Untitled Document
Sign Up | Login    
Dynamic website and Portals
  
April 2, 2015

2024ರ ಒಲಂಪಿಕ್ಸ್ ಕ್ರೀಡಾಕೂಟ: ಆಥಿತ್ಯ ವಹಿಸಲು ಉತ್ಸುಕವಾಗಿರುವ ಮೋದಿ ಸರ್ಕಾರ

ಒಲಂಪಿಕ್ಸ್ ಕ್ರೀಡಾಕೂಟದ ಲೋಗೊ(ಸಂಗ್ರಹ ಚಿತ್ರ) ಒಲಂಪಿಕ್ಸ್ ಕ್ರೀಡಾಕೂಟದ ಲೋಗೊ(ಸಂಗ್ರಹ ಚಿತ್ರ)

ನವದೆಹಲಿ : 2024ರ ಒಲಂಪಿಕ್ಸ್ ಕ್ರೀಡಾಕೂಟದ ಆಥಿತ್ಯ ವಹಿಸಲು ಭಾರತ ಚಿಂತನೆ ನಡೆಸುತ್ತಿದೆ. 2024ರ ಒಲಂಪಿಕ್ಸ್ ಆಯೋಜನೆ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ಮೋದಿ, ಅಹಮದಾಬಾದ್ ನಲ್ಲಿ ಒಲಂಪಿಕ್ಸ್ ಕ್ರಿಡಾಕೂಟ ನಡೆಸಲು ಉತ್ಸುಕರಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಅಂತರರಾಷ್ಟ್ರೀಯ ಒಲಂಪಿಕ್‌ ಸಮಿತಿ ಥಾಮ್ಸನ್ ಬಚ್ ಮುಂದಿನ ತಿಂಗಳು ನವದೆಹಲಿಗೆ ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ 2024ರ ಒಲಂಪಿಕ್ಸ್ ಕ್ರೀಡಾ ಕೂಟವನ್ನು ಭಾರತದಲ್ಲಿ ಆಯೋಜಿಸುವ ಬಗ್ಗೆ ಮಾತುಕತೆ ನಡೆಯುವ ಸಾಧ್ಯತೆ ಇದೆ ಎಂದು ಡಿ.ಎನ್.ಎ ಪತ್ರಿಕೆ ವರದಿ ಮಾಡಿದೆ.

ಭಾರತದಲ್ಲಿ ಒಲಂಪಿಕ್ಸ್ ನಡೆಸುವ ಮೋದಿ ಚಿಂತನೆ, ಭಾರತವನ್ನು ಕ್ರೀಡಾ ಕ್ಷೇತ್ರದ ಶಕ್ತಿಕೇಂದ್ರವನ್ನಾಗಿಸಲು ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಂದು ವೇಳೆ ಭಾರತದಲ್ಲಿ ಒಲಂಪಿಕ್ಸ್ ನಡೆಯುವುದಾದಲ್ಲಿ ಅದು ಗುಜರಾತ್ ನಲ್ಲೇ ನಡೆಯಲಿದೆ ಎಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಐ.ಒ.ಸಿಯೊಂದಿಗೆ ಈಗಾಗಲೇ ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ಅಜಿತ್ ಮೋಹನ್ ಶರಣ್ ಮಾತುಕತೆ ನಡೆಸಿದ್ದಾರೆ ಎಂದು ಡಿ.ಎನ್.ಎ ವರದಿ ಮಾಡಿದೆ.

2016ರ ಒಲಂಪಿಕ್ಸ್ ಕ್ರೀಡಾ ಕೂಟದಲ್ಲಿ ಬ್ರೆಜಿಲ್ ಆಥಿತ್ಯ ವಹಿಸಲಿದೆ. ಇದಾದ ಬಳಿಕ 2020ರ ಒಲಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸುವ ಅವಕಾಶ ಜಪಾನ್ ದೇಶಕ್ಕೆ ಸಿಕ್ಕಿದೆ. ಇದರ ನಂತರ ನಡೆಯಲಿರುವ 2024ರ ಕ್ರೀಡಾಕೂತವನ್ನು ಆಯೋಜಿಸಲು ಭಾರತ ಉತ್ಸುಕವಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Sports

ಪದ್ಮಭೂಷಣ ಪ್ರಶಸ್ತಿಗೆ ಪಿ.ವಿ ಸಿಂಧು ಹೆಸರು ಶಿಫಾರಸು
  • ಪದ್ಮಭೂಷಣ ಪ್ರಶಸ್ತಿಗೆ ಪಿ.ವಿ ಸಿಂಧು ಹೆಸರು ಶಿಫಾರಸು
  • ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಹೆಸರನ್ನು ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಗೆ ಕೇಂದ್ರ ಕ್ರೀಡಾ ಸಚಿವಾಲಯ ಶಿಫಾರಸ್ಸು ಮಾಡಿದೆ.
  • ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಗಳು ಅಗತ್ಯ : ರಾಮಲಿಂಗಾರೆಡ್ಡಿ
  • ರಿಯೋ ಒಲಂಪಿಕ್ಸ್ 2016 ಕ್ರೀಡಾ ಉತ್ಸವಕ್ಕೆ ಅದ್ದೂರಿ ತೆರೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited