Untitled Document
Sign Up | Login    
Dynamic website and Portals
  
May 7, 2015

ಸಲ್ಮಾನ್ ಖಾನ್ ಗೆ ಮತ್ತೊಂದು ಸಂಕಷ್ಟ ಜಾಮೀನು ರದ್ದು ಮಾಡುವಂತೆ ಸುಪ್ರೀಂಗೆ ಅರ್ಜಿ

ಸಲ್ಮಾನ್ ಖಾನ್ ಸಲ್ಮಾನ್ ಖಾನ್

ನವದೆಹಲಿ :
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗೆ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಮುಂಬೈ ಸೆಷನ್ಸ್ ಕೋರ್ಟ್ 5 ವರ್ಷ ಜೈಲುಶಿಕ್ಷೆ, 25 ಸಾವಿರ ದಂಡ ವಿಧಿಸಿತ್ತು. ಸಂಜೆ ಹೈಕೋರ್ಟ್ ಸಲ್ಮಾನ್ ಖಾನ್ ಗೆ 2 ದಿನಗಳ ಮಧ್ಯಂತರ ಜಾಮೀನು ನೀಡಿರುವುದನ್ನು ರದ್ದುಪಡಿಸಿಬೇಕೆಂದು ಕೋರಿ ವಕೀಲರೊಬ್ಬರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಮೇ. 6ರಂದು ಮಧ್ಯಾಹ್ನ ಮುಂಬೈ ಸೆಷನ್ಸ್ ಕೋರ್ಟ್ ಸಲ್ಮಾನ್ ಖಾನ್ ಗೆ ಐದು ವರ್ಷಗಳ ಶಿಕ್ಷೆ ವಿಧಿಸಿತ್ತು. ಆದರೆ ಶಿಕ್ಷೆ ವಿಧಿಸಿದ ಕೆಲವೇ ಗಂಟೆಗಳಲ್ಲಿ ಹೈಕೋರ್ಟ್ 2 ದಿನಗಳ ಮಧ್ಯಂತರ ಜಾಮೀನು ನೀಡಿದೆ. ಹಾಗಾಗಿ ಸಲ್ಮಾನ್ ಖಾನ್ ಗೆ ನೀಡಿರುವ ಮಧ್ಯಂತರ ಜಾಮೀನು ರದ್ದುಪಡಿಸಬೇಕೆಂದು ವಕೀಲರೊಬ್ಬರು ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದು, ಇದರಿಂದ ಸಲ್ಮಾನ್ ಖಾನ್ ಗೆ ಹೊಸ ಸಂಕಷ್ಟ ಎದುರಾದಂತಾಗಿದೆ.

2002ರ ಸೆ.28ರಂದು ಬಾಂದ್ರಾ ಹೊರವಲಯದ ಬೇಕರಿಯೊಂದರ ಪಾದಚಾರಿ ಮಾರ್ಗದ ಮೇಲೆ ಮಲಗಿದ್ದವರ ಮೇಲೆ ನಸುಕಿನ ವೇಳೆಯಲ್ಲಿ ಕಾರು ಹತ್ತಿಸಿ ಒಬ್ಬ ವ್ಯಕ್ತಿಯ ಸಾವಿಗೆ ಕಾರಣವಾದ ಆರೋಪವನ್ನು ಸಲ್ಮಾನ್‌ ಎದುರಿಸುತ್ತಿದ್ದಾರೆ. ಆದರೆ, ಈ ಘಟನೆ ನಡೆದ ಸಂದರ್ಭದಲ್ಲಿ ತಾವು ಕಾರನ್ನು ಓಡಿಸುತ್ತಿರಲಿಲ್ಲ. ಬದಲಾಗಿ ತಮ್ಮ ಚಾಲಕ ಅಶೋಕ್‌ ಸಿಂಗ್‌ ಕಾರನ್ನು ಚಲಾಯಿಸುತ್ತಿದ್ದರು ಎಂದು ಸಲ್ಮಾನ್‌ ಖಾನ್‌ ವಿಚಾರಣೆಯ ವೇಳೆ ಹೇಳಿಕೊಂಡಿದ್ದರು. ಅಶೋಕ್‌ ಸಿಂಗ್‌ ತಾವೇ ಕಾರು ಓಡಿಸಿದ್ದಾಗಿ ಕೋರ್ಟ್‌ನಲ್ಲಿ ಹೇಳಿಕೆಯನ್ನೂ ನೀಡಿದ್ದರು.

ಅಲ್ಲದೆ, ಸಲ್ಮಾನ್‌ ಖಾನ್‌ ಪರ ವಕೀಲರು ಪ್ರಕರಣಕ್ಕೆ ಇನ್ನೊಂದು ತಿರುವು ನೀಡಿ, ಕಾರಿನ ಟೈರ್‌ ಸ್ಫೋಟಗೊಂಡು ಕಾರು ಅಪಘಾತಕ್ಕೀಡಾಗಿತ್ತು. ಈ ವೇಳೆ ಕ್ರೇನ್‌ ನಿಂದ ಎಸ್‌.ಯು.ವಿ ಕಾರನ್ನು ಮೇಲೆತ್ತುವಾಗ ಅದು ಪಾದಚಾರಿ ಮಾರ್ಗದ ಮೇಲೆ ಮಲಗಿದ್ದವರ ಮೇಲೆ ಬಿದ್ದು ಅವರು ಗಂಭೀರವಾಗಿ ಗಾಯೊಂಡಿದ್ದರು. ಇದರಿಂದಾಗಿ ವ್ಯಕ್ತಿಯೊಬ್ಬನ ಸಾವು ಸಂಭವಿಸಿದೆ ಎಂದು ವಾದಿಸಿದ್ದರು. ಹೀಗೆ ಪ್ರಕರಣ ವಿಚಾರಣೆ ವೇಳೆ ಹಲವು ತಿರುವುಗಳನ್ನು ಪಡೆದುಕೊಂಡಿತ್ತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited