Untitled Document
Sign Up | Login    
Dynamic website and Portals
  
May 13, 2015

ಚೀನಾ ಪ್ರವಾಸ ಭಾರತಕ್ಕೆ ಮಹತ್ವಪೂರ್ಣವಾಗಿದೆ: ಪ್ರಧಾನಿ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ : ಚೀನಾ ಪ್ರವಾಸ ಭಾರತಕ್ಕೆ ಅತ್ಯಂತ ಮಹತ್ವಪೂರ್ಣವಾಗಿದೆ. ಈ ಪ್ರವಾಸದಿಂದ ಉಭಯ ದೇಶಗಳ ಸಂಬಂಧ ಇನ್ನಷ್ಟು ಬಲಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಮೂರು ದಿನಗಳ ಚೀನಾ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ, ಚೀನಾ ಭೇಟಿಗೂ ಮೊದಲು ಅಲ್ಲಿನ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಚೀನಾ ಪ್ರವಾಸ ಭಾರತಕ್ಕೆ ಅತ್ಯಂತ ಮಹತ್ವಪೂರ್ಣವಾಗಿದೆ. ಬಹಳ ದಿನಗಳಿಂದ ಚೀನಾ ಪ್ರವಾಸದ ನಿರೀಕ್ಷೆಯಲ್ಲಿದ್ದೆ. ಭಾರತ-ಚೀನಾ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ ಎಂದು ಹೇಳಿದ್ದಾರೆ.

ಪ್ರಧಾನಿಯಾದ ಮೇಲೆ ಒಂದೇ ವರ್ಷದಲ್ಲಿ ಚೀನಾ ಅಧ್ಯಕ್ಷ ಜಿನ್ ಪಿಂಗ್ ರನ್ನು 3 ಬಾರಿ ಭೇಟಿಯಾಗಿದ್ದೇನೆ. 21ನೇ ಶತಮಾನ ಯುದ್ಧಮುಕ್ತವಾಗಬೇಕಿದೆ. ಈ ನಿಟ್ಟಿನಲ್ಲಿ ಚೀನಾ- ಭಾರತ ಉಭಯ ದೇಶಗಳು ಸೇರಿ ವಿಶ್ವಕ್ಕೆ ಶಾಂತಿ, ಸಮನ್ವಯತೆಯನ್ನು ಸಾರಲಿವೆ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮೇ 14ರಿಂದ 19ರ ತನಕ ಚೀನಾ, ಮಂಗೋಲಿಯಾ ಹಾಗೂ ದಕ್ಷಿಣ ಕೊರಿಯಾ ರಾಷ್ಟ್ರಗಳ ಪ್ರವಾಸ ಕೈಗೊಳ್ಳಲಿದ್ದಾರೆ.

ಮೇ 14ರಿಂದ 16 ರವರೆಗೂ ಚೀನಾದಲ್ಲಿರುವ ಮೋದಿ, ಮೊದಲಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಅವರ ತವರೂರಾದ ಕ್ಸಿಯಾನ್‌ ಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರ ಆತಿಥ್ಯವನ್ನು ಸ್ವೀಕರಿಸಲಿರುವ ಮೋದಿ ಬಳಿಕ ಬೀಜಿಂಗ್‌ ಗೆ ತೆರಳಲಿದ್ದಾರೆ.

ಬೀಜಿಂಗ್‌ ನಲ್ಲಿ ವಾಣಿಜ್ಯಾಭಿವೃದ್ಧಿ ಹಾಗೂ ದ್ವಿಪಕ್ಷೀಯ ಸಂಬಂಧಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ಕೊನೆಗೆ ಶಾಂಘೈ ನಗರಕ್ಕೆ ಆಗಮಿಸಲಿರುವ ಮೋದಿ, ಸಾರ್ವಜನಿಕ ಸಭೆಯಲ್ಲಿ ಚೀನಾದ ಯುವಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಬಳಿಕ ಮಂಗೋಲಿಯಾಗೆ ಪ್ರಯಾಣ ಬೆಳೆಸಲಿರುವ ಮೋದಿ, ಮೇ 17ರಂದು ಮಂಗೋಲಿಯ ಹಿರಿಯ ಮುಖಂಡರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಮಂಗೋಲಿಯ ಪ್ರವಾಸದ ಬಳಿಕ ಕೊನೆಗೆ ದಕ್ಷಿಣ ಕೊರಿಯಾಗೆ ಭೇಟಿ ನೀಡಲಿದ್ದು, ಅಧ್ಯಕ್ಷ ಪಾರ್ಕ್‌ ಗಿನ್‌ ಹೆ ಜೊತೆ ಮಾತುಕತೆ ನಡೆಸಲಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited