Untitled Document
Sign Up | Login    
Dynamic website and Portals
  
May 15, 2015

ರೂ.2,000 ವರೆಗಿನ ಖರೀದಿಗಳಿಗೆ ಪಿನ್ ಧೃಢೀಕರಣದ ಅಗತ್ಯವಿರುವುದಿಲ್ಲ: ಆರ್.ಬಿ.ಐ

ನವದೆಹಲಿ : ನೀವು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡುವುದಿದ್ದರೆ ಇನ್ನು ಮುಂದೆ ರೂ.2,000 ವರೆಗಿನ ಖರೀದಿಗಳಿಗೆ ಪಿನ್ ಧೃಢೀಕರಣದ ಅಗತ್ಯವಿರುವುದಿಲ್ಲ.

ಭಾರತೀಯ ರಿಸರ್ವ್ ಬ್ಯಾಂಕ್ ಗುರುವಾರ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದು, ಎಲ್ಲಾ ರೀತಿಯ ಗ್ರಾಹಕ ವಸ್ತು ಖರೀದಿಗಳಿಗೆಲ್ಲೂ ಕಾಂಟ್ಯಾಕ್ಟ್ ಲೆಸ್ (contactless) ಪಾವತಿಗಳಿಗೆ ಇದು ಅನ್ವಯಿಸಲಿದೆ.

ಈವರೆಗೆ ಗ್ರಾಹಕರು ವಸ್ತುಗಳನ್ನು ಖರೀದಿಸಿ ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿ ಮಾಡುವಾಗ ಹೆಚ್ಚಿನ ಭದ್ರತೆಗಾಗಿ ಕಡ್ಡಾಯವಾಗಿ ಬಳಸಬೇಕಾಗಿತ್ತು. ಇದರಿಂದ ಅನೇಕ ಸಂದರ್ಭಗಳಲ್ಲಿ ಗ್ರಾಹಕರಿಗೆ ಅನಾನುಕೂಲತೆಗಳು ಉಂಟಾಗುತ್ತಿತ್ತು. ಈ ಕಾರಣಕ್ಕಾಗಿ ಈ ನಿಯಮವನ್ನು ಸಡಿಲಿಸಲು ರಿಸರ್ವ್ ಬ್ಯಾಂಕ್ ಗೆ ಮನವಿ ಸಲ್ಲಿಸಲಾಗಿತ್ತು.

ಗ್ರಾಹಕರ ಅನುಕೂಲತೆ ಹಾಗೂ ಕಾರ್ಡ್ ಬಳಕೆ ಸಂದರ್ಭದ ಭದ್ರತಾ ಅಗತ್ಯಗಳನ್ನು ಪರೀಕ್ಷಿಸಿ ಆರ್.ಬಿ.ಐ. ನಿಯಮವನ್ನು ಸಡಿಲಿಸುವ ಸಂಬಂಧ ಬಳಕೆದಾರರಿಂದ ಸಲಹೆಗಳನ್ನು ಆಹ್ವಾನಿಸಿತ್ತು.

ಜನರ ಪ್ರತಿಕ್ರಿಯೆಗಳನ್ನು ಗಮನಿಸಿ, ಪ್ರತಿ ವ್ಯವಹಾರದಲ್ಲಿ (transaction) ಗರಿಷ್ಠ ರೂ.2,000 ವರೆಗಿನ ಪಾವತಿಗಳಿಗೆ ಪಿನ್ ಕಡ್ಡಾಯ ನಿಯಮವನ್ನು ಸಡಿಲಿಸಲು ನಿರ್ಧರಿಸಲಾಗಿದೆ ಎಂದು ಆರ್.ಬಿ.ಐ. ಹೇಳಿದೆ.

ರೂ.2,000 ಕ್ಕೂ ಮೇಲ್ಪಟ್ಟ ಪಾವತಿಗಳಿಗೆ ಈ ಹಿಂದಿನಂತೆ ಕಡ್ಡಾಯವಾಗಿ ಪಿನ್ ಬಳಕೆ ಅಗತ್ಯವಾಗಿರುತ್ತದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Business & Economics

ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
  • ಆರ್ ಬಿಐ ನೂತನ ಅಧ್ಯಕ್ಷರಿಂದ ಮೊದಲ ಹಣಕಾಸು ನೀತಿ ಪ್ರಕಟ
  • ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited