Untitled Document
Sign Up | Login    
Dynamic website and Portals
  
May 18, 2015

42 ವರ್ಷಗಳಿಂದ ಕೋಮಾಲ್ಲಿದ್ದ ಅರುಣಾ ಶಾನಭಾಗ್ ನಿಧನ

೪೨ ವರ್ಷಗಳಿಂದ ಕೋಮಾದಲ್ಲಿದ್ದ ಅರುಣಾ ಶಾನಭಾಗ್ ೪೨ ವರ್ಷಗಳಿಂದ ಕೋಮಾದಲ್ಲಿದ್ದ ಅರುಣಾ ಶಾನಭಾಗ್

ಮುಂಬೈ : ಕಳೆದ 42 ವರ್ಷಗಳ ಹಿಂದೆ ಅತ್ಯಾಚಾರ ಹಾಗೂ ಹಲ್ಲೆಗೊಳಗಾಗಿ ಕೋಮಾದಲ್ಲಿದ್ದ ಉತ್ತರ ಕನ್ನಡ ಜಿಲ್ಲೆಯ ನರ್ಸ್ ಅರುಣಾ ಶಾನಭಾಗ್ ಮುಂಬೈನ ಕೆಇಎಂ (ಕಿಂಗ್ ಎಡ್ವರ್ಡ್ ಮೆಮೋರಿಯಲ್)ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಆಸ್ಪತ್ರೆಯ ವೈದ್ಯರು ಖಚಿತಪಡಿದ್ದಾರೆ.

ಕಳೆದ ಮೂರು ದಿನಗಳಿಂದ ಅರುಣಾ ಶಾನಭಾಗ್ ನಿಮೋನಿಯಾದಿಂದ ಬಳಲುತ್ತಿದ್ದು, ಉಸಿರಾಡಲೂ ತೊಂದರೆ ಅನುಭವಿಸುತ್ತಿದ್ದಾರೆ. ಅರುಣಾ ಸ್ಥಿತಿ ಗಂಭೀರವಾಗಿದೆಯಾದರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ನಿಮೋನಿಯಾದಿಂದಾಗಿ ಆಕೆಯ ಶ್ವಾಸಕೋಶಗಳು ಶೇ.65ರಷ್ಟು ಆಮಜನಕವನ್ನು ತೆಗೆದುಕೊಳ್ಳಲು ಶಕ್ತವಾಗಿತ್ತು ಎಂದು ವೈದ್ಯರು ಹೇಳಿದ್ದರು.

ಉತ್ತರ ಕನ್ನಡದ ಹಳದಿಪುರದವರಾದ ಅರುಣಾ ಶಾನಭಾಗ್, ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಜೂನಿಯರ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. 1973, ನ.27ರಂದು ಅದೇ ಆಸ್ಪತ್ರೆಯ ವಾರ್ಡ್ ಬಾಯ್ ಸೋಹನ್ ಲಾಲ್ ಬಾರ್ತಾ, ಅರುಣಾಮೇಲೆ ಅತ್ಯಾಚಾರ ನಡೆಸಿದ್ದ. ಈ ವೇಳೆ ಆಕೆಯ ಕುತ್ತಿಗೆಯನ್ನು ನಾಯಿಯ ಸರಪಳಿಯಿಂದ ಬಿಗಿದಿದ್ದರಿಂದ ಮೆದುಳಿಗೆ ರಕ್ತ ಮತ್ತು ಆಮ್ಲಜನಕದ ಸಂಚಾರ ಕಡಿತಗೊಂಡಿತ್ತು. ಹೀಗಾಗಿ ಅವರು ಅರೆಪ್ರಜ್ನಾವಸ್ಥೆಗೆ ಜಾರಿದ್ದರು.

2010ರ ಡಿಸೆಂಬರ್ ನಲ್ಲಿ ಪತ್ರಕರ್ತೆ ಪಿಂಕಿ, ಅರುನಾಗೆ ದಯಾಮರಣ ದಯಪಾಲಿಸುವಂತೆ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು. 2011ರ ಜನವರಿಯಲ್ಲಿ ವಿಚಾರಣೆ ಆರಂಭಿಸಿದ ನ್ಯಾಯಾಲಯ, ಆಕೆಯ ದೇಹಸ್ಥಿತಿ ಬಗ್ಗೆ ಪರಿಶೀಲನೆ ನಡೆಸಲು ವೈದ್ಯಕೀಯ ಸಮಿತಿ ರಚಿಸಿತ್ತು.

ಆಸ್ಪತ್ರೆಯವರು ಅರುಣಾರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ವರದಿ ಸಲ್ಲಿಸಿದ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ 2011 ಮಾ.7ರಂದು ದಯಾಮರಣ ಅರ್ಜಿ ತಿರಸ್ಕರಿಸಿತ್ತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Health

ಗವ್ಯ ಚಿಕಿತ್ಸಾ - ರಾಷ್ಟೀಯ ವಿಚಾರ ಸಂಕಿರಣ
  • ಗವ್ಯ ಚಿಕಿತ್ಸಾ - ರಾಷ್ಟೀಯ ವಿಚಾರ ಸಂಕಿರಣ
  • ಗವ್ಯ ಚಿಕಿತ್ಸಾ - ರಾಷ್ಟೀಯ ವಿಚಾರ ಸಂಕಿರಣ’ದ ಸಮಾರೋಪ ಸಮಾರಂಭ
  • ಉದ್ಯಾನ ವನದಲ್ಲಿ ಉದಯರಾಗ
  • ರಾಜ್ಯದಲ್ಲಿ ಆಹಾರ ಆಯೋಗ ರಚನೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited