Untitled Document
Sign Up | Login    
Dynamic website and Portals
  
June 8, 2015

ಸ್ಮಾರ್ಟ್‌ ಸಿಟಿ ಮತ್ತು ಅಮೃತ್‌ ಯೋಜನೆಗೆ ಜೂ.25ಕ್ಕೆ ಮೋದಿ ಚಾಲನೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ : ಎನ್‌.ಡಿ.ಎ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್‌ ಸಿಟಿ ಹಾಗೂ ಅಟಲ್‌ ನಗರ ನವೀಕರಣ ಹಾಗೂ ಪುನಶ್ಚೇತನ ಯೋಜನೆ (ಅಮೃತ್‌)ಗೆ ಜೂ.25ರಂದು ಅಧಿಕೃತವಾಗಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

98 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಈ ಎರಡೂ ಯೋಜನೆಗಳ ಸಂಪೂರ್ಣ ರೂಪರೇಷೆ ಹಾಗೂ ಯಾವ ರಾಜ್ಯಗಳಿಗೆ ಎಷ್ಟು ಸ್ಮಾರ್ಟ್‌ ಸಿಟಿ ಮತ್ತು ಎಷ್ಟು ಅನುದಾನ ನೀಡಲಾಗುತ್ತದೆ ಎಂಬುದನ್ನು ಮೋದಿ ಅಂದೇ ಪ್ರಕಟಿಸಲಿದ್ದಾರೆ.

ಸ್ಮಾರ್ಟ್‌ ಸಿಟಿ ಯೋಜನೆಯಡಿ 100 ನಗರ ಹಾಗೂ ಅಮೃತ್‌ ಕಾರ್ಯಕ್ರಮದಡಿ ದೇಶದ 500 ನಗರಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಸಚಿವ ಸಂಪುಟ ಸಭೆ ಈಗಾಗಲೇ ಸಮ್ಮತಿ ಸೂಚಿಸಿದೆ. ಈ ಎರಡೂ ಯೋಜನೆಗಳಿಗೆ ಮುಂದಿನ ಐದು ವರ್ಷಗಳಲ್ಲಿ 98 ಸಾವಿರ ಕೋಟಿ ರೂ. ವ್ಯಯಿಸಲಾಗುತ್ತದೆ. ಈ ಪೈಕಿ ಸ್ಮಾರ್ಟ್‌ ಸಿಟಿ ಯೋಜನೆಗೆ 48 ಸಾವಿರ ಕೋಟಿ, ಅಮೃತ್‌ ಯೋಜನೆಗೆ 50 ಸಾವಿರ ಕೋಟಿ ರೂ. ಖರ್ಚು ಮಾಡಲು ಉದ್ದೇಶಿಸಲಾಗಿದೆ.

ಸ್ಮಾರ್ಟ್‌ ಸಿಟಿ ಯೋಜನೆಯಡಿ ಮೊದಲ ಹಂತದಲ್ಲಿ 20 ನಗರಗಳನ್ನು ಅಂತಿಮಗೊಳಿಸಲಾಗುತ್ತದೆ. ಮುಂದಿನ ಹಂತದಲ್ಲಿ 40 ನಗರಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಬಳಿಕ ಇನ್ನುಳಿದ 40 ನಗರವನ್ನು ಈ ಯೋಜನೆಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯುಪಿಎ ಜಾರಿಗೆ ತಂದಿದ್ದ ಜೆ-ನರ್ಮ್ ಯೋಜನೆಯ ಹೆಸರು ಬದಲಿಸಿ, ಕೆಲವೊಂದು ಬದಲಾವಣೆ ಮಾಡಿ ಅಟಲ್‌ ಹೆಸರಿನೊಂದಿಗೆ ಎನ್‌.ಡಿ.ಎ ಸರ್ಕಾರ ಜಾರಿಗೆ ತರುತ್ತಿದೆ. ಸಂಕ್ಷಿಪ್ತವಾಗಿ ಇದಕ್ಕೆ ಅಮೃತ್‌ ಎಂದು ನಾಮಕರಣ ಮಾಡಲಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited