Untitled Document
Sign Up | Login    
Dynamic website and Portals
  
April 3, 2015

2050ರ ವೇಳೆಗೆ ಹಿಂದೂ ಧರ್ಮ ವಿಶ್ವದ ಮೂರನೇ ಅತಿ ದೊಡ್ಡ ಜನಸಂಖ್ಯೆ ಹೊಂದಲಿದೆ

2050ರ ವೇಳೆಗೆ ಹಿಂದೂ ಧರ್ಮ ವಿಶ್ವದ ಮೂರನೇ ಅತಿ ದೊಡ್ಡ ಜನಸಂಖ್ಯೆ ಹೊಂದಲಿದೆ

ವಾಷಿಂಗ್ ಟನ್ : 2050ರ ವೇಳೆಗೆ ಹಿಂದೂ ಧರ್ಮ ಪ್ರಪಂಚದ ಮೂರನೇ ಅತಿ ದೊಡ್ಡ ಜನಸಂಖ್ಯೆಯನ್ನು ಹೊಂದಿದ ಧರ್ಮವಾಗಲಿದೆ ಎಂದು ಸಮೀಕ್ಷೆಯೊಂದರ ಮೂಲಕ ತಿಳಿದು ಬಂದಿದೆ.

ಪ್ಯೂ ರಿಸರ್ಚ್ ಸೆಂಟರ್ ನ ಧಾರ್ಮಿಕ ವಿವರಗಳ ಮುನ್ನೋಟಗಳ ಪ್ರಕಾರ, ಹಿಂದೂಗಳ ಜನಸಂಖ್ಯೆ ಪ್ರಪಂಚದಾದ್ಯಂತ ಶೇ.34ರಷ್ಟು ಬೆಳವಣಿಗೆಯಾಗಲಿದೆ ಎಂದು ಹೇಳಲಾಗಿದೆ. ಈ ಸಮೀಕ್ಷೆ ಪ್ರಕಾರ ಒಂದು ಬಿಲಿಯನ್ ಇರುವ ಹಿಂದೂಗಳ ಜನಸಂಖ್ಯೆ 2050ರ ವೇಳೆಗೆ 1.4 ಬಿಲಿಯನ್ ಗೆ ಏರಿಕೆಯಾಗಲಿದೆ ಎಂದು ಹೇಳಲಾಗಿದೆ. ಈ ಮೂಲಕ ವಿಶ್ವದ ಜನಸಂಖ್ಯೆಯಲ್ಲಿ ಶೇ.14.9ರಷ್ಟು ಜನಸಂಖ್ಯೆ ಹಿಂದೂಧರ್ಮದ್ದಾಗಿರಲಿದೆ.

ಪ್ರಸ್ತುತ ಯಾವುದೇ ಧರ್ಮಕ್ಕೂ ಒಳಪಡದವರದ್ದು ವಿಶ್ವದ ಮೂರನೇ ಅತಿ ದೊಡ್ಡ ಜನಸಂಖ್ಯೆಯಾಗಿದೆ. ಎಲ್ಲಾ ಧರ್ಮಕ್ಕಿಂತಲೂ ಇಸ್ಲಾಮ್ ಅತಿ ವೇಗವಾಗಿ ಬೆಳೆಯುತ್ತಿರುವ ಧರ್ಮವಾಗಿದೆ. ಭಾರತದಲ್ಲಿ ಹಿಂದೂ ಧರ್ಮದವರೇ ಬಹುಸಂಖ್ಯಾತರಾಗಿರಲಿದ್ದು, ಮುಸ್ಲಿಂ ಜನಸಂಖ್ಯೆಯಲ್ಲಿ ಶೀಘ್ರವೇ ಇಂಡೋನೇಷಿಯಾವನ್ನು ಹಿಂದಿಕ್ಕಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಈಗಿನ ಟ್ರೆಂಡ್ ಮುಂದುವರೆದರೆ 2070ರ ವೇಳೆಗೆ ಕ್ರೈಸ್ತ ಮತವನ್ನೂ ಮೀರಿ ಇಸ್ಲಾಂ ಮತ ವಿಶ್ವಾದ್ಯಂತ ತನ್ನ ಪ್ರಭಾವ ಬೀರಿ ಕ್ರಿಶ್ಚಿಯನ್ ಧರ್ಮವನ್ನೂ ಮೀರಿಸಿ ಬೆಳೆಯಲಿದೆ. ಈ ಎಲ್ಲಾ ಧರ್ಮಗಳ ನಡುವೆ ಬೌದ್ಧ ಧರ್ಮದ ಬೆಳವಣಿಗೆ ಕ್ಷೀಣಿಸುತ್ತಿದೆ ಎಂದು ವರದಿ ಹೇಳಿರುವುದು ಆತಂಕಕಾರಿಯಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Religion & Spirituality

ಶಬರಿಮಲೈ: ಮಹಿಳೆಯರ ದೇಗುಲ ಪ್ರವೇಶ ಕುರಿತ ಅರ್ಜಿ ಸಾಂವಿಧಾನಿಕ ಪೀಠಕ್ಕೆ
  • ಶಬರಿಮಲೈ: ಮಹಿಳೆಯರ ದೇಗುಲ ಪ್ರವೇಶ ಕುರಿತ ಅರ್ಜಿ ಸಾಂವಿಧಾನಿಕ ಪೀಠಕ್ಕೆ
  • ಶಬರಿಮಲೈ ದೇಗುಲಕ್ಕೆ ಮಹಿಳೆಯ ಪ್ರವೇಶ ಕುರಿತಾದ ಆರ್ಜಿಯನ್ನು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.
  • ವೈಭವದ ದಸರಾ ಮಹೋತ್ಸವ: ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಚಾಮುಂಡೇಶ್ವರಿ
  • ನಂದಿಧ್ವಜಕ್ಕೆ ಸಿಎಂ ಪೂಜೆ: ಜಂಬೂಸವಾರಿಗೆ ಚಾಲನೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited