ವಾಷಿಂಗ್ಟನ್ : 'ನೇಪಾಳ'ದಲ್ಲಿ ಸಂಭವಿಸಿರುವ ವಿಪತ್ತಿಗೆ ಸಂತಾಪ ಸೂಚಿಸಿರುವ ಅಮೆರಿಕದ ಸ್ವಘೋಷಿತ ಕ್ರಿಶ್ಚಿಯನ್ ಭೋಧಕನೊಬ್ಬ ಭೂಕಂಪಕ್ಕೆ ಸಿಲುಕಿ ನೆಲಕಚ್ಚಿರುವ ಯಾವುದೇ ದೇವಾಲಯಗಳಿಗೆ ನೇಪಾಳದ ಆಡಳಿತ ಪುನಶ್ಚೇತನ ನೀಡಬಾರದು ಎಂದು ಕಟ್ಟಪ್ಪಣೆ ವಿಧಿಸಿದ್ದಾನೆ.
ನೇಪಾಳದಲ್ಲಿ ಭೂಕಂಪಕ್ಕೆ ತುತ್ತಾಗಿರುವ ದೇವಾಲಯಗಳನ್ನು ಪುನರ್ ಪ್ರತಿಷ್ಠಾಪಿಸುವ ಬದಲು, ನೇಪಾಳದ ಸಮಸ್ತ ಜನತೆ ಕ್ರೈಸ್ತ ಮತಕ್ಕೆ ಮತಾಂತರವಾಗಬೇಕೆಂದು ಎಂದು ಸಲಹೆ ನೀಡಿದ್ದಾನೆ. ಈ ಸಲಹೆ ನೀಡಿರುವ ಟೋನಿ ಮಿಯಾನೊ ಎಂಬ ಸ್ವಘೋಷಿತ ಭೋಧಕ ಲಾಸ್ ಏಂಜಲೀಸ್ ನ ಮಾಜಿ ಪೊಲೀಸ್ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದಾನೆ.
ನೇಪಾಳದಲ್ಲಿ ಶೇ.85ರಷ್ಟು ಹಿಂದೂಗಳೇ ಇದ್ದು, ರಾಜಪ್ರಭುತ್ವ ಅಳಿಯುವುದಕ್ಕೂ ಮುನ್ನ ನೇಪಾಳ ವಿಶ್ವದ ಏಕೈಕ ಹಿಂದೂ ರಾಷ್ಟ್ರವಾಗಿತ್ತು. ಈಗ ನೇಪಾಳದಲ್ಲಿ ಹಿಂದೂ ದೇವಾಲಯಗಳನ್ನು ಮತ್ತೆ ನಿರ್ಮಿಸಬೇಡಿ ಎಂದು ಕರೆ ನೀಡಿರುವ ಮಿಯಾನೋ ವಿರುದ್ಧ ಹೊಮೊಫೋಬಿಯಾ ಆರೋಪವೂ ಕೇಳಿಬಂದಿತ್ತು. ಮಿಯಾನೋ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.