Untitled Document
Sign Up | Login    
Dynamic website and Portals
  
April 25, 2015

ಫೋರ್ಡ್ ಫೌಂಡೇಶನ್ ಮೇಲೆ ಸರಕಾರದ ನಿಗಾ: ಸ್ಪಷ್ಟೀಕರಣ ಕೋರಿದ ಅಮೆರಿಕಾ

ವಾಷಿಂಗ್ಟನ್ : ಫೋರ್ಡ್ ಫೌಂಡೇಶನ್ ಮತ್ತು ಗ್ರೀನ್ ಪೀಸ್ ಸಂಸ್ಥೆಗಳ ಮೇಲೆ ನಿಷೇಧಕ್ಕೆ ಮುಂದಾಗಿರುವ ಭಾರತ ಸರ್ಕಾರದ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅಮೆರಿಕಾ ಈ ಬಗ್ಗೆ ಭಾರತದಿಂದ ಸ್ಪಷ್ಟೀಕರಣ ಕೇಳಿದೆ.

ಭಾರತದ ಗೃಹ ಸಚಿವಾಲಯ ಗ್ರೀನ್ ಪೀಸ್ ಸಂಸ್ಥೆಯ ನೋಂದಣಿಯನ್ನು ರದ್ದು ಮಾಡಿರುವುದು ಹಾಗೂ ಫೋರ್ಡ್ ಫೌಂಡೇಶನ್ ನನ್ನು ಕಣ್ಗಾವಲಿನಲ್ಲಿ ಇಟ್ಟಿರುವುದು ನಮಗೆ ತಿಳಿದಿದೆ ಎಂದು ಅಮೆರಿಕಾ ಸರ್ಕಾರದ ಉಪ ವಕ್ತಾರ ಮಾರಿ ಹಾರ್ಫ್ ತಿಳಿಸಿದ್ದಾರೆ.

ಈ ಸ್ವಲ್ಪ ದಿನದ ಹಿಂದ ಗ್ರೀನ್ ಪೀಸ್ ಸಂಸ್ಥೆಯ ನೋಂದಣಿಯನ್ನು ಭಾರತ ಸರ್ಕಾರ ರದ್ದು ಮಾಡಿತ್ತು. ಹಾಗೆಯೇ ಫೋರ್ಡ್ ಫೌಂಡೇಶನ್ ಸಂಸ್ಥೆಯ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟು, ಆ ಸಂಸ್ಥೆಯಿಂದ ಹರಿದು ಬರುವ ಹಣದ ಬಗ್ಗೆ ಗೃಹಸಚಿವಾಲಕ್ಕೆ ಸೂಚನೆ ನೀಡಲು ಆರ್ ಬಿ ಐ ಗೆ ಸರ್ಕಾರ ಸೂಚನೆ ನೀಡಿತ್ತು.

ಫೋರ್ಡ್ ಫೌಂಡೇಶನ್ ಸಂಸ್ಥೆ, ಗುಜರಾತ್ ಗಲಭೆಗಳ ವಿರುದ್ಧ ಹೋರಾಡುತ್ತಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ಥಾ ಸೆತಲ್ವಾಡ ಅವರಿಗೆ ಧನ ಸಹಾಯ ಮಾಡುತ್ತಿರುವುದರಿಂದ ಗುಜರಾತ್ ಸರ್ಕಾರ ಫೋರ್ಡ್ ಫೌಂಡೇಶನ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಸರ್ಕಾರದ ಈ ನಡೆಯನ್ನು ಕೆಲವು ಸಾಮಾಜಿಕ ಕಾರ್ಯಕರ್ತರು ವಿರೋಧಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited