BW News Bureau : ಬಿಬಿಎಂಪಿ ಚುನಾವಣಾ ದಿನಾಂಕ ಘೊಷಣೆಯಾಗಿದ್ದು, ಜುಲೈ 28ರಂದು ಚುನಾವಣೆ ನಡೆಯಲಿದ್ದು ಗುರುವಾರದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ.
ಗುರುವಾರ ಸುದ್ದಿಗೋಷ್ಠಿ ನಡೆದ ಸುದ್ದಿಗೋಷ್ಠಿಯಲ್ಲಿ, ರಾಜ್ಯ ಚುನಾವಣಾ ಆಯುಕ್ತ ಶ್ರೀನಿವಾಸಾಚಾರಿ ಬಿಬಿಎಂಪಿ ಚುನಾವಣಾ ವೇಳಾಪಟ್ಟಿಯನ್ನು ಘೊಷಣೆ ಮಾಡಿದರು.
ಬಿಬಿಎಂಪಿ ಆಯುಕ್ತ ಕುಮಾರ್ ನಾಯಕ್ ಚುನಾವಣೆಯ ಉಸ್ತುವಾರಿ ಹೊರಲಿದ್ದು, ಜುಲೈ 8 ರಂದು ಅಧಿಸೂಚನೆ ಹೊರಡಿಸಲಿದ್ದಾರೆ. ನಾಮಪತ್ರ ಸಲ್ಲಿಸಲು ಜುಲೈ 15 ಕೊನೆಯ ದಿನಾಂಕವಾಗಿದ್ದು, ಜುಲೈ 16ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜುಲೈ 20 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ.
ಜುಲೈ 28ರಂದು ಚುನಾವಣೆ ನಡೆಯಲಿದ್ದು, ಅಗತ್ಯಬಿದ್ದರೆ ಜುಲೈ 30 ರಂದು ಮರುಮತದಾನ ನಡೆಯಲಿದೆ. ಜುಲೈ 31ರಂದು ಮತ ಎಣಿಕೆ ನಡೆಯಲಿದೆ.