Sullia : ಯಾವುದೇ ಕಾರ್ಯಕ್ರಮ ಸಣ್ಣದು-ದೊಡ್ಡದು ಅನ್ನುವುದಕ್ಕಿಂತ ಆತ್ಮೀಯತೆ ಮುಖ್ಯ. ಸಾಧನೆಗೆ ಯಾವುದೇ ಮಾಧ್ಯಮ ಮುಖ್ಯವಲ್ಲ. ಕನ್ನಡ ಮಾಧ್ಯಮದಲ್ಲಿ ಕಲಿತರೆ ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ವಿದ್ಯಾರ್ಥಿಗಳು ಪಡೆಯುತ್ತಾರೆ.
ಒಬ್ಬ ನಾಗರಿಕನಾಗಿ ಬದುಕಲು ಮೌಲ್ಯಗಳು ಮತ್ತು ಸಾಂಸ್ಕೃತಿಕ ನೆಲೆಗಟ್ಟು ಅಗತ್ಯ ಎಂದು ಸುಳ್ಯದ ಸ್ನೇಹ ಶಾಲಾ ಆವರಣದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಪದಕ ಪುರಸ್ಕೃತ, ಸುಳ್ಯದ ವೃತ್ತ ನಿರೀಕ್ಷಕ ಸತೀಶ್ ಬಿ ಎಸ್ ರವರು ಹೇಳಿದರು. ಅವರು ಸ್ನೇಹ ಶಿಕ್ಷಣ ಸಂಸ್ಥೆಯ ವತಿಯಿಂದ 06-04-2015ರಂದು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆಯವರು ಅಭಿನಂದನಾ ಭಾಷಣ ಮಾಡಿ ಸತೀಶ್ ಬಿ ಎಸ್ ಇವರನ್ನು ಸನ್ಮಾನಿಸಿದರು.
ಆರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಡಾ| ವಿದ್ಯಾಶಾಂಭವ ಪಾರೆ ಸ್ವಾಗತಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಸಲಹಾ ಮಂಡಳಿಯ ಸದಸ್ಯರಾದ ಲತಾ ಮಧುಸೂದನ್, ಪೋಷಕರಾದ ವಿದ್ಯಾ ಶ್ರೀಕೃಷ್ಣ ಭಟ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ ವಂದಿಸಿದರು. ಶಿಕ್ಷಕಿ ಜಯಲಕ್ಶ್ಮಿ ಕಾರ್ಯಕ್ರಮ ನಿರೂಪಿಸಿದರು.