ಕರಾಚಿ : 'ಪಾಕಿಸ್ತಾನ'ದ ಮಾನವ ಹಕ್ಕುಗಳ ಕಾರ್ಯಕರ್ತೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬಲೂಚೀಸ್ಥಾನದ ಪ್ರದೇಶದಲ್ಲಿ ಈ ಕೃತ್ಯ ನಡೆಸಲಾಗಿದೆ.
ಸಬೀನ್ ಮಹಮೂದ್ ಹತ್ಯೆಗೀಡಾಗಿರುವ ಮಾನವಹಕ್ಕುಗಳ ಕಾರ್ಯಕರ್ತೆಯಾಗಿದ್ದು, ಕರಾಚಿಯಲ್ಲಿ ವಾಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಮಾನವ ಹಕ್ಕುಗಳ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿರಬೇಕಾದರೆ ಶಸ್ತ್ರಧಾರಿಗಳ ಗುಂಪು ಅವರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದೆ.
ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು, ಗುಂಡು ಹಾರಿಸಿದ್ದಾರೆ, ಪರಿಣಾಮ ತೀವ್ರವಾಗಿ ಗಾಯಗೊಂಡ ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅನ್ ಸೈಲೆನ್ಸಿಂಗ್ ಬಲೂಚಿಸ್ಥಾನ್ ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿರಬೇಕಾದರೆ ಸಬೀನ್ ಮಹಮೂದ್ ಅವರ ಮೇಲೆ ಗುಂಡು ಹಾರಿಸಲಾಗಿದೆ.
ಬಲೂಚಿಸ್ಥಾನದ ಪ್ರತ್ಯೇಕತಾವಾದಿಗಳನ್ನು ಸೇನಾಪಡೆಯ ಯೋಧರು ಕಾನೂನಿಗೆ ವಿರುದ್ಧವಾಗಿ ಹತ್ಯೆ ಮಾಡುತ್ತಿರುವುದರ ವಿರುದ್ಧ ಸಬೀನ್ ಮಹಮೂದ್ ಅವರು ಹೋರಾಟ ಮಾಡುತ್ತಿದ್ದರು.