Untitled Document
Sign Up | Login    
Dynamic website and Portals
  
May 27, 2015

ಕಪ್ಪುಹಣ: ಮತ್ತೆ ಮೂವರು ಭಾರತೀಯರ ಹೆಸರು ಬಹಿರಂಗ

ಸ್ವಿಜರ್ಲೆಂಡ್‌ : ಸ್ವಿಸ್‌ ಬ್ಯಾಂಕುಗಳಲ್ಲಿ ಕಪ್ಪುಹಣ ಇಟ್ಟಿರುವ ಕಾಳಧನಿಕರ ಹೆಸರುಗಳನ್ನು ಒಂದೊಂದಾಗಿ ಪ್ರಕಟಿಸುತ್ತಿರುವ ಸ್ವಿಜರ್ಲೆಂಡ್‌ ಸರ್ಕಾರ ಮತ್ತೆ ಮೂವರು ಭಾರತೀಯರ ಹೆಸರುಗಳನ್ನು ಗೆಜೆಟ್‌ ಮೂಲಕ ಪ್ರಕಟಿಸಿದೆ.

ಇದರಲ್ಲಿ ಹರಿಯಾಣಾ ಮೂಲದ ಕುಖ್ಯಾತ ಮದ್ಯದ ದೊರೆ ದಿ.ಪಾಂಟಿ ಚಡ್ಡಾನ ಅಳಿಯ ಗುರ್ಜೀತ್‌ ಸಿಂಗ್‌ ಕೋಚ್ಚರ್‌, ಮುಂಬೈ ಮೂಲದ ಉದ್ಯಮಿ ಯಶ್‌ ಬಿರ್ಲಾ ಮತ್ತು ದಿಲ್ಲಿ ಮೂಲದ ಮಹಿಳಾ ಉದ್ಯಮಿ ಋತಿಕಾ ಶರ್ಮಾ ಸೇರಿದ್ದಾರೆ.

ಎರಡು ದಿನಗಳ ಹಿಮ್ದಷ್ಟೇ ಸ್ವಿಸ್‌ ಸರ್ಕಾರ ಸ್ನೇಹಲತಾ ಸಾಹಿ ಹಾಗೂ ಸಂಗೀತಾ ಸಾಹಿ ಎಂಬುವರ ಹೆಸರನ್ನು ಬಹಿರಂಗಪಡಿಸಿತ್ತು. ಈಗ ಮತ್ತೆ ಮೂವರ ಹೆಸರನ್ನು ಘೋಷಿಸುವುದರೊಂದಿಗೆ ಒಟ್ಟಾರೆ ಐವರು ಭಾರತೀಯರ ಹೆಸರನ್ನು ಬಹಿರಂಗಪಡಿಸಿದಂತಾಗಿದೆ. ಈ ಹಿಂದೆ ಬಿರ್ಲಾ ಹೆಸರು ಸ್ವಿಸ್‌ ಎಚ್‌ಎಸ್‌ಬಿಸಿ ಬ್ಯಾಂಕಿಂದ ಸೋರಿಕೆಯಾಗಿದ್ದ ಪಟ್ಟಿಯಲ್ಲೂ ಇತ್ತು. ಆದರೆ ಇವರು ಎಷ್ಟು ಹಣ ಹೊಂದಿದ್ದಾರೆ ಎಂಬ ವಿವರವನ್ನು ಸ್ವಿಸ್‌ ಸರ್ಕಾರ ನೀಡಿಲ್ಲ.

ಇದೇ ವೇಳೆ ತನ್ನಲ್ಲಿರುವ ಮಾಹಿತಿಯನ್ನು ಭಾರತ ಸರ್ಕಾರದ ಜತೆ ಹಂಚಿಕೊಳ್ಳಬಾರದು ಎಂದು ಬಯಸುವಿರೇ ಆದಲ್ಲಿ 30 ದಿನದೊಳಗೆ ಸ್ವಿಜರ್ಲೆಂಡ್‌ ನ‌ ಕೇಂದ್ರೀಯ ಆಡಳಿತಾತ್ಮಕ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವಂತೆ ಇವರಿಗೆ ಸ್ವಿಜರ್ಲೆಂಡ್‌ ಸರ್ಕಾರ ಸೂಚಿಸಿದೆ. ಸ್ವಿಜರ್ಲೆಂಡ್‌ ನ‌ ಫೆಡರಲ್‌ ಗೆಜೆಟ್‌ ನಲ್ಲಿ ಈ ತಿಂಗಳಲ್ಲಿ ಈವರೆಗೆ 40 ಮಂದಿಯ ಹೆಸರನ್ನು ಬಹಿರಂಗ ಪಡಿಸಲಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited