Untitled Document
Sign Up | Login    
Dynamic website and Portals
  
June 3, 2015

ರಾಜ್ಯದಲ್ಲೂ ಮ್ಯಾಗಿ ನೂಡಲ್ಸ್ ಗೆ ನಿಷೇಧ

ರಾಜ್ಯದಲ್ಲೂ ಮ್ಯಾಗಿ ನೂಡಲ್ಸ್ ಗೆ ನಿಷೇಧ

ಬೆಂಗಳೂರು : ಸುರಕ್ಷತಾ ಗುಣಮಟ್ಟಕ್ಕೆ ಸಂಬಂಧಿಸಿದಂತೆ ದೇಶದ ವಿವಿಧೆಡೆ ಕಾನೂನು ಸಮಸ್ಯೆಗೆ ಸಿಲುಕಿರುವ ನೆಸ್ಲೆ ಕಂಪನಿಮ್ಯಾಗಿ ನೂಡಲ್ಸ್‌ ಅಪಾಯಕಾರಿ ಅಂಶಗಳನ್ನು ಹೊಂದಿದೆಯೇ ಎಂಬ ಬಗ್ಗೆ ಕರ್ನಾಟಕ ಸರ್ಕಾರವೂ ಪರೀಕ್ಷೆಗೆ ಮುಂದಾಗಿದ್ದು, ರಾಜ್ಯದಲ್ಲೂ ಮೂರು ದಿನಗಳ ತಾತ್ಕಾಲಿಕ ನಿಷೇಧ ಹೇರಲಾಗಿದೆ.

ಮ್ಯಾಗಿ ನೂಡಲ್‌ ಅಪಾಯಕಾರಿ ಮಟ್ಟದಲ್ಲಿ ಸೀಸದ ಅಂಶ ಹೊಂದಿದೆಯೇ ಎಂಬುದನ್ನು ಪತ್ತೆಹಚ್ಚಲು ಹಾಗೂ ಮೊನೊಸೋಡಿಯಂ ರಾಸಾಯನಿಕ ಹೊಂದಿದೆಯೇ ಎಂಬುದನ್ನು ಪರೀಕ್ಷೆ ನಡೆಸಲು ರಾಷ್ಟ್ರೀಯ ಮಾನ್ಯತೆ ಪಡೆದಿರುವ ಸರ್ಕಾರಿ ಪ್ರಯೋಗಾಲಯ ಮತ್ತು ಎರಡು ಖಾಸಗಿ ಪ್ರಯೋಗಾಲಯಕ್ಕೆ ಮ್ಯಾಗಿ ಉತ್ಪನ್ನಗಳ ಮಾದರಿಗಳನ್ನು ರಾಜ್ಯ ಆರೋಗ್ಯ ಇಲಾಖೆ ಕಳುಹಿಸಿದೆ. ಎರಡು ದಿನದಲ್ಲಿ ಪರೀಕ್ಷೆಯ ವರದಿ ನೀಡುವಂತೆ ಆರೋಗ್ಯ ಸಚಿವ ಯು.ಟಿ.ಖಾದರ್ ಪ್ರಯೋಗಾಲಯಗಳಿಗೆ ಸೂಚನೆ ನೀಡಿದ್ದಾರೆ.

ನೆಸ್ಲೆ ಸಂಸ್ಥೆಯ ಮ್ಯಾಗಿ ನ್ಯೂಡಲ್ಸ್ ತಿನಿಸುಗಳನ್ನು ಬಳಸಬಾರದು. ಹಾಗೆಯೇ
ಮಾರಾಟಗಾರರು ಕೂಡ ಮ್ಯಾಗಿ ಮಾರಾಟವನ್ನು ನಿಲ್ಲಿಸಬೇಕು. ಯಾವುದೇ ಕಾರಣಕ್ಕೂ ಅದನ್ನು ಉತ್ತೇಜಿಸಲು ಮುಂದಾಗಬಾರದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಮನವಿಯಲ್ಲಿ ತಿಳಿಸಿದ್ದಾರೆ.

ಮ್ಯಾಗಿ ನ್ಯೂಡಲ್ಸ್ ರಾಜ್ಯಕ್ಕೆ ಎಲ್ಲಿಂದ ಬರುತ್ತದೆ ಎಂದು ತಿಳಿದು ಅವುಗಳ ಮಾದರಿಗಳನ್ನು ಸಂಗ್ರಹಿಸಲು ಸೂಚಿಸಲಾಗಿದೆ. ಅವುಗಳನ್ನು ರಾಜ್ಯದ ಪ್ರಯೋಗಾಲಯ ಮಾತ್ರವಲ್ಲದೆ ರಾಷ್ಟ್ರೀಯ ಪ್ರಯೋಗಾಲಯಗಳಲ್ಲೂ ಪರೀಕ್ಷಿಸುವಂತೆ ಆದೇಶಿಸಲಾಗಿದೆ. ಇದರೊಂದಿಗೆ ಮೈಸೂರಿನ ಸಿಎಫ್ ಟಿಆರ್‍ಐ ಮತ್ತು ಎರಡು ರಾಷ್ಟ್ರೀಯ ಮಾನ್ಯತೆ ಪಡೆದ ಖಾಸಗಿ ಪ್ರಯೋಗಾಲ ಯಗಳಿಂದಲೂ ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಎಲ್ಲಾ ವರದಿಗಳು ಮೂರು ದಿನಗಳಲ್ಲಿ ಲಭ್ಯವಾಗಲಿದ್ದು, ವರದಿಯನ್ನು ಪರಿಶೀಲಿಸಿ ಸರ್ಕಾರ ಅದನ್ನು ನಿಷೇಧಿಸಬೇಕೇ, ಬೇಡವೇ ಎಂದು ತೀರ್ಮಾನಿಸುತ್ತದೆ. ಕೇರಳದಲ್ಲಿ ಮ್ಯಾಗಿ ನಿಷೇಧಿಸಲಾಗಿದೆ ಎಂದು ರಾಜ್ಯದಲ್ಲೂ ಏಕಾಏಕಿ ನಿಷೇಧಿಸಿದರೆ ಮುಂದೆ ನೆಸ್ಲೆ ಸಂಸ್ಥೆಯವರು ಸರ್ಕಾರದ ನಿರ್ಧಾರವನ್ನು ಕೋರ್ಟ್‍ನಲ್ಲಿ ಪ್ರಶ್ನಿಸಬಹುದು. ಆದ್ದರಿಂದ ವೈಜ್ಞಾನಿಕ ರೀತಿ ಯಲ್ಲಿ ಕ್ರಮಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Health

ಗವ್ಯ ಚಿಕಿತ್ಸಾ - ರಾಷ್ಟೀಯ ವಿಚಾರ ಸಂಕಿರಣ
  • ಗವ್ಯ ಚಿಕಿತ್ಸಾ - ರಾಷ್ಟೀಯ ವಿಚಾರ ಸಂಕಿರಣ
  • ಗವ್ಯ ಚಿಕಿತ್ಸಾ - ರಾಷ್ಟೀಯ ವಿಚಾರ ಸಂಕಿರಣ’ದ ಸಮಾರೋಪ ಸಮಾರಂಭ
  • ಉದ್ಯಾನ ವನದಲ್ಲಿ ಉದಯರಾಗ
  • ರಾಜ್ಯದಲ್ಲಿ ಆಹಾರ ಆಯೋಗ ರಚನೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited