Untitled Document
Sign Up | Login    
Dynamic website and Portals
  
April 30, 2015

ಭಾರತದಲ್ಲಿ ವೈವಾಹಿಕ ಅತ್ಯಾಚಾರವೆಂಬ ವ್ಯಾಖ್ಯಾನ ಒಪ್ಪಲು ಸಾಧ್ಯವಿಲ್ಲ: ಕೇಂದ್ರ ಸರ್ಕಾರ

ನವದೆಹಲಿ : ಭಾರತದಲ್ಲಿ ವಿವಾಹವನ್ನು ಪವಿತ್ರ ಸಂಸ್ಕಾರವನ್ನಾಗಿ ಪರಿಗಣಿಸಲಾಗಿರುವುದರಿಂದ ವೈವಾಹಿಕ ಅತ್ಯಾಚಾರ ಎಂಬ ಕಲ್ಪನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ವೈವಾಹಿಕ ಅತ್ಯಾಚಾರ ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಗಣಿಸಲ್ಪಟ್ಟಿದೆ, ಆದರೆ ಭಾರತದಲ್ಲಿ ಅದೇ ರೀತಿಯ ಕಲ್ಪನೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ಭಾರತೀಯರ ಶೈಕ್ಷಣಿಕ ಮಟ್ಟ, ಸಂಸ್ಕೃತಿ, ಧಾರ್ಮಿಕ ನಂಬಿಕೆಗಳು ಸೇರಿದಂತೆ ಇನ್ನಿತರ ಅಂಶಗಳಿಂದ ವೈವಾಹಿಕ ಅತ್ಯಾಚಾರ ಎಂಬುದಕ್ಕೆ ಭಾರತದಲ್ಲಿ ಸೂಕ್ತವಾದ ಅರ್ಥವಿಲ್ಲ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹರಿಭಾಯ್ ಪರಾಥಿಭಾಯ್ ಚೌಧರಿ ಹೇಳಿದ್ದಾರೆ.

ವೈವಾಹಿಕ ಅತ್ಯಾಚಾರ ಎಂಬ ಪದವನ್ನು ಅತ್ಯಾಚಾರ ವ್ಯಾಖ್ಯಾನದಿಂದ ತೆಗೆದುಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ಐಪಿಸಿಗೆ ತಿದ್ದುಪಡಿ ತರಲು ಮಸೂದೆ ಜಾರಿಗೊಳಿಸಲಿದೆಯೇ ಎಂಬ ಡಿ.ಎಂ.ಕೆ ಸಂಸದೆ ಕನಿಮೋಳಿ ಪ್ರಶ್ನೆಗೆ ಉತ್ತರಿಸಿರುವ ಹರಿಭಾಯ್, ಪಾಶ್ಚಾತ್ಯರಂತೆ ಭಾರತದಲ್ಲಿ ವೈವಾಹಿಕ ಅತ್ಯಾಚಾರ ಎಂಬ ಕಲ್ಪನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.

ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ಪ್ರಕಾರ ಮದುವೆಯಾದ ಶೇ. 75ರಷ್ಟು ಮಹಿಳೆಯರು ವೈವಾಹಿಕ ಅತ್ಯಾಚಾರಕ್ಕೆ ಒಳಗಾಗುತ್ತಾರೆ. ಈ ವಿಚಾರಕ್ಕೆ ಸಂಬಂಧಿಸಿ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆಯೇ ಎಂದೂ ಕನಿಮೋಳಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited