Untitled Document
Sign Up | Login    
Dynamic website and Portals
  
April 13, 2015

10 ವರ್ಷದಷ್ಟು ಹಳೆಯ ಡೀಸೆಲ್ ವಾಹನಗಳ ನಿಷೇಧಕ್ಕೆ ಮಧ್ಯಂತರ ತಡೆ

10 ವರ್ಷದಷ್ಟು ಹಳೆಯ ಡೀಸೆಲ್ ವಾಹನಗಳ ನಿಷೇಧಕ್ಕೆ ಮಧ್ಯಂತರ ತಡೆ

ನವದೆಹಲಿ : 'ದೆಹಲಿ'ಯಲ್ಲಿ 10 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನಗಳ ಸಂಚಾರಕ್ಕೆ ವಿಧಿಸಲಾಗಿದ್ದ ನಿಷೇಧಕ್ಕೆ ಸುಪ್ರೀಂ ಕೋರ್ಟ್ಹಸಿರು ಪೀಠ ತಡೆ ನೀಡಿದೆ.

ದೆಹಲಿ ಸರ್ಕಾರಕ್ಕೆ 2 ವಾರಗಳ ಕಾಲ ಅವಕಾಶ ನೀಡಿರುವ ಕೋರ್ಟ್,10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳು ರಸ್ತೆಗಿಳಿಯದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ. ನಿಷೇಧವನ್ನು ಕಾರ್ಯಗತಗೊಳಿಸಲು ದೆಹಲಿ ಸರ್ಕಾರ ಹರಸಾಹಸ ಪಡುತ್ತಿತ್ತು. ನಿಷೇಧದ ನಂತರವೂ 10 ವರ್ಷಕ್ಕಿಂತಲೂ ಹಳೆಯದಾದ ಡೀಸೆಲ್ ವಾಗನಗಳು ದೆಹಲಿಯ ರಸ್ತೆಯಲ್ಲಿ ಓಡಾಡುತ್ತಿದ್ದವು.

ಸುಪ್ರೀಂ ಕೋರ್ಟ್ಹಸಿರು ಪೀಠ ನೀಡಿರುವ ಮಧ್ಯಂತರ ತಡೆ, 10 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನದ ಮಾಲಿಕರಿಗೆ ರಿಲೀಫ್ ದೊರೆತಿದೆ. ಯಾವುದೇ ಮುನ್ಸೂಚನೆ ಇಲ್ಲದೇ ಬ್ಯಾನ್ ಮಾಡಿದ್ದನ್ನು ವಾಹನ ಮಾಲಿಕರು ವಿರೋಧಿಸಿದ್ದರು.

ಮಹಾನಗರಗಳಲ್ಲಿ ಪರಿಸರ ಮಾಲಿನ್ಯದ ಪ್ರಮಾಣದ ಮಿತಿಮೀರುತ್ತಿದೆ ಎಂಬ ವರದಿ ಹಿನ್ನೆಲೆಯಲ್ಲಿ, 10 ವರ್ಷಕ್ಕಿಂತ ಹಳೆಯ ಎಲ್ಲ ರೀತಿಯ ಡೀಸೆಲ್‌ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಆದೇಶ ಹೊರಡಿಸಿತ್ತು.

ಪರಿಸರ ಮಾಲಿನ್ಯದಲ್ಲಿ ಡೀಸೆಲ್‌ನ ಪಾತ್ರ ಅತ್ಯಂತ ಹೆಚ್ಚು. ಬ್ರೆಜಿಲ್‌, ಚೀನಾ, ಡೆನ್ಮಾರ್ಕ್‌ ಸೇರಿದಂತೆ ಹಲವು ದೇಶಗಳಲ್ಲಿ ಈಗಾಗಲೇ ಡೀಸೆಲ್‌ ವಾಹನಗಳ ಓಡಾಟಕ್ಕೆ ನಿಷೇಧ ಹೇರುವ ಇಲ್ಲವೇ ಅವುಗಳ ಮೇಲೆ ಭಾರೀ ತೆರಿಗೆ ವಿಧಿಸುವ ಕ್ರಮಕ್ಕೆ ಮುಂದಾಗಿದೆ

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited