Untitled Document
Sign Up | Login    
Dynamic website and Portals
  
March 26, 2015

ಹೊಸ ಮಾವಿನ ತಳಿಗೆ ಮೋದಿ ಹೆಸರಿಟ್ಟ ಉತ್ತರ ಪ್ರದೇಶದ ಮಾವು ಬೆಳೆಗಾರ

ಹೊಸ ಮಾವಿನ ತಳಿಗೆ ಮೋದಿ ಹೆಸರಿಟ್ಟ ಉತ್ತರ ಪ್ರದೇಶದ ಮಾವು ಬೆಳೆಗಾರ

ಲಖ್ನೌ : 'ಮಾವಿನ ಸಸಿ'ಗಳನ್ನು ಕಸಿ ಮಾಡುವ ಮೂಲಕ ಹೊಸ ತಳಿಗಳನ್ನು ರೂಪಿಸುವುದರಲ್ಲಿ ಖ್ಯಾತಿ ಪಡೆದಿರುವ ಉತ್ತರ ಪ್ರದೇಶದ ಮಾವು ಬೆಳೆಗಾರ ತಾವು ಅಭಿವೃದ್ಧಿ ಪಡಿಸಿರುವ ಹೊಸ ತಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಟ್ಟಿದ್ದಾರೆ.

ಹಾಜಿ ಕಲೀಮುಲ್ಲಾ ಎಂಬುವವರು, ಕೋಲ್ಕತ್ತಾ ಹಾಗೂ ಉತ್ತರ ಪ್ರದೇಶದ ಪ್ರಸಿದ್ಧ ಮಾವಿನ ತಳಿಗಳ ಕಸಿ ಮಾಡುವ ಮೂಲಕ 'ಮೋದಿ ಮ್ಯಾಂಗೋ' ಎಂಬ ಹೊಸ ತಳಿಯನ್ನು ತಯಾರಿಸಿದ್ದಾರೆ. ಅಷ್ಟೇ ಅಲ್ಲದೇ ಮೋದಿ ಹೆಸರಿನಲ್ಲಿ ತಯಾರಿಸಿರುವ ತಳಿಯ ಹಣ್ಣನ್ನು ಮೋದಿ ಅವರಿಗೆ ತಲುಪಿಸಬೇಕೆಂಬ ಮಹದಾಸೆ ಹೊಂದಿದ್ದಾರೆ.

ಹೊಸ ತಳಿಯ ಮಾವಿನ ಹಣ್ಣು ವಿಶೇಷವಾಗಿದ್ದು, ಇದನ್ನು ಮೋದಿ ಇಷ್ಟಪಡುತ್ತಾರೆ ಎಂದು ಹಾಜಿ ಕಲೀಮುಲ್ಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿವಿಧ ರೀತಿಯ ಮಾವಿನ ತಳಿಗಳನ್ನು ಬೆಳೆಯುವುದರಿಂದಲೇ ಹಾಜಿ ಕಲೀಮುಲ್ಲಾ ಪ್ರಸಿದ್ಧಿ ಪಡೆದಿದ್ದು, ಈತನಿಗೆ ಪದ್ಮಶ್ರೀ ಪುರಸ್ಕಾರವೂ ದೊರೆತಿದೆ. ತಮ್ಮ ಹೊಸ ತಳಿಯ ಹಣ್ಣುಗಳಿಗೆ ಜನಸಾಮಾನ್ಯರಿಂದಲೂ ಮೆಚ್ಚುಗೆ ವ್ಯಕ್ತವಾಗಿದ್ದು, ಪ್ರಧಾನಿ ಮೋದಿಯೂ ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಿದ್ದಾರೆ ಎಂಬುದು ಹಾಜಿ ಕಲೀಮುಲ್ಲಾ ಅವರ ವಿಶ್ವಾಸವಾಗಿದೆ.

ಈ ವ್ಯಕ್ತಿ ಈ ವರೆಗೂ ಸುಮಾರು 300 ವಿಧದ ಮಾವಿನ ತಳಿಗಳ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಮೋದಿ ಮ್ಯಾಂಗೋ ತಳಿಯ ಐದು ಸಸಿಗಳನ್ನು ಬೆಳೆಸಿದ್ದು ಅದನ್ನು ಮೋದಿ ತವರು ರಾಜ್ಯ ಗುಜರಾತ್ ಗೆ ಕಳಿಸುವುದಾಗಿ ಹೇಳಿದ್ದಾರೆ.

ತಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಾರ್ಕ್ ರಾಷ್ಟ್ರಗಳ ನಾಯಕರನ್ನು ಆಹ್ವಾನಿಸಿದ್ದ ಪ್ರಧಾನಿ ಅವರ ವ್ಯಕ್ತಿತ್ವವೇ ಹೊಸ ಮಾವಿನ ತಳಿಗೆ ಮೋದಿ ಹೆಸರನ್ನಿಡಲು ಪ್ರೇರಣೆ ಎಂದು ಹಾಜಿ ಕಲೀಮುಲ್ಲಾ ಹೇಳಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Agriculture & Environment

ವರುಣನ ಆರ್ಭಟಕ್ಕೆ ತತ್ತರಿಸಿದ ಜನತೆ;ಏಳು ಜನರು ಸಾವು ಇನ್ನೂ ಎರಡುದಿನ ಕಾಲ ಭಾರೀ ಮಳೆ ಎಚ್ಚರಿಕೆ
  • ವರುಣನ ಆರ್ಭಟಕ್ಕೆ ತತ್ತರಿಸಿದ ಜನತೆ;ಏಳು ಜನರು ಸಾವು ಇನ್ನೂ ಎರಡುದಿನ ಕಾಲ ಭಾರೀ ಮಳೆ ಎಚ್ಚರಿಕೆ
  • ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸುರಿದ ಭಾರಿ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಅಮಳೆ ಅವಾಂತರಗಳಿಂದ ಸಂಭವಿಸಿದ ಅನಾಹುತಗಳಲ್ಲಿ ಏಳು ಜನರು ನೀರುಪಾಲಾಗಿದ್ದಾರೆ.
  • ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಬಿಹಾರ, ಒಡಿಶಾದಲ್ಲಿ ಚಂಡಮಾರುತ
  • ವರುಣನ ಅರ್ಭಟಕ್ಕೆ 8 ಜನರು ಬಲಿ: ಮೃತರ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ಪರಿಹಾರ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited