Untitled Document
Sign Up | Login    
Dynamic website and Portals
  
May 21, 2015

ನೇಪಾಳ ಭೂಕಂಪ: ಭಾರತದ ರಕ್ಷಣಾ ಕಾರ್ಯಾಚರಣೆ ಶ್ಲಾಘಿಸಿದ ಅಮೆರಿಕ

ವಾಷಿಂಗ್ಟನ್ : ನೇಪಾಳದಲ್ಲಿ ಸಂಭವಿಸಿದ್ದ ಭೂಕಂಪಕ್ಕೆ ಭಾರತ ನೀಡಿದ್ದ ಗಮನಾರ್ಹ ನೆರವನ್ನು ಶ್ಲಾಘಿಸಿರುವ ಅಮೆರಿಕಾ, ಭಾರತದ ವಿಪತ್ತು ನಿರ್ವಹಣಾ ಸಾಮರ್ಥ್ಯವನ್ನು ಅತ್ಯಾಧುನಿಕ ಮತ್ತು ಸುಧಾರಿತ ಎಂದು ಬಣ್ಣಿಸಿದೆ.

ನೇಪಾಳದ ಭೂಕಂಪದ ಸಂತ್ರಸ್ತರನ್ನು ರಕ್ಷಿಸಲು ಕೈಗೊಂಡ ರಕ್ಷಣಾ ಕಾರ್ಯಾಚರಣೆ, ಭಾರತ ವಿಪತ್ತು ನಿರ್ವಹಣೆಯಲ್ಲಿ ಅದ್ಭುತ ಸಾಮರ್ಥ್ಯ ಹೊಂದಿದ್ದು, ಸುಧಾರಿತವಾಗಿದೆ ಎಂಬುದು ಸ್ಪಷ್ಟಪಡಿಸಿದೆ ಎಂದು ಅಮೇರಿಕಾ ಕಾಂಗ್ರೆಸ್ ನ ಸಭೆಯಲ್ಲಿ ದಕ್ಷಿಣ ರಾಜ್ಯದ ಸಹಾಯಕ ಕಾರ್ಯದರ್ಶಿ ನಿಶಾ ದೇಸಾಯಿ ಬಿಸ್ವಾಲ್ ತಿಳಿಸಿದ್ದಾರೆ.

ವಿಪತ್ತು ನಿರ್ವಣೆಯಲ್ಲಿ ಭಾರತೀಯ ಸೇನೆ ಕೈಗೊಂಡ ಕಾರ್ಯಾಚರಣೆ ಅಮೇರಿಕಾ ಹೆಮ್ಮೆ ಪಡುವಂತಹದ್ದು ಎಂದಿರುವ ನಿಶಾ ದೇಸಾಯಿ, ವಿಪತ್ತು ನಿರ್ವಹಣೆಯಲ್ಲಿ ಜಾಗತಿಕ ಮಟ್ಟದಲ್ಲಿ ಸಹಕಾರ ಮತ್ತು ಪ್ರಾದೇಶಿಕ ಪ್ರತಿಸ್ಪಂದನೆಯನ್ನು ಮತ್ತಷ್ಟು ಉತ್ತಮಗೊಳಿಸಬೇಕಿದೆ ಎಂದು ಅಭಿಪ್ರಾಪಟ್ಟಿದ್ದಾರೆ.

ಪ್ರಕೃತಿ ವಿಕೋಪ ಸಂಭವಿಸಿದರೆ, ತಮ್ಮ ಸ್ವಂತ ವಿಪತ್ತು ನಿರ್ವಹಣಾ ದಳವನ್ನು ಅವಲಂಬಿಸಿದಂತೆ ನೆರೆ ರಾಷ್ಟ್ರಗಳು ಭಾರತದ ನೆರವನ್ನು ಅವಲಂಬಿಸುತ್ತಾರೆ. ಭಾರತದ ವಿಪತ್ತು ನಿರ್ವಹಣೆ ಆ ಸಾಮರ್ಥ್ಯವನ್ನು ಹೊಂದಿದೆ. ಇತ್ತೀಚೆಗಷ್ಟೇ ಒರಿಸ್ಸಾದಲ್ಲಿ ಉಂಟಾದ ಚಂಡಮಾರುತದಲ್ಲಿ, ವಿಪತ್ತು ನಿರ್ವಹಣಾ ದಳ ಯಶಸ್ವೀ ಕಾರ್ಯಾಚರಣೆ ನಡೆಸಿದ್ದರ ಪರಿಣಾಮ ಅತ್ಯಂತ ಕಡಿಮೆ ಪ್ರಾಣಹಾನಿ ಸಂಭವಿಸಿತ್ತು. ಇದೂ ಸಹ ಭಾರತದ ಸಾಮರ್ಥ್ಯಕ್ಕೆ ಮತ್ತೊಂದು ಉದಾಹರಣೆ ಎಂದು ನಿಶಾ ದೇಸಾಯಿ ಅಮೆರಿಕಾದ ಕಾಂಗ್ರೆಸ್ ಸದಸ್ಯರಿಗೆ ತಿಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited