ಬೆಂಗಳೂರು : ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾಳೆ ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಡೀಲರ್ ಗಳು ಸಂಜೆ 6 ರಿಂದ ಭಾನುವಾರ ಬೆಳಗ್ಗೆ 6ಗಂಟೆವರೆಗೆ ಮುಷ್ಕರ ನಡೆಸುತ್ತಿದ್ದಾರೆ.
ಶೇ.5ರಷ್ಟು ಲಾಭಾಂಶ ಹೆಚ್ಚಳ ಸೇರಿ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೇಶಾದ್ಯಂತ 12 ಗಂಟೆಗಳ ಕಾಲ ಬಂದ್ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಪೆಟ್ರೋಲ್, ಡೀಸೆಲ್ ವ್ಯಾಪಾರ ಸಂಪೂರ್ಣ ಸ್ಥಗಿತವಾಗಲಿದೆ ಎಂದು ಡೀಲರ್ಸ್ ಸಂಸ್ಥೆಯ ಅಧ್ಯಕ್ಷ ಬಿ.ಆರ್.ರವೀಂದ್ರನಾಥ್ ಹೇಳಿದ್ದಾರೆ.
ಮುಷ್ಕರ ಹಿನ್ನೆಲೆ ರಾಜ್ಯದಲ್ಲಿ ಸುಮಾರು 1,800 ಪೆಟ್ರೋಲ್ ಬಂಕ್ ಗಳು ಬಂದ್ ಆಗಲಿವೆ. ಬೆಂಗಳೂರಿನಲ್ಲಿ 450 ಪೆಟ್ರೋಲ್ ಬಂಕ್ ಗಳು ಬಂದ್ ಆಗಲಿವೆ. ಹೀಗಾಗಿ ವಾಹನ ಸವಾರರು ಮುನ್ನೆಚ್ಚರಿಕೆಯಾಗಿ ಬೆಳಗ್ಗೆಯೆ ಟ್ಯಾಂಕ್ ಪುಲ್ ಮಾಡಿಕೊಳ್ಳುವುದು ಉತ್ತಮ.