Untitled Document
Sign Up | Login    
Dynamic website and Portals
  
May 30, 2015

ಮ್ಯಾಗ್ಗಿ ತಯಾರಕ ನೆಸ್ಲೆ ಕಂಪನಿ ಮೇಲೆ ದೂರು ದಾಖಲಿಸಲು ಅನುಮತಿ

ಸಂಕಷ್ಟದಲ್ಲಿ ಸಿಲುಕಿರುವ ಮ್ಯಾಗ್ಗಿ..  (ಸಂಗ್ರಹ ಚಿತ್ರ) ಸಂಕಷ್ಟದಲ್ಲಿ ಸಿಲುಕಿರುವ ಮ್ಯಾಗ್ಗಿ.. (ಸಂಗ್ರಹ ಚಿತ್ರ)

ಬಾರಾಬಂಕಿ, ಯು.ಪಿ : '2 ನಿಮಿಷಗಳಲ್ಲಿ ನೂಡಲ್' ಖ್ಯಾತಿಯ ನೆಸ್ಲೆ ಇಂಡಿಯಾ ಕಂಪನಿಗೆ ಸಂಕಷ್ಟ ಹೆಚ್ಚಿದೆ. ಈ ಸಂಸ್ಥೆ ತಯಾರಿಸುವ ಮ್ಯಾಗ್ಗಿ ನೂಡಲ್ ಇತ್ತೀಚೆಗೆ ನಡೆಸಲಾದ ಆಹಾರ ಸುರಕ್ಷತಾ ಪರೀಕ್ಷೆಯಲ್ಲಿ ವಿಫಲಗೊಂಡಿದ್ದು, ಉತ್ತರ ಪ್ರದೇಶ ಸರಕಾರ ಈ ನಿಟ್ಟಿನಲ್ಲಿ ಕಂಪನಿ ವಿರುದ್ಧ ಕಾನೂನು ಕ್ರಮ ಜರುಗಿಸಲು ನಿರ್ಧರಿಸಿದೆ.

ಆಹಾರ ಸುರಕ್ಷತೆ ಮತ್ತು ಔಷಧ ಅಡಳಿತ ಸಂಸ್ಥೆ (Food Safety and Drug Administration - FSDA) ಕಂಪನಿ ವಿರುದ್ಧ ನ್ಯಾಯಾಲಯದಲ್ಲಿ ಕಂಪನಿ ಹಾಗೂ ಇನ್ನು ಐವರ ವಿರುದ್ಧ ದೂರು ದಾಖಲಿಸಲು ಒಪ್ಪಿಗೆ ನೀಡಿದ್ದು ಇನ್ನೊಂದೆರಡು ದಿನಗಳಲ್ಲೇ ಉತ್ತರ ಪ್ರದೇಶದ ಬಾರಾಬಂಕಿಯ ಸ್ಥಳೀಯ ನ್ಯಾಯಾಲಯದಲ್ಲಿ ದೂರು ಸಲ್ಲಿಸಲಾಗುವುದು ಎಂದು ತಿಳಿದು ಬಂದಿದೆ.

ಎಫ್.ಎಸ್.ಡಿ.ಎ ಕಮಿಷನರ್ ಪಿ.ಪಿ.ಸಿಂಗ್ ಅವರು ನೆಸ್ಲೆ ಕಂಪನಿ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ದೂರು ದಾಖಲಿಸಲು ಒಪ್ಪಿಗೆ ನೀಡಿದ್ದಾರೆ ಎಂದು ಬಾರಾಬಂಕಿಆಹಾರ ಸುರಕ್ಷತಾ ಅಧಿಕಾರಿ ವಿ.ಕೆ.ಪಾಂಡೆ ಹೇಳಿದ್ದಾರೆ.

'ನಿನ್ನೆಯಷ್ಟೇ ಈ ಪ್ರಯುಕ್ತ ಒಪ್ಪಿಗೆ ಪತ್ರ ದೊರಕಿದ್ದು, ಇಂದು ಅಥವಾ ಮುಂದಿನ ವಾರದ ಮೊದಲಲ್ಲಿ ದೂರು ದಾಖಲಿಸಬಹುದಾಗಿದೆ' ಎಂದು ಪಾಂಡೆ ಶನಿವಾರ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಯು.ಪಿ ಯ ನಗಲ್ ಕಲಾನ್ ಕೈಗಾರಿಕಾ ವಲಯದಲ್ಲಿರುವ ನೆಸ್ಲೆ ಕಂಪನಿಯ ಘಟಕದ ವಿರುದ್ಧ, ನೆಸ್ಲೆ ಇಂಡಿಯಾ ಲಿಮಿಟೆಡ್ ಹಾಗೂ ಈಸಿ ಡೇ ಔಟ್ಲೆಟ್ ಗಳೂ ಸೇರಿದಂತೆ ಸಂಬಂಧಿಸಿದ ಉಳಿದವರ ಮೇಲೂ ದೂರು ದಾಖಲಿಸಲಾಗುವುದು ಎಂದು ಪಾಂಡೆ ಹೇಳಿದ್ದಾರೆ.

ಇತ್ತೀಚೆಗ್ ನೆಸ್ಲೆ ತಯಾರಿಸುವ ಮ್ಯಾಗ್ಗಿ ನೂಡಲ್ ಸ್ಯಾಂಪಲ್ಲುಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ನಿಗದಿತ ಮಿತಿಗಿಂತಲೂ ಅತ್ಯಧಿಕ ಪ್ರಮಾಣದಲ್ಲಿ ಸೀಸ ಮತ್ತು ಮೋನೋಸೋಡಿಯಮ್ ಗ್ಲುಟಮೇಟ್ ಅಪಾಯಕಾರಿ ರಾಸಾಯನಿಕಗಳು ಇರುವುದು ಕಂಡುಬಂದಿತ್ತು. ಇವೆರಡೂ ಆರೋಗ್ಯಕ್ಕೆ ಹಾನಿಕರವಾಗಿದ್ದು, ಬಹುತೇಕ ಮಕ್ಕಳೇ ತಿನ್ನುವ ಮ್ಯಾಗ್ಗಿಯಿಂದ ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದಾಗಿದೆ.

ಅಧಿಕಾರಿಗಳು ಈ ಸ್ಯಾಂಪಲ್ಲುಗಳನ್ನು ಬಾರಾಬಂಕಿಯಲ್ಲಿರುವ ಈಸಿ ಡೇ ಎಂಬ ಸ್ಥಳೀಯ ಅಂಗಡಿಯಿಂದ ಪಡೆದು ಅದನ್ನು ಪರೀಕ್ಷೆಗಾಗಿ ಕಳುಹಿಸಿದ್ದರು. ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಅತಂಕಕಾರಿ ಫಲಿತಾಂಶ ಹೊರಬಂದಿದ್ದು, ಮೇಲೆ ಉಲ್ಲೇಖಿಸಿದ ರಾಸಾಯನಿಕಗಳು ನಿಗದಿತ ಮಿತಿಗಿಂತ 17 ಪಟ್ಟು ಹೆಚ್ಚಿರುವುದು ಬಯಲಾಯಿತು. ಇದು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿಯಾದ ಪ್ರಮಾಣ ಎನ್ನಲಾಗಿದೆ.

ನೆಸ್ಲೆ ಸಂಸ್ಥೆ ಈ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಲು ನಿರಾಕರಿಸಿದೆ.

ಕೇಂದ್ರ ಸರಕಾರದ ಬಳಕೆದಾರರ ವ್ಯವಹಾರ ಸಚಿವಾಲವೂ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಗಮನ ಹರಿಸುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ ಸೂಚಿಸಿದೆ. ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್, ಈ ಬಗ್ಗೆ ದೂರು ದಾಖಲಾದರೆ ತಪ್ಪಿತಸ್ಥರ (ಕಂಪನಿಯೂ ಸೇರಿದಂತೆ) ವಿರುದ್ಧ ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಪ್ರಾಧಿಕಾರ National Consumer Disputes Redressal Commission (NCDRC) ದಲ್ಲಿ ಸಾಮೂಹಿಕ ಮೊಕದ್ದಮೆ (ಕ್ಲಾಸ್ ಆಕ್ಷನ್ ಸೂಟ್) ಆರಂಭಿಸಬಹುದಾಗಿದೆ ಎಂದಿದ್ದಾರೆ.

ಒಟ್ಟಿನಲ್ಲಿ ಆರೋಗ್ಯದಾಯಕ, ಪುಷ್ಟಿದಾಯಕ, ರುಚಿಕರ ಎಂದೆಲ್ಲಾ ಬೊಗಳೆ ಬಿಡುತ್ತಾ ಟೀವಿಯಲ್ಲಿ ದಿನವಿಡೀ ಜಾಹೀರಾತು ನೀಡುವ ಇಂಥ ಹಲವಾರು ಆಹಾರ ಪದಾರ್ಥಗಳ ತಯಾರಕರು ಗ್ರಾಹಕರ, ಅದರಲ್ಲೂ ವಿಶೇಷವಾಗಿ ಮಕ್ಕಳ ಆರೋಗ್ಯದ ಮೇಲೆ ಚೆಲ್ಲಾಟವಾಡುವುದಕ್ಕೆ ಇನ್ನಾದರೂ ಬ್ರೇಕ್ ಬೀಳಬಹುದೇನೋ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Health

ಗವ್ಯ ಚಿಕಿತ್ಸಾ - ರಾಷ್ಟೀಯ ವಿಚಾರ ಸಂಕಿರಣ
  • ಗವ್ಯ ಚಿಕಿತ್ಸಾ - ರಾಷ್ಟೀಯ ವಿಚಾರ ಸಂಕಿರಣ
  • ಗವ್ಯ ಚಿಕಿತ್ಸಾ - ರಾಷ್ಟೀಯ ವಿಚಾರ ಸಂಕಿರಣ’ದ ಸಮಾರೋಪ ಸಮಾರಂಭ
  • ಉದ್ಯಾನ ವನದಲ್ಲಿ ಉದಯರಾಗ
  • ರಾಜ್ಯದಲ್ಲಿ ಆಹಾರ ಆಯೋಗ ರಚನೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited