Untitled Document
Sign Up | Login    
Dynamic website and Portals
  
May 12, 2015

ಬ್ರಿಕ್ಸ್‌ ಬ್ಯಾಂಕ್‌ ಮೊದಲ ಅಧ್ಯಕ್ಷರಾಗಿ ಕೆ.ವಿ.ಕಾಮತ್‌ ನೇಮಕ

ಕೆ.ವಿ.ಕಾಮತ್ ಕೆ.ವಿ.ಕಾಮತ್

ನವದೆಹಲಿ : ಭಾರತ ಸೇರಿದಂತೆ 5 ಅಭಿವೃದ್ಧಿಶೀಲ ದೇಶಗಳು ಸ್ಥಾಪಿಸುತ್ತಿರುವ ಬ್ರಿಕ್ಸ್‌ ಬ್ಯಾಂಕ್‌ ನ ಮೊದಲ ಅಧ್ಯಕ್ಷರಾಗಿ ಕನ್ನಡಿಗ, ಹೆಸರಾಂತ ಬ್ಯಾಂಕರ್ ಕೆ.ವಿ.ಕಾಮತ್‌ ನೇಮಕಗೊಂಡಿದ್ದಾರೆ.

ಕಾಮತ್‌ ಅವರು 5 ವರ್ಷ ಅವಧಿಯನ್ನು ಹೊಂದಲಿದ್ದಾರೆ. ಬ್ಯಾಂಕ್‌ ಇನ್ನೊಂದು ವರ್ಷದಲ್ಲಿ ಸ್ಥಾಪನೆಯಾಗುವ ನಿರೀಕ್ಷೆಯಿದೆ ಎಂದು ವಿತ್ತ ಇಲಾಖೆಯ ಕಾರ್ಯದರ್ಶಿ ರಾಜೀವ್‌ ಮಹರ್ಷಿ ತಿಳಿಸಿದ್ದಾರೆ.

ಬ್ರೆಜಿಲ್‌, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ (ಬ್ರಿಕ್ಸ್‌) ದೇಶಗಳು ಸೇರಿಕೊಂಡು ಕಳೆದ ವರ್ಷ ಶಾಂಘೈನಲ್ಲಿ ಒಪ್ಪಂದವೊಂದಕ್ಕೆ ಬಂದಿದ್ದವು. ಆ ಪ್ರಕಾರ 50 ಶತಕೋಟಿ ಡಾಲರ್ ಬಂಡವಾಳದೊಂದಿಗೆ ’ಬ್ರಿಕ್ಸ್‌ ಬ್ಯಾಂಕ್‌' ಸ್ಥಾಪಿಸುವ ಘೋಷಣೆ ಮಾಡಿದ್ದವು. ಈ ಬ್ಯಾಂಕ್‌ ನ ಮೊದಲ ಅಧ್ಯಕ್ಷರ ನೇಮಿಸುವ ಅಧಿಕಾರವನ್ನು ಭಾರತಕ್ಕೆ ನೀಡಲಾಗಿತ್ತು.

ಈ ಬ್ಯಾಂಕ್‌ ನ ಕೇಂದ್ರ ಕಚೇರಿ ಚೀನಾದ ಶಾಂಘೈನಲ್ಲಿ ಇದ್ದು, ಕಾಮತ್‌ ಅವರು ಅಲ್ಲಿಂದಲೇ ಕಾರ್ಯನಿರ್ವಹಿಸಬೇಕಿದೆ. ಸದ್ಯ ಅವರು ವಿವಿಧ ಕಂಪನಿಗಳ ಆಡಳಿತ ಮಂಡಳಿಯ ಸದಸ್ಯರಾಗಿದ್ದು, ಅವುಗಳಿಂದ ಹೊರಬಂದ ಕೂಡಲೇ, ಅವರು ತಮ್ಮ ಹೊಸ ಹೊಣೆಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ಸರ್ಕಾರ ಹೇಳಿದೆ.

ಬ್ರೆಜಿಲ್‌, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ (ಬ್ರಿಕ್ಸ್‌) ದೇಶಗಳು ವಿಶ್ವದ ಆರ್ಥಿಕತೆಯ 16 ಲಕ್ಷ ಕೋಟಿ ಡಾಲರ್‌ ನಷ್ಟು ಜಿಡಿಪಿ ಹೊಂದಿವೆ. ಅಲ್ಲದೆ, ವಿಶ್ವದ ಶೇ.40ರಷ್ಟು ಜನಸಂಖ್ಯೆ ಹೊಂದಿವೆ. ಈ ದೇಶಗಳು ತಮ್ಮ ದೇಶಗಳಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ನೆರವಾಗಲು ಬ್ರಿಕ್ಸ್‌ ಬ್ಯಾಂಕ್‌ ಸ್ಥಾಪಿಸಹೊರಟಿವೆ. ವಿಶ್ವಬ್ಯಾಂಕ್‌ ಮಾದರಿಯಲ್ಲಿ ವಿವಿಧ ಯೋಜನೆಗಳಿಗೆ ಬ್ರಿಕ್ಸ್‌ ಬ್ಯಾಂಕ್‌, ಸಾಲ ವಿತರಿಸಲಿದೆ. ಪ್ರತಿ ಬ್ರಿಕ್ಸ್‌ ದೇಶವು 10 ಶತಕೋಟಿ ಡಾಲರ್‌ ಬಂಡವಾಳವನ್ನು ಆರಂಭದಲ್ಲಿ ತೊಡಗಿಸಲಿವೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Business & Economics

ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
  • ಆರ್ ಬಿಐ ನೂತನ ಅಧ್ಯಕ್ಷರಿಂದ ಮೊದಲ ಹಣಕಾಸು ನೀತಿ ಪ್ರಕಟ
  • ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited