Untitled Document
Sign Up | Login    
Dynamic website and Portals
  
April 23, 2015

ಈ ವರ್ಷ ಕಡಿಮೆ ಮುಂಗಾರು ಮಳೆ

ಈ ವರ್ಷ ಕಡಿಮೆ ಮುಂಗಾರು ಮಳೆ

ನವದೆಹಲಿ : ಕಳೆದ ಸಾಲಿನಲ್ಲಿ ಮುಂಗಾರಿನ ಮೇಲೆ ಪರಿಣಾಮ ಬೀರಿದ್ದ ಎಲ್ ನಿನೋ ಈ ಬಾರಿಯೂ ಮಾನ್ಸೂನ್‌ ಮೇಲೆ ಕರಾಳ ಛಾಯೆ ಬೀರಲಿದೆ. ಈ ವರ್ಷ ಸಾಮಾನ್ಯ ಸರಾಸರಿಯ ಶೇ.93ರಷ್ಟು ಮಾತ್ರವೇ ಮುಂಗಾರು ಮಳೆ ಸುರಿಯುವ ನಿರೀಕ್ಷೆ ಇದೆ.

ಮಳೆ ಕಡಿಮೆಯ ಪ್ರಮಾಣ, ಈಶಾನ್ಯ ಮತ್ತು ಮಧ್ಯ ಭಾರತದ ರಾಜ್ಯಗಳ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಭೂವಿಜ್ಞಾನ ಖಾತೆ ಸಚಿವ ಹರ್ಷವರ್ಧನ್‌, ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮುಂಗಾರು ಪ್ರಮಾಣದಲ್ಲಿ ಕುಂಠಿತವಾಗಲಿದೆ. ಸಾಮಾನ್ಯ ಸರಾಸರಿಯ ಶೇ.93ರಷ್ಟು ಮಾತ್ರ ಮಳೆ ಸುರಿಯುವ ಸಾಧ್ಯತೆ ಇದೆ. ಹವಾಮಾನ ಇಲಾಖೆಯ ಲೆಕ್ಕಾಚಾರದ ಅನ್ವಯ ಸಾಮಾನ್ಯ ಸರಾಸರಿಗಿಂತ ಶೇ.90ರಷ್ಟು ಕಡಿಮೆ ಮಳೆ ಬಿದ್ದರೆ ಅದನ್ನು ಮಳೆ ಕೊರತೆ ಎಂದು, ಶೇ.90-96ರ ಸರಾಸರಿಯಲ್ಲಿದ್ದರೆ ಅದನ್ನು ಸಾಮಾನ್ಯಕ್ಕಿಂತ ಕಡಿಮೆ ಎಂದು, ಶೇ.96-104ರ ಪ್ರಮಾಣದಲ್ಲಿದ್ದರೆ ಅದನ್ನು ಸಾಮಾನ್ಯ ಅಥವಾ ಹೆಚ್ಚಿನ ಮಳೆ ಎಂದು ಕರೆಯಲಾಗುತ್ತದೆ ಎಂದು ಹೇಳಿದ್ದಾರೆ.

ಸಾಮಾನ್ಯಕ್ಕಿಂತ ಕಡಿಮೆ ಮಳೆ ಸುರಿಯುವ ಸಾಧ್ಯತೆ ಶೇ.35ರಷ್ಟು, ಮಳೆ ಕೊರತೆ ಸಾಧ್ಯತೆ ಶೇ.33 ಮತ್ತು ಸಾಮಾನ್ಯ ಮಳೆ ಸುರಿಯುವ ಸಾಧ್ಯತೆ ಶೇ.28 ಮತ್ತು ಹೆಚ್ಚಿನ ಮಳೆ ಸುರಿಯುವ ಸಾಧ್ಯತೆ ಕೇವಲ ಶೇ.1ರಷ್ಟು ಮಾತ್ರ ಇದೆ ಎಂದು ಹರ್ಷವರ್ಧನ್‌ ಅವರು ಹೇಳಿದ್ದಾರೆ.

 

 

Share this page : 
 

Table 'bangalorewaves.bv_news_comments' doesn't exist