Untitled Document
Sign Up | Login    
Dynamic website and Portals
  
June 17, 2015

ಲಲಿತ್ ಮೋದಿಗೆ ನೆರವು ವಿವಾದ: ವಸುಂಧರಾ ರಾಜೇ ಹೆಸರು ಬಹಿರಂಗ

ವಸುಂಧರಾ ರಾಜೇ ವಸುಂಧರಾ ರಾಜೇ

ನವದೆಹಲಿ : ಐಪಿಎಲ್‌ ಮಾಜಿ ಮುಖ್ಯಸ್ಥ ಲಲಿತ್‌ ಮೋದಿಗೆ ವಿದೇಶದಲ್ಲಿರಲು ನೆರವಾದ ವಿವಾದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಸಿಲುಕಿರುವ ಬೆನ್ನಲ್ಲೇ ಈಗ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಹೆಸರು ಕೂಡ ಕೇಳಿಬಂದಿರುವುದು ಪ್ರಕರಣಕ್ಕೆ ಹೊಸ ತಿರುವು ದೊರೆತಂತಾಗಿದೆ.

ಬ್ರಿಟನ್‌ ನಲ್ಲಿ ನೆಲೆಸುವ ಸಂಬಂಧ ವಲಸೆ ದಾಖಲೆಗಳಿಗಾಗಿ ಲಲಿತ್‌ ಮೋದಿ ಸಲ್ಲಿಸಿದ ಅರ್ಜಿಯನ್ನು 2011ರಲ್ಲಿ ರಾಜಸ್ಥಾನದ ಪ್ರತಿಪಕ್ಷ ನಾಯಕಿಯಾಗಿದ್ದ ವಸುಂಧರಾ ರಾಜೇ ಬೆಂಬಲಿಸಿದ್ದರು. ಆದರೆ, ಈ ವಿಷಯ ಭಾರತೀಯ ಅಧಿಕಾರಿಗಳಿಗೆ ತಿಳಿಯದಂತೆ ರಹಸ್ಯವಾಗಿರಬೇಕು ಎಂದು ವಸುಂಧರಾ ಕೋರಿದ್ದರು ಎಂಬ ವಿಷಯ ಇದೀಗ ಬಹಿರಂಗವಾಗಿದೆ. ಅಲ್ಲದೆ, ಲಲಿತ್‌ ಮೋದಿ ಅವರ ಪತ್ನಿ ಪೋರ್ಚುಗಲ್‌ ನಲ್ಲಿ ಚಿಕಿತ್ಸೆ ಪಡೆದಿದ್ದ ಆಸ್ಪತ್ರೆಗೆ 2014ರಲ್ಲಿ ರಾಜೇ ಅವರು ರಾಜಸ್ಥಾನದಲ್ಲಿ ಆಸ್ಪತ್ರೆ ನಿರ್ಮಿಸಲು 35000 ಚದರ ಅಡಿಯಷ್ಟು ಭೂಮಿ ನೀಡಿದ್ದ ವಿಷಯವೂ ಬಹಿರಂಗಗೊಂಡಿದೆ. ಇದರೊಂದಿಗೆ, ಸುಷ್ಮಾ ಸ್ವರಾಜ್‌ ರನ್ನು ಸಮರ್ಥಿಸುತ್ತಾ ಪ್ರತಿಪಕ್ಷಗಳ ವಾಗ್ದಾಳಿಯನ್ನು ಎದುರಿಸುತ್ತಿದ್ದ ಬಿಜೆಪಿ ಹಾಗೂ ಕೇಂದ್ರ ಸರ್ಕಾರಕ್ಕೆ ಹೊಸತೊಂದು ತಲೆನೋವು ಎದುರಾಗಿದೆ.

ಈ ಎರಡೂ ವಿಷಯಗಳು ಕಳೆದ 3 ದಿನದಿಂದ ಬಿಜೆಪಿ ವಿರುದ್ಧ ಸಮರ ಸಾರಿದ್ದ ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳಿಗೆ ಹೊಸ ಅಸ್ತ್ರವನ್ನು ದೊರಕಿಸಿಕೊಟ್ಟಿದೆ.

ವಿಶೇಷವೆಂದರೆ, ರಾಜೇ ಬೆಂಬಲ ಪತ್ರ ನೀಡಿದ್ದ ವಿಷಯವನ್ನು ಸ್ವತಃ ಲಲಿತ್‌ ಮೋದಿ ಅವರ ವಕೀಲರ ಪರ ಸಂಸ್ಥೆಯೊಂದು ಮಾಧ್ಯಮಗಳಿಗೆ ರವಾನಿಸಿದೆ. ಆದರೆ ಇಂಥ ಪತ್ರದ ಯಾವುದೇ ಮಾಹಿತಿ ತಮಗೆ ಇಲ್ಲ. ಲಲಿತ್‌ ಮೋದಿ ಕುಟುಂಬ ನನಗೆ ಗೊತ್ತು ಅಷ್ಟೇ ಎಂದು ವಸುಂಧರಾ ರಾಜೇ ಪ್ರತಿಕ್ರಿಯಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited