Untitled Document
Sign Up | Login    
Dynamic website and Portals
  
April 25, 2015

ನೇಪಾಳದಲ್ಲಿ ಭೂಕಂಪ: ಸಾವಿನ ಸಂಖ್ಯೆ 600ಕ್ಕೆ ಏರಿಕೆ

9 ಅಂತಸ್ತಿನ ಐತಿಹಾಸಿಕ ಭೀಮ್ ಸೇನ್ ಟವರ್ ನೆಲಸಮ

ನೇಪಾಳದಲ್ಲಿ ಭೂಕಂಪ: ಸಾವಿನ ಸಂಖ್ಯೆ 600ಕ್ಕೆ ಏರಿಕೆ

ಕಠ್ಮಂಡು : ನೇಪಾಳದಲ್ಲಿ ಭಾರೀ ಪ್ರಮಾಣದಲ್ಲಿ ಹಾನಿ ಸಂಭವಿಸಿದ್ದು, 9 ಅಂತಸ್ತಿನ ಐತಿಹಾಸಿಕ ಭೀಮ್ ಸೇನ್ ಟವರ್ ಕುಸಿದು ಬಿದ್ದಿದ್ದು, ಅವಶೇಷಗಳಡಿಯಲ್ಲಿ ನೂರಾರು ಮಂದಿ ಸಿಲಿಕಿರುವುದಾಗಿ ಶಂಕಿಸಲಾಗಿದೆ. ಏತನ್ಮಧ್ಯೆ ನೇಪಾಳದಲ್ಲಿ ಬಾಲಕಿ ಸೇರಿ 600ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದಾಗಿ ನೇಪಾಳ ಪೊಲೀಸರು ಮಾಹಿತಿ ನೀಡಿದ್ದಾರೆ.

ನೇಪಾಳದಲ್ಲಿ ಸಂಭವಿಸಿದ ಭೂಕಂಪ ರಿಕ್ಟರ್ ಮಾಪಕದಲ್ಲಿ 7.9ರಷ್ಟು ತೀವ್ರತೆ ದಾಖಲಾಗಿದೆ. ಭಾರತದಲ್ಲಿ 6.5ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

ಟಿಬೆಟ್ ನಲ್ಲಿಯೂ ಮನೆಗಳೂ ಕುಸಿದಿರುವುದಾಗಿ ವರದಿಯಾಗಿದೆ. ಉತ್ತರಪ್ರದೇಶದಲ್ಲಿ ಐವರು, ಬಿಹಾರದಲ್ಲಿ 14, ಪಶ್ಚಿಮಬಂಗಾಳದಲ್ಲಿ ಇಬ್ಬರು, ಬಿಹಾರದ ಬೆಟ್ಟಿಯಾ ಪ್ರದೇಶದಲ್ಲಿ ಇಬ್ಬರು ಸಾವನ್ನಪ್ಪಿರುವುದಾಗಿ ಎಎನ್ ಐ ವರದಿ ವಿವರಿಸಿದೆ.

ಐತಿಹಾಸಿಕ ಭೀಮ್ ಸೇನ್ ಟವರ್ ನಲ್ಲಿ ಸುಮಾರು 400 ಮಂದಿ ಇದ್ದಿದ್ದಾರೆನ್ನಲಾಗಿದೆ. ಅವಶೇಷಗಳಡಿ 50ಕ್ಕೂ ಹೆಚ್ಚು ಮಂದಿ ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ. ಟವರ್ ಅವಶೇಷಗಳ ಅಡಿಯಿಂದ 21 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಠ್ಮಂಡುವಿನಲ್ಲಿ ಮೊಬೈಲ್ ನೆಟ್ ವರ್ಕ್ ಕೂಡಾ ಸಿಗುತ್ತಿಲ್ಲ. ರಸ್ತೆಗಳೆಲ್ಲಾ ಬಾಯ್ಬಿಟ್ಟಿವೆ ಎಂದು ನೇಪಾಳದ ಮಾಜಿ ಪ್ರಧಾನಿ ಲೋಕೆಂದ್ರ ಬಹಾದೂರ್ ಚಾಂದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ 19ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಭೀಮ್ ಸೇನ್ ಟವರ್ ಇದೀಗ ಪ್ರಬಲ ಭೂಕಂಪಕ್ಕೆ ನೆಲಸಮವಾಗಿಬಿಟ್ಟಿದೆ. ಈ ಟವರ್ ಅನ್ನು 1832ರಲ್ಲಿ ನಿರ್ಮಿಸಲಾಗಿತ್ತು. ಕಳೆದ 10ವರ್ಷಗಳಿಂದ ಈ ಐತಿಹಾಸಿಕ ಟವರ್ ಗೆ ಭೇಟಿ ನೀಡಲು ಅವಕಾಶ ಮಾಡಿಕೊಡಲಾಗಿತ್ತು.

ಈ ನಡುವೆ ನೇಪಾಳದಲ್ಲಿ ಬೆಂಗಳೂರು ಮೂಲದ 85 ಪ್ರವಾಸಿಗರು ಸಿಲುಕಿರುವುದಾಗಿ ತಿಳಿದುಬಂದಿದೆ. ಬೆಳಗ್ಗೆ 11ಗಂಟೆಯಿಂದ ಪ್ರವಾಸಿಗರ ಮೊಬೈಲ್ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Crime

ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಬೆಂಗಳೂರಿನ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತಗೊಂಡ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
  • ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದ ಎಸ್ ಐ ಟಿ
  • ಸೈನೈಡ್ ಮೋಹನ್ ಗೆ ಜೀವಾವಧಿ ಜೈಲು ಶಿಕ್ಷೆ: ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited