Untitled Document
Sign Up | Login    
Dynamic website and Portals
  
June 1, 2015

ಸಿಇಟಿ 2015 ಫಲಿತಾಂಶ ಪ್ರಕಟ

ಬೆಂಗಳೂರು : 2015-16ನೇ ಸಾಲಿನ ವೃತ್ತಿ ಶಿಕ್ಷಣ ಕೋರ್ಸುಗಳ ಸರ್ಕಾರಿ ಕೋಟಾದ ಸೀಟುಗಳ ಪ್ರವೇಶಕ್ಕೆ ಮೇ 12, 13ರಂದು ನಡೆದಿದ್ದ ಸಿಇಟಿ ಫಲಿತಾಂಶ ಪ್ರಕಟವಾಗಿದೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಸಿಇಟಿ ಫಲಿತಾಂಶ ಪ್ರಕಟಿಸಿದರು.

ವೈದ್ಯ, ದಂತ ವೈದ್ಯ, ಇಂಜಿನಿಯರಿಂಗ್ ವಿಭಾಗದ ಸಿಇಟಿ ಫಲಿತಾಂಶ ಪ್ರಕಟವಾಗಿದ್ದು, ಸಿಇಟಿಯಲ್ಲಿ ಈ ಬಾರಿ ವಿದ್ಯಾರ್ಥಿಗಳಿಗೆ 8 ಗ್ರೇಸ್ ಮಾರ್ಕ್ ನೀಡಲಾಗಿದೆ. ಅಲ್ಲದೇ 5 ಟಾಪರ್ಸ್ ಗೆ ಉಚಿತ ಸೀಟು ನೀಡಲಾಗುವುದು ಎಂದು ಘೋಷಿಸಿದರು.

ಮೆಡಿಕಲ್ ನಲ್ಲಿ ಪ್ರಿಯಾ ನರ್ವಾಲ್ ಎಂಬ ವಿದ್ಯಾರ್ಥಿನಿ ಮೊದಲ ಸ್ಥಾನ ಗಳಿಸಿದ್ದು, ಎಲ್.ಮಾನಸ 2ನೇ ಸ್ಥಾನ ಮತ್ತು ಟಿ ಪಲ್ಲವಿಗೆ 3ನೇ ಸ್ಥಾನ ಲಭಿಸಿದೆ. ಜೂನ್ 13ರಿಂದ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗಲಿದೆ.

ಈ ಹಿಂದೆ ಸಿಇಟಿ ಫ‌ಲಿತಾಂಶವನ್ನು ಮೇ 26ರಂದು ಪ್ರಕಟಿಸುವುದಾಗಿ ಹೇಳಲಾಗಿತ್ತು. ಆದರೆ, ದ್ವಿತೀಯ ಪಿಯುಸಿ ಫ‌ಲಿತಾಂಶ ಗೊಂದಲದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಹೆತ್ತವ‌ರ ಒತ್ತಾಯದ ಮೇಲೆ ಸಿಇಟಿ ಫ‌ಲಿತಾಂಶವನ್ನು ಜೂ. 1ಕ್ಕೆ ಮುಂದೂಡಲಾಗಿತ್ತು. ಒಟ್ಟು 1.57 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited