ಅಂಡಮಾನ್ : ನೇಪಾಳ-ಭಾರತದ ಕೆಲ ಭಾಗಗಳಲ್ಲಿ ಭೂಕಂಪದ ಕರಿನೆರಳು ಕಳಚುವ ಮುನ್ನವೇ ಭಾರತದಲ್ಲಿ ಮತ್ತೊಂದು ಭೂಕಂಪ ಸಂಭವಿಸಿದೆ.
ಅಂಡಮಾನ್ ನಿಕೋಬಾರ್ ದ್ವೀಪದಪೋರ್ಟ್ಬ್ಲೇರ್ ನಿಂದ 84 ಕಿ.ಮೀ ಅಂತರದಲ್ಲಿ ಸಮುದ್ರದಲ್ಲಿ ಮೇ.1ರ ಮಧ್ಯಾಹ್ನ ಲಘು ಭೂಕಂಪ ಸಂಭವಿಸಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ.
ಭೂಕಂಪನದಿಂದಾಗಿ ಯಾವುದೇ ಪ್ರಾಣಾಪಾಯ ಅಥವಾ ಆಸ್ತಿ ಹಾನಿಯ ಬಗ್ಗೆ ವರದಿಯಾಗಿಲ್ಲ. ಘಟನೆ ಸಂಭವಿಸಿದ ಬೆನ್ನಲ್ಲೇ ಸುನಾಮಿ ಸಂಭವಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಲಾಗಿತ್ತು. ಭೂವಿಜ್ನಾನ ಇಲಾಖೆ ಅಧಿಕಾರಿಗಳು ಸುನಾಮಿ ಸಂಭವಿಸುವ ಬಗ್ಗೆ ಯಾವುದೇ ಮುನ್ಸೂಚನೆ ಅಥವಾ ಎಚ್ಚರಿಕೆ ನೀಡಿಲ್ಲ.
ಸಮುದ್ರದಲ್ಲಿ ಭೂಕಂಪ ಸಂಭವಿಸಿರುವುದರಿಂದ ಸುನಾಮಿಯೂ ಸಂಭವಿಸಬಹುದೆಂಬ ಆತಂಕ ಎದುರಾಗಿತ್ತು. ಆದರೆ ಅಧಿಕಾರಿಗಳು ಸೂಚನೆ ನೀಡದ ಹಿನ್ನೆಲೆಯಲ್ಲಿ ಆತಂಕ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.