ನವದೆಹಲಿ : ನೆಸ್ಲೆ ಕಂಪನಿಯ ಅತ್ಯಂತ ಜನಪ್ರಿಯ ಮ್ಯಾಗಿ ನ್ಯೂಡಲ್ಸ್ ಮಾರಾಟವನ್ನು 15 ದಿನಗಳ ಕಾಲ ದೆಹಲಿ ಸರ್ಕಾರ ನಿಷೇಧಿಸಿದೆ.
ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಬುಧವಾರ ನಡೆದ ಮಹತ್ವದ ಸಭೆಯಲ್ಲಿ ಮ್ಯಾಗಿಯನ್ನು 15 ದಿನಗಳ ಕಾಲ ಮಾರಾಟ ಮಾಡದಂತೆ ನಿಷೇಧಿಸುವ ತೀರ್ಮಾನ ತೆಗೆದುಕೊಂಡಿದೆ.
ಮ್ಯಾಗಿ ನ್ಯೂಡಲ್ಸ್ ನಲ್ಲಿ ಹೆಚ್ಚಿನ ಪ್ರಮಾಣದ ಸೀಸ ಮತ್ತು ಗ್ಲುಟಾಮೇಟ್ ಮೋನೋಸೋಡಿಯಂ ಅಂಶ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಬುಧವಾರ ಈ ನಿರ್ಧಾರ ಕೈಗೊಂಡಿದೆ. ದೆಹಲಿಯ ಎಲ್ಲಾ ಮಾರಾಟ ಕೇಂದ್ರಗಳಲ್ಲೂ ಮ್ಯಾಗಿ ಮಾರಾಟಕ್ಕೆ ತಡೆಯೊಡ್ಡಲಾಗಿದೆ. ಮಂಗಳವಾರವಷ್ಟೇ ಕೇರಳ ರಾಜ್ಯ ಕೂಡಾ ಮ್ಯಾಗಿಗೆ ನಿಷೇಧ ಹೇರಿತ್ತು.
ಸ್ವಿಜರ್ಲ್ಯಾಂಡ್ ನ ಜನಪ್ರಿಯ ನೆಸ್ಲೆ ಕಂಪನಿಯ 13 ಮ್ಯಾಗಿ ಮಾದರಿಗಳ ಪೈಕಿ 10ರಲ್ಲಿ ಅಧಿಕ ಪ್ರಮಾಣ ಸೀಸದ ಅಂಶ ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ನಿಷೇಧ ಹೇರಲಾಗಿದೆ.
ಒಟ್ಟಿನಲ್ಲಿ ಮ್ಯಾಗಿ ನ್ಯೂಡಲ್ಸ್ ಗೆ ಇದೀಗ ದೇಶಾದ್ಯಂತ ನಿಷೇಧದ ಭೀತಿ ಎದುರಾಗಿದೆ. ಮೊದಲ ಹೆಜ್ಜೆಯಾಗಿ ಕೇರಳ ಸರ್ಕಾರ ಮ್ಯಾಗಿ ನ್ಯೂಡಲ್ಸ್ ಗೆ ನಿಷೇಧ ಹೇರಿತ್ತು.