ಯಾಸ್‌ ಕಾರ್ಖಾನೆಯೊಂದರ ಮೇಲೆ ದಾಳಿ ನಡೆಸಿದ್ದು, ಓರ್ವನ ಶಿರಚ್ಛೇದ ಮಾಡಿದ್ದಾರೆ. ಉತ್ತರ ಆಫ್ರಿಕಾದ ಟ್ಯುನೀಸಿಯಾದ ಪಂಚತಾರಾ ಹೋಟೆಲ್‌ ಮೇಲೆ ಅಂಧಾದುಂಧಿ ಗುಂಡಿನ ದಾಳಿ ನಡೆಸಿ ಕನಿಷ್ಠ 27 ಪ್ರವಾಸಿಗರನ್ನು ಕೊಂದುಹಾಕಿದ್ದಾರೆ. ತೈಲ ಸಂಪದ್ಭರಿತ ಕುವೈತ್‌ನ ಶಿಯಾ ಪಂಥೀಯ ಮಸೀದಿ ಮೇಲೆ ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ 25ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ಮೂರೂ ದೇಶಗಳಲ್ಲಿ ನಡೆದ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದು, ಇದೊಂದು ಪೈಶಾಚಿಕ ಕೃತ್ಯ ಎಂದು ಬಣ್ಣಿಸಿದ್ದಾರೆ.

ಪ್ರವಾದಿ ಮೊಹಮ್ಮದರನ್ನು ಅವಹೇಳನ ಮಾಡಿದ್ದಕ್ಕೆ ನಡೆದ "ಚಾರ್ಲಿ ಹೆಬ್ಡೊ' ಪತ್ರಿಕೆಯ ಮೇಲಿನ ದಾಳಿಯ ನೆನಪು ಮಾಸುವ ಮುನ್ನವೇ ಫ್ರಾನ್ಸ್‌ ನಲ್ಲಿ ಮತ್ತೂಂದು ಭಯೋತ್ಪಾದಕ ದಾಳಿ ನಡೆದಿದೆ. ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಸಂಘಟನೆಗೆ ಸೇರಿದ್ದಾರೆ ಎನ್ನಲಾದ ಇಬ್ಬರು ವ್ಯಕ್ತಿಗಳು ಲಿಯೋನ್‌ ಪಟ್ಟಣದ ಗ್ಯಾಸ್‌ ಕಾರ್ಖಾನೆಯೊಂದರ ಮೇಲೆ ದಾಳಿ ನಡೆಸಿದ್ದು, ಓರ್ವ ಸಾವನ್ನಪ್ಪಿ ಇಬ್ಬರು ಗಾಯಗೊಂಡಿದ್ದಾರೆ.

ದಾಳಿಯ ಸಂದರ್ಭದಲ್ಲಿ ಶಿರಚ್ಛೇದಕ್ಕೆ ಒಳಗಾದ ವ್ಯಕ್ತಿಯೊಬ್ಬನ ರುಂಡವನ್ನು ಕಾರ್ಖಾನೆಯ ತಂತಿಬೇಲಿಗೆ ತೂಗುಬಿಟ್ಟಿರುವ ಉಗ್ರರು ಆತನ ತಲೆಗೆ ಅರೇಬಿಕ್‌ ಅಕ್ಷರವುಳ್ಳ ಬಟ್ಟೆಯನ್ನು ಸುತ್ತಿದ್ದಾರೆ. ಜತೆಗೆ ಎರಡು ಇಸ್ಲಾಮಿಕ್‌ ಧ್ವಜಗಳನ್ನೂ ನೆಟ್ಟಿದ್ದಾರೆ. ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ಪ್ರಮುಖ ದಾಳಿಕೋರ ಯಾಸೀನ್‌ ಸಾಲ್ವಿ(35), ಎಂಬಾತನನ್ನು ಬಂಧಿಸಲಾಗಿದೆ. ಇನ್ನೋರ್ವನನ್ನೂ ಬಂಧಿಸಲಾಗಿದೆ ಎಂದು ಹೇಳಲಾಗಿದ್ದರೂ, ಘಟನೆಯಲ್ಲಿ ಆತನ ಪಾಲ್ಗೊಳ್ಳುವಿಕೆ ಮತ್ತು ಬಂಧನವನ್ನು ಫ್ರಾನ್ಸ್‌ ಸರ್ಕಾರ ದೃಢಪಡಿಸಿಲ್ಲ.


ಲಿಯೋನ್‌ ಪಟ್ಟಣದ 40 ಕಿ.ಮೀ. ಸಮೀಪ ಅಮೆರಿಕ ವ್ಯಕ್ತಿಯ ಒಡೆತನದಲ್ಲಿ ಗ್ಯಾಸ್‌ ಕಾರ್ಖಾನೆಯಿದೆ. ಇತ್ತೀಚೆಗೆ ಇದರ ಮಾಲೀಕನು ಸೌದಿ ಅರೇಬಿಯಾ ಮೂಲದ ಶಿಯಾ ಮುಸ್ಲಿಂ ಉದ್ಯಮಿಯೊಬ್ಬನ ಜತೆ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದ. ಬಹುಶಃ ಇದರಿಂದ ಸುನ್ನಿ ಪಂಥೀಯ ಐಸಿಸ್‌ ಸಂಘಟನೆ ಕುಪಿತವಾಗಿತ್ತು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲೇ ದಾಳಿ ನಡೆದಿರಬಹುದೆಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.

ಇಬ್ಬರೂ ದಾಳಿಕೋರರು ಕಾರಿನಲ್ಲಿ ಭಾರಿ ವೇಗದಲ್ಲಿ ಆಗಮಿಸಿ, ಕಾರ್ಖಾನೆಯ ಗೇಟಿಗೆ ಡಿಕ್ಕಿ ಹೊಡೆಸಿ ಒಳನುಗ್ಗಿದ್ದಾರೆ. ಕಾರ್ಖಾನೆ ಸ್ಫೋಟಿಸುವ ಉದ್ದೇಶದಿಂದ ಗ್ಯಾಸ್‌ ಕಂಟೇನರ್‌ಗಳಿಗೂ ವಾಹನ ಡಿಕ್ಕಿ ಹೊಡೆಸಿದ್ದು, ಆಗ ಗ್ಯಾಸ್‌ ಸ್ಫೋಟಿಸಿ ಅಲ್ಲಿದ್ದ ಇಬ್ಬರು ನಾಗರಿಕರಿಗೆ ಗಾಯಗಳಾಗಿವೆ. ಬಳಿಕ ವ್ಯಕ್ತಿಯೊಬ್ಬನ ರುಂಡವನ್ನು ಇಸ್ಲಾಮಿಕ್‌ ಬರಹಗಳು ಮತ್ತು ಧ್ವಜಗಳೊಂದಿಗೆ ಕಾರ್ಖಾನೆಯ ಬೇಲಿಗೆ ತೂಗುಬಿಟ್ಟು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಪ್ರಮುಖ ದಾಳಿಕೋರ ಯಾಸೀರ್‌ ಸೆರೆಸಿಕ್ಕಿದ್ದಾನೆ. ಆತನ ಜತೆಗಿದ್ದ ಇನ್ನೊಬ್ಬನನ್ನು ನಂತರ ಬಂಧಿಸಲಾಗಿದೆ ಎಂದು ಗೊತ್ತಾಗಿದೆ.

ಉತ್ತರ ಆಫ್ರಿಕಾದ ದೇಶವಾದ ಟ್ಯುನೀಸಿಯಾದ ಪ್ರತಿಷ್ಠಿತ ಪಂಚತಾರಾ ಹೋಟೆಲ್‌ನಲ್ಲಿ ನುಗ್ಗಿದ ಪೊಲೀಸ್‌ ವೇಷಧಾರಿ ಶಂಕಿತ ಐಸಿಸ್ಉಗ್ರರು ಅಂಧಾದುಂಧಿ ಗುಂಡಿನ ದಾಳಿ ನಡೆಸಿದ ಪರಿಣಾಮ 27 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಹೆಚ್ಚಿನವರು ಬ್ರಿಟನ್‌ ಮತ್ತು ಜರ್ಮನಿ ಪ್ರವಾಸಿಗರಾಗಿದ್ದಾರೆ.

ಸೌಸೆ ನಗರದ ಸಮುದ್ರ ತೀರಕ್ಕೆ ಹೊಂದಿಕೊಂಡ ಸುಂದರ "ಮರ್ಹಬಾ ಹೋಟೆಲ್‌' ಮೇಲೆ ಈ ದಾಳಿ ನಡೆದಿದ್ದು, ಮೃತರಲ್ಲಿ ಹೆಚ್ಚಿನವರು ವಿದೇಶೀ ಪ್ರವಾಸಿಗರಾಗಿದ್ದಾರೆ. ಮೃತರ ಸಂಖ್ಯೆ ಇನ್ನೂ ಹೆಚ್ಚಬಹುದಾಗಿದೆ ಎಂದು ದೇಶದ ಗೃಹ ಸಚಿವಾಲಯದ ವಕ್ತಾರರು ಹೇಳಿದ್ದಾರೆ. ದಾಳಿಕೋರರ ಆರ್ಭಟಕ್ಕೆ ಹೆದರಿ ಅನೇಕರು ಸ್ಥಳದಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಇಡೀ ಹೋಟೆಲ್‌ ಆವರಣ ರಣರಂಗದಂತಾಗಿದೆ.

ದಾಳಿಕೋರರ ಪೈಕಿ ಓರ್ವನ್ನು ಹತ್ಯೆ ಮಾಡಲಾಗಿದೆ. ಇನ್ನೂ ಕೆಲ ದಾಳಿಕೋರರು ಹೋಟೆಲ್‌ನಲ್ಲಿ ಅವಿತಿದ್ದು ಅವರ ಮತ್ತು ಭದ್ರತಾ ಪಡೆಗಳ ನಡುವೆ ಚಕಮಕಿ ಮುಂದುವರೆದಿದೆ ಎಂದು "ಅಲ್‌ ಜಝೀರಾ' ವರದಿ ಮಾಡಿದೆ.

ಶಿಯಾ-ಸುನ್ನಿ ಸಂಘರ್ಷದ ಬಿಸಿ ಈಗ ತೈಲ ಸಂಪದ್ಭರಿತ ದೇಶ ಕುವೈತ್‌ಗೂ ತಟ್ಟಿದ್ದು, ಸುನ್ನಿ ಪಂಥೀಯ ಉಗ್ರ ಸಂಘಟನೆಯಾದ "ಇಸ್ಲಾಮಿಕ್‌ ಸ್ಟೇಟ್‌' (ಐಸಿಸ್‌) ಶಿಯಾ ಪಂಥೀಯ ಮಸೀದಿಯೊಂದರಲ್ಲಿ ಶುಕ್ರವಾರ ಆತ್ಮಾಹುತಿ ದಾಳಿ ನಡೆಸಿದೆ. ದಾಳಿಯಲ್ಲಿ 25 ಮಂದಿ ಸಾವನ್ನಪ್ಪಿ, 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಐಸಿಸ್‌ನ ಸಹ ಉಗ್ರ ಸಂಘಟನೆಯಾದ "ಅಬು ಸುಲೇಮಾನ್‌ ಅಲ್‌ ಮುವಾಹಿದ್‌' ಸಂಘಟನೆ ದಾಳಿಯ ಹೊಣೆ ಹೊತ್ತಿದೆ. "ದಾಳಿಗೊಳಗಾದ ಶಿಯಾ ಇಮಾಂ ಸಾದಿಕ್‌ ಮಸೀದಿಯಲ್ಲಿ ಸುನ್ನಿ ಪಂಥೀಯರನ್ನು ಕರೆಸಿಕೊಂಡು ಶಿಯಾ ಪಂಥೀಯ ಬೋಧನೆಗಳನ್ನು ಮಾಡಲಾಗುತ್ತಿತ್ತು' ಎಂದು ದಾಳಿಗೆ ಕಾರಣ ನೀಡಿದೆ. ಶಿಯಾ ಪಂಥೀಯರನ್ನು ಸಂಪ್ರದಾಯ ವಿರೋಧಿಗಳೆಂದು ಐಸಿಸ್‌ ಸಂಘಟನೆ ಪರಿಗಣಿಸುತ್ತದೆ.

ಪ್ರಾರ್ಥನೆಯ ವೇಳೆ ಆತ್ಮಾಹುತಿ ದಾಳಿಕೋರ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದು, ಇಡೀ ಮಸೀದಿಗೆ ಬೆಂಕಿ ಹೊತ್ತಿಕೊಂಡು ಹಾನಿಯಾಗಿದೆ. ಮಸೀದಿಯಲ್ಲಿ ಶವಗಳು, ರಕ್ತ ಎಲ್ಲೆಂದರಲ್ಲಿ ಚೆಲ್ಲಾಡಿದೆ. ಘಟನೆಯಲ್ಲಿ 25 ಮಂದಿ ಗಾಯಗೊಂಡಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Crime

ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಬೆಂಗಳೂರಿನ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತಗೊಂಡ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
  • ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದ ಎಸ್ ಐ ಟಿ
  • ಸೈನೈಡ್ ಮೋಹನ್ ಗೆ ಜೀವಾವಧಿ ಜೈಲು ಶಿಕ್ಷೆ: ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited