Untitled Document
Sign Up | Login    
Dynamic website and Portals
  
May 28, 2015

ಗ್ರಾಮ ಪಂಚಾಯ್ತಿ ಚುನಾವಣೆ: ಮೇ 29ರಂದು ಮೊದಲ ಹಂತದ ಮತದಾನ

ಬೆಂಗಳೂರು : ಗ್ರಾಮ ಪಂಚಾಯ್ತಿಯ ಮೊದಲ ಹಂತದ ಚುನಾವಣೆಯ ಮತದಾನ ಮೇ 29ರಂದು ರಾಜ್ಯದ 15 ಜಿಲ್ಲೆಗಳಲ್ಲಿ ನಡೆಯಲಿದೆ. ಕಡೆಗಳಿಗೆಯ ಬಿರುಸಿನ ಚುನಾವಣೆ ಪ್ರಚಾರದಲ್ಲಿ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ತೊಡಗಿದ್ದಾರೆ.

ಪ್ರಚಾರದ ಭರಾಟೆ ನಿರ್ಣಾಯಕ ಘಟ್ಟ ತಲುಪಿದ್ದು, ಮತದಾರರನ್ನು ತಮ್ಮತ್ತ ಸೆಳೆಯಲು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ.ಒಟ್ಟು 43,579 ಸದಸ್ಯ ಸ್ಥಾನಗಳಿಗೆ 1,20,663 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ನಾಳೆ ಅವರ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ.

ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಆಯಾ ಮತಗಟ್ಟೆಗಳಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ 3,156 ಗ್ರಾಪಂಗಳಿಗೆ ಮತದಾನ ನಡೆಯಲಿದೆ.

48,621 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 554 ಸ್ಥಾನಗಳಿಗೆ ನಾಮಪತ್ರೆಗಳೇ ಸಲ್ಲಿಕೆಯಾಗಿಲ್ಲ. 4,460 ಸದಸ್ಯ ಸ್ಥಾನಗಳಿಗೆ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದೆ.

ಗ್ರಾಮ ಪಂಚಾಯ್ತಿ ಚುನಾವಣೆಗೆ ಸೂಕ್ತ ಬಿಗಿ ಭದ್ರತೆಯನ್ನು ಒದಗಿಸಲಾಗಿದ್ದು, ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಹೆಡ್‌ ಕಾನ್ಸ್‌ ಟೆಬಲ್ ಹಾಗೂ ಕಾನ್ಸ್‌ ಟೆಬಲ್ ನಿಯೋಜಿಸಲಾಗಿದೆ. ಸೂಕ್ಷ್ಮ ಮತಗಟ್ಟೆಗಳಿಗೆ ಕಾನ್ಸ್‌ ಟೆಬಲ್ ಜತೆಗೆ ಒಬ್ಬೊಬ್ಬ ಹೋಮ್‌ಗಾರ್ಡ್ಸ್‌ನನ್ನು ನಿಯೋಜಿಸಲಾಗಿದೆ. ಸಾಮಾನ್ಯ ಮತಗಟ್ಟೆಗಳಿಗೆ ಒಬ್ಬ ಕಾನ್ಸ್‌ಟೆಬಲ್‌ನನ್ನು ನಿಯೋಜಿಸಲಾಗಿದೆ. ಅಲ್ಲದೆ, 10 ಮತಗಟ್ಟೆಗಳಿಗೆ ಒಬ್ಬ ಸಬ್‌ ಇನ್ಸ್‌ ಪೆಕ್ಟರ್‌ ಗೆ ಭದ್ರತೆಯ ಹೊಣೆಗಾರಿಕೆಯನ್ನು ವಹಿಸಲಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited