Untitled Document
Sign Up | Login    
Dynamic website and Portals
  
June 3, 2015

ಗ್ರಾಮ ಪಂಚಾಯ್ತಿ ಚುನಾವಣೆ: 2ನೇ ಹಂತದಲ್ಲೂ ಶೇ.80ರಷ್ಟು ಮತದಾನ

ಬೆಂಗಳೂರು : ಅಭ್ಯರ್ಥಿಗಳ ಚಿಹ್ನೆ ಅದಲು-ಬದಲು, ಮತದಾನ ಬಹಿಷ್ಕಾರದಂತಹ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಎರಡನೇ ಹಂತದಲ್ಲಿ ರಾಜ್ಯದ 15 ಜಿಲ್ಲೆಗಳ 2,681 ಗ್ರಾಮ ಪಂಚಾಯ್ತಿಗಳಿಗೆ ಶಾಂತಿಯುತ ಮತದಾನ ನಡೆದಿದೆ.

ಪಂಚಾಯ್ತಿ ಚುನಾವಣೆಗಳಲ್ಲಿ ಇದೇ ಮೊದಲ ಬಾರಿ ಜಾರಿ ಬಂದಿರುವ ಕಡ್ಡಾಯ ಮತದಾನ ಎರಡನೇ ಹಂತದಲ್ಲೂ ಪರಿಣಾಮ ಬೀರಿಲ್ಲ. ಚುನಾವಣಾ ಆಯೋಗಕ್ಕೆ ಬಂದಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಈ ಹಂತದಲ್ಲೂ ಮೊದಲ ಹಂತದಂತೆ ಶೇ.80ರಷ್ಟು ಮಾತ್ರ ಮತದಾನವಾಗಿದೆ.

ಎರಡನೇ ಹಂತದಲ್ಲಿ 2,681 ಗ್ರಾಮ ಪಂಚಾಯ್ತಿಗಳ 41,211 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 1,13,841 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಿದ್ದಾರೆ. 2,681 ಗ್ರಾಮ ಪಂಚಾಯ್ತಿಗಳಲ್ಲಿ ಒಟ್ಟು 45,755 ಕ್ಷೇತ್ರಗಳಿದ್ದು, 320 ಸ್ಥಾನಗಳಿಗೆ ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ. 4,224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವಿವಿಧ ಕಾರಣಗಳಿಂದ ಮತದಾನ ಸ್ಥಗಿತಗೊಂಡಿದ್ದ ಎರಡು ಗ್ರಾಮ ಪಂಚಾಯ್ತಿಗಳ 5 ಕ್ಷೇತ್ರಗಳಿಗೆ ಗುರುವಾರ (ಜೂ.4) ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶಿಸಿದೆ. ಯಾದಗಿರಿ ಜಿಲ್ಲೆ, ಯಾದಗಿರಿ ತಾಲೂಕು ಚಪೇಟ್ಲಾ ಗ್ರಾಮ ಪಂಚಾಯ್ತಿಯ ಚಪೇಟ್ಲಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 280 ಮತ್ತು 281, ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಹೊಳವನಹಳ್ಳಿ ಗ್ರಾಮ ಪಂಚಾಯ್ತಿಯ ಹೊಳವನಹಳ್ಳಿ ಕ್ಷೇತ್ರದ ಮತಗಟ್ಟೆಗಳಾದ 73, 74, 76, 78ರಲ್ಲಿ ಗುರುವಾರ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮರುಮತದಾನ ನಡೆಯಲಿದೆ. ಆ ವೇಳೆ ಮತದಾರರ ಬಲಗೈ ಹೆಬ್ಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited