ನವದೆಹಲಿ : 'ಪೆಟ್ರೋಲ್', ಡೀಸೆಲ್ ದರ ಮತ್ತೆ ಇಳಿಕೆಯಾಗಿದೆ. ಕಳೆದ ತಿಂಗಳಲ್ಲಿ ಅಲ್ಪ ಪ್ರಮಾಣದಲ್ಲಿ ದರ ಇಳಿಕೆಯಾಗಿತ್ತು. ಈ ಬಾರಿಯೂ ಅಲ್ಪ ಪ್ರಮಾಣದ ದರ ಇಳಿಕೆ ಕಂಡುಬಂದಿದೆ.
ಪ್ರತಿ ಲೀಟರ್ ಪೆಟ್ರೋಲ್, ದರದಲ್ಲಿ 49 ಪೈಸೆ ಇಳಿಕೆಯಾಗಿದ್ದರೆ ಡೀಸೆಲ್ ದರದಲ್ಲಿ 1.21ರೂ ಇಳಿಕೆಯಾಗಿದೆ. ಪರಿಷ್ಕೃತ ದರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.
ಕಳೆದ 10 ತಿಂಗಳಿನಿಂದ ಪೆಟ್ರೋಲ್, ಡೀಸೆಲ್ ದರ ನಿರಂತರವಾಗಿ ಇಳಿಕೆಯಾಗುತ್ತಿರುವುದು ವಾಹನ ಸವಾರರಲ್ಲಿ ಸಂತಸ ಮೂಡಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಇಳಿಕೆಯಾದ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗಿದೆ.
ದರ ಇಳಿಕೆಯಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 60 ರೂಪಾಯಿಯಷ್ಟಾದರೆ, ಡೀಸೆಲ್ ದರ 48.50 ರೂಪಾಯಿಯಾಗಲಿದೆ. ಫೆಬ್ರವರಿಯಲ್ಲಿ ಕೇಂದ್ರ ಬಜೆಟ್ ಮಂಡನೆಯಾದ ನಂತರ ಪೇಟ್ರೋಲ್, ಡೀಸೆಲ್ ದರ 3.18ರೂಪಾಯಿ ಏರಿಕೆಯಾಗಿತ್ತು.