Untitled Document
Sign Up | Login    
Dynamic website and Portals
  
March 28, 2015

ಇಸ್ರೋಗೆ 2014ರ ಗಾಂಧಿ ಶಾಂತಿ ಪ್ರಶಸ್ತಿ ಪ್ರಕಟ

ನವದೆಹಲಿ : ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (ಇಸ್ರೋ) 2014ರ ಗಾಂಧಿ ಶಾಂತಿ ಪ್ರಶಸ್ತಿಗೆ ಭಾಜನವಾಗಿದೆ.

ದೇಶಕ್ಕೆ ಬಾಹ್ಯಾಕಾಶ ತಂತ್ರಜ್ಞಾನ ಸೇವೆ ಹಾಗೂ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ ಹಿನ್ನೆಲೆಯಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಅಹಿಂಸಾ ಮಾರ್ಗದ ಮೂಲಕ ಸಾಮಾಜಿಕ, ಆರ್ಥಿಕ, ರಾಜಕೀಯ ಸೇವೆಗೈದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿ 1 ಕೋಟಿ ರೂ. ನಗದು ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿದೆ.

ಇದಕ್ಕೂ ಮೊದಲು ಡಾ.ನೆಲ್ಸನ್‌ ಮಂಡೇಲಾ, ವ್ಯಕ್ಲೇವ್‌ ಹಾವೆಲ್‌, ಡಾ.ಜುಲಿಯಸ್‌ ಕೆ.ನ್ಯೆರೆ, ಬಾಬಾ ಅಮ್ಟೆ, ಆರ್ಚ್‌ ಬಿಶಪ್‌ ಡೆಸ್ಮಂಡ್‌ ಟುಟು, ಬಾಂಗ್ಲಾದೇಶ ಗ್ರಾಮೀಣ ಬ್ಯಾಂಕ್‌, ಭಾರತೀಯ ವಿದ್ಯಾಭವನ, ರಾಮಕೃಷ್ಣ ಮಿಷನ್‌ ಗೆ ನೀಡಲಾಗಿತ್ತು.

 

 

Share this page : 
 

Table 'bangalorewaves.bv_news_comments' doesn't exist