Untitled Document
Sign Up | Login    
Dynamic website and Portals
  
May 29, 2015

ಅಧಿಕಾರಿಗಳ ನೇಮಕ ವಿವಾದ: ಕೇಜ್ರಿವಾಲ್ ಹೈಕೋರ್ಟ್ ಗೆ, ಕೇಂದ್ರ ಸುಪ್ರೀಂಗೆ ಮೊರೆ

ನವದೆಹಲಿ : ದೆಹಲಿಯಲ್ಲಿ ಲೆಫ್ಟಿನೆಂಟ್ ಗವರ್ನರ್‌ ಗೆ ಅಧಿಕಾರಗಳ ನೇಮಕ ಮತ್ತು ವರ್ಗಾವಣೆ ಮಾಡುವ ಅಧಿಕಾರ ಇದೆ ಎಂದು ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ವಿರುದ್ಧ ಆಮ್ ಆದ್ಮಿ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿದೆ.

ಮತ್ತೊಂದೆಡೆ ದೆಹಲಿ ಸಚಿವ ಸಂಪುಟದ ಸದಸ್ಯರ ನೆರವು ಹಾಗೂ ಸಲಹೆಯಂತೆ ಉಪರಾಜ್ಯಪಾಲರು ನಡೆದುಕೊಳ್ಳಬೇಕು. ಜನರ ತೀರ್ಪಿಗೆ ಬೆಲೆ ಕೊಡಬೇಕು ಎಂದು ದೆಹಲಿ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಕದತಟ್ಟಿದೆ.

ಕೇಂದ್ರ ಗೃಹ ಸಚಿವಾಲಯದ ಅಧಿಸೂಚನೆ ವಿರುದ್ಧ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ದೆಹಲಿ ಸರ್ಕಾರ ಮೇಲ್ಮನವಿ ಸಲ್ಲಿಸಿದ್ದು, ನ್ಯಾಯಮೂರ್ತಿ ಬಿ.ಡಿ.ಅಹ್ಮದ್‌ ಮತ್ತು ನ್ಯಾಯಮೂರ್ತಿ ಸಂಜೀವ್‌ ಸಚ್‌ ದೇವ್‌ ಅವರನ್ನೊಳಗೊಂಡ ಪೀಠ ಮೇ 29ರಂದು ಅರ್ಜಿಯ ವಿಚಾರಣೆ ನಡೆಸಲಿದೆ.

ಲೆಫ್ಟಿನೆಂಟ್ ಗವರ್ನರ್ ನಜೀಬ್‌ ಜಂಗ್‌ ಅವರು, ಶಕುಂತಲಾ ಗ್ಯಾಮ್ಲಿನ್‌ ಅವರನ್ನು ದೆಹಲಿ ಸರ್ಕಾರದ ಪ್ರಭಾರ ಮುಖ್ಯ ಕಾರ್ಯದರ್ಶಿ ಆಗಿ ನೇಮಿಸಿದ್ದರು. ಆದರೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಸರ್ಕಾರದ ಕಾರ್ಯಗಳಲ್ಲಿ ಜಂಗ್‌ ಅವರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಕೇಜ್ರಿವಾಲ್ ಹಾಗೂ ಜಂಗ್ ನಡುವಿನ ಸಂಘರ್ಷ ಕೇಂದ್ರ ಸರ್ಕಾರ, ರಾಷ್ಟ್ರಪತಿ ಭವನಕ್ಕೂ ತಲುಪಿತ್ತು. ಈ ಮಧ್ಯೆ, ಯಾವುದೇ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮತ್ತು ನೇಮಕ ಮಾಡುವ ಅಧಿಕಾರ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರಿಗೆ ಇದೆ ಎಂದು ಕೇಂದ್ರ ಗೃಹಸಚಿವಾಲಯ ಎಎಪಿ ಸರ್ಕಾರಕ್ಕೆ ಕಾರ್ಯಾದೇಶ ನೀಡಿತ್ತು.

ಜನರಿಂದ ನೇರವಾಗಿ ಆಯ್ಕೆಯಾಗಿರುವ ದೆಹಲಿ ಸಚಿವ ಸಂಪುಟದ ಸದಸ್ಯರ ನೆರವು ಹಾಗೂ ಸಲಹೆಯಂತೆ ಉಪರಾಜ್ಯಪಾಲರು ನಡೆದುಕೊಳ್ಳಬೇಕು. ಜನರ ತೀರ್ಪಿಗೆ ಬೆಲೆ ಕೊಡಬೇಕು. ಉಪರಾಜ್ಯಪಾಲರ ಪರವಾಗಿ ಕೇಂದ್ರ ಸರ್ಕಾರ ಹೊರಡಿಸಿರುವ ಕಾರ್ಯಾದೇಶದ ಬಗ್ಗೆ ಶಂಕೆ ಮೂಡುತ್ತಿದೆ ಎಂದು ದೆಹಲಿ ಹೈಕೋರ್ಟ್‌ ಕಳೆದ ಸೋಮವಾರ ಮಹತ್ವದ ಅಭಿಪ್ರಾಯಪಟ್ಟಿತ್ತು. ಅಲ್ಲದೆ ದೆಹಲಿಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ದೆಹಲಿ ಪೊಲೀಸರನ್ನು ಬಂಧಿಸುವ ಅಧಿಕಾರ ಇದೆ ಎಂದು ಆದೇಶ ನೀಡಿತ್ತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited