ಇಂಫಾಲ್ : ಇತ್ತೀಚೆಗಷ್ಟೇ ಈಶಾನ್ಯದ ನಾಗಾ ಉಗ್ರರು ಮಣಿಪುರ ಚಾಂಡೇಲ್ ಪ್ರದೇಶದಲ್ಲಿರುವ ಸೇನಾ ಕ್ಯಾಂಪ್ ಮೇಲೆ ದಾಳಿ ನಡಸಿ 18 ಯೋಧರನ್ನು ಬಲಿ ಪಡೆದಿದ್ದ ಘಟನೆಗೆ ಸಂಬಂಧಿಸಿದಂತೆ ನಾಗಾ ಬಂಡುಕೋರ ಉಗ್ರಗಾಮಿ (ಎನ್ ಎಸ್ ಸಿಎನ್ ಕೆ) ಸಂಘಟನೆಯ ಇಬ್ಬರು ಸೇರಿದಂತೆ ಒಟ್ಟು 3 ಉಗ್ರರನ್ನು ಮಣಿಪುರ ಪೊಲೀಸರು ಬಂಧಿಸಿದ್ದಾರೆ.
ನ್ಯಾಷನಲಿಸ್ಟ್ ಸೋಸಿಯಾಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ -ಖಪ್ಲಾಂಗ್(ಎನ್ಎಸ್ಸಿಎನ್(ಕೆ) ಸಂಘಟನೆಯ ಸ್ವಯಂಘೋಷಿತ ಮುಖ್ಯಸ್ಥ ಖುಮ್ಲೊ ಅಬಿ ಅನಾಲ್, ಎನ್ಎಸ್ಸಿಎನ್(ಕೆ) ಸಂಘಟನೆಯ ಕಾರ್ಯಕರ್ತ ಪಮೈ ಕಕಿಲಾಂಗ್ ಅಲಿಯಾಸ್ ಕಾಳಿಂಗ್ ಹಾಗೂ ನಿಷೇಧ ಕೆಸಿಪಿ ಎಂಸಿ ಸಂಘಟನೆ ಕಾರ್ಯಕರ್ತ ಮೊಹಮ್ಮದ್ ಜಾಹಿದ್ ಅಲಿ ಬಂಧಿತ ಉಗ್ರರು ಎಂದು ತಿಳಿದುಬಂದಿದೆ.
ಲಾಂಫೆಲ್ ಪೊಲೀಸ್ ಠಾಣೆ ವ್ಯಾಪ್ತಿಯ ಸೂಪರ್ ಮಾರ್ಕೆಟ್ ನಲ್ಲಿ ಜೂನ್ 11ರಂದು ಶೋಧ ಕಾರ್ಯ ನಡೆಸುತ್ತಿದ್ದ ವೇಳೆ, ಇಂಫಾಲ್ ಪಶ್ಚಿಮ ಜಿಲ್ಲಾ ಪೊಲೀಸ್ ಕಮಾಂಡೋಗಳು ಚಾಂದೇಲ್ ಜಿಲ್ಲೆಯ ಲಾಂಬುಂಗ್ ಗ್ರಾಮದ ಖುಮ್ಲೊನನ್ನು ಬಂಧಿಸಲಾಗಿದೆ ಎಂದು ಮಣಿಪುರ ಪೊಲೀಸರು ತಿಳಿಸಿದ್ದಾರೆ.