ನವದೆಹಲಿ : 'ಬಿ.ಎಸ್.ಎನ್.ಎಲ್' ಸಂಸ್ಥೆ ಲ್ಯಾಂಡ್ ಲೈನ್ ಸಂಪರ್ಕಗಳನ್ನು ಉತ್ತೇಜಿಸಲು ಹೊಸ ಯೋಜನೆಯನ್ನು ಜಾರಿಗೊಳಿಸಿದೆ. ರಾತ್ರಿಯಿಂದ ಬೆಳಿಗ್ಗಿನವರೆಗೂ ಯಾವುದೇ ನೆಟ್ ವರ್ಕ್ ಗೆ ಉಚಿತವಾಗಿ ಕರೆ ಮಾಡಬಹುದಾಗಿದೆ.
ಈ ಹೊಸ ಯೋಜನೆ ಮೇ.1ರಿಂದ ಜಾರಿಗೆ ಬರಲಿದೆ. ಬಿ.ಎಸ್.ಎನ್.ಎಲ್ ಜಾರಿಗೆ ತಂದಿರುವ ನೂತನ ಸೇವೆಯಿಂದ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 7 ಗಂಟೆಯ ವರೆಗೆ ಲ್ಯಾಂಡ್ ಲೈನ್ ನಿಂದ ಮಾಡುವ ಕರೆಗಳು ಸಂಪೂರ್ಣ ಉಚಿತವಾಗಿರಲಿದೆ. ಈ ಸೌಲಭ್ಯ ಮೊಬೈಲ್ ನೆಟ್ ವರ್ಕ್ ಗಳಿಗೆ ಕರೆ ಮಾಡಿದರೂ ಅನ್ವಯಿಸಲಿದೆ.
ಇತ್ತೀಚಿನ ದಿನಗಳಲ್ಲಿ ಬಿ.ಎಸ್.ಎನ್.ಎಲ್ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ. ಟ್ರಾಯ್ ಬಿಡುಗಡೆ ಮಾಡಿರುವ ವರದಿಯಲ್ಲಿ ಏರ್ ಟೆಲ್ ಸಂಸ್ಥೆಯ ಲ್ಯಾಡ್ ಲೈನ್ ಸಂಪರ್ಕಗಳನ್ನು ಜನರು ಹೆಚ್ಚು ಬಳಕೆ ಮಾಡುತ್ತಿರುವುದು ತಿಳಿದುಬಂದಿದೆ. ಫೆಬ್ರವರಿಯ ವರೆಗೂ ಏರ್ ಟೆಲ್ ಕಂಪನಿಗೆ ಸೇರಿದ ಸ್ಥಿತ ದೂರವಾಣಿ ಸಂಪರ್ಕಗಳ ಸಂಖ್ಯೆ 1.66 ಕೋಟಿ ತಲುಪಿದೆ.
ಅದೇ ತಿಂಗಳಲ್ಲಿ 162,556 ಚಂದಾದಾರನ್ನು ಕಳೆದುಕೊಂಡಿದ್ದರೂ ಶೇ.62.26ರಷ್ಟು ಮಾರುಕಟ್ಟೆಯನ್ನು ಹೊಂದಿರುವ ಬಿ.ಎಸ್.ಎನ್.ಎಲ್, ಅತಿ ಹೆಚ್ಚು ದೂರವಾಣಿ ಸಂಪರ್ಕಗಳ ಸಂಖ್ಯೆ ಹೊಂದಿದೆ.