Untitled Document
Sign Up | Login    
Dynamic website and Portals
  
March 25, 2015

ಆರ್.ಎಸ್.ಎಸ್ ಉಗ್ರ ಸಂಘಟನೆ ಎಂದು ಘೋಷಿಸಲು ಕೋರಿದ್ದ ಅರ್ಜಿಗೆ ಅಮೆರಿಕಾ ವಿರೋಧ

ಆರ್.ಎಸ್.ಎಸ್ ಜಾಥಾ(ಸಂಗ್ರಹ ಚಿತ್ರ) ಆರ್.ಎಸ್.ಎಸ್ ಜಾಥಾ(ಸಂಗ್ರಹ ಚಿತ್ರ)

ವಾಷಿಂಗ್ ಟನ್ : ರಾಷ್ಟ್ರೀಯ ಸ್ವಯಂ ಸೇವಕ ಸಂಘಟ(ಆರ್.ಎಸ್.ಎಸ್)ನೆಯನ್ನು ಉಗ್ರ ಸಂಘಟನೆ ಎಂದು ಘೋಷಿಸಲು ಕೋರಿ, ಅಮೆರಿಕಾಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆ ಅಲ್ಲಿನ ಕೋರ್ಟ್ ಗೆ ಸಲ್ಲಿಸಿದ್ದ ಮನವಿಗೆ ಅಮೆರಿಕಾ ಸರ್ಕಾರ ವಿರೋಧ ವ್ಯಕ್ತಪಡಿಸಿದೆ.

ಆರ್.ಎಸ್.ಎಸ್ ನ್ನು ಉಗ್ರ ಸಂಘಟನೆಯೆಂದು ಘೋಷಿಸಬೇಕೆಂದು ಅಮೆರಿಕಾಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆ ಕೋರ್ಟ್ ನಲ್ಲಿ ದಾವೆ ಹೂಡಿತ್ತು. ಈ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಅಮೆರಿಕಾ ಸರ್ಕಾರ, ಪ್ರಕರಣವನ್ನು ಹಿಂಪಡೆಯಲು ನಿರ್ಧರಿಸಿರುವುದಾಗಿ ತಿಳಿಸಿದೆ. ಈ ಬಗ್ಗೆ ಏಪ್ರಿಲ್ 14ರ ವರೆಗೆ ಕಾಲಾವಕಾಶ ನೀಡಬೇಕೆಂದು ಕೋರ್ಟ್ ಗೆ ಮನವಿ ಮಾಡಿದೆ.

ಸಿಖ್ಸ್ ಫಾರ್ ಜಸ್ಟೀಸ್(ಎಸ್.ಎಫ್.ಜೆ) ಪ್ರಕಾರ, ಆರ್.ಎಸ್.ಎಸ್ ಪ್ರತಿಗಾಮಿ ಸಿದ್ಧಾಂತ ಹೊಂದಿರುವ ಸಂಘಟನೆಯಾಗಿದ್ದು, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದಕ್ಕಾಗಿ ಹಿಂಸಾತ್ಮಕ ಪ್ರಚಾರ ನಡೆಸುತ್ತಿದೆ ಆದ್ದರಿಂದ ಅದನ್ನು ಉಗ್ರ ಸಂಘಟನೆಯನ್ನಾಗಿ ಘೋಷಿಸಬೇಕೆಂದು ಎಸ್.ಎಫ್.ಜೆ ಕೋರ್ಟ್ ಮೆಟ್ಟಿಲೇರಿತ್ತು.

ಇದಕ್ಕೆ ಅಮೆರಿಕಾ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಕೇಸ್ ನ್ನು ವಾಪಸ್ ಪಡೆಯುವುದಾಗಿ ಹೇಳಿದೆ. ಆದರೆ ಇದಕ್ಕಾಗಿ ಏ.14ರ ವರೆಗೂ ಕಾಲಾವಕಾಶ ನೀಡಬೇಕೆಂದು ಕೋರ್ಟ್ ಗೆ ಸರ್ಕಾರ ಮನವಿ ಮಾಡಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited