Untitled Document
Sign Up | Login    
Dynamic website and Portals
  
March 24, 2015

ವಿಶ್ವಕಪ್ ಕ್ರಿಕೆಟ್ : ಪ್ರಥಮ ಬಾರಿಗೆ ಫೈನಲ್ ಪ್ರವೇಶಿಸಿದ ನ್ಯೂಜಿಲ್ಯಾಂಡ್ ತಂಡ

ಆಕ್ಲೆಂಡ್ : 'ದಕ್ಷಿಣ ಆಫ್ರಿಕಾ' ಹಾಗೂ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ನ್ಯೂಜಿಲ್ಯಾಂಡ್ ಜಯಗಳಿಸಿದ್ದು ಫೈನಲ್ ಪ್ರವೇಶಿಸಿದೆ.

ಇದೇ ಪ್ರಥಮಬಾರಿಗೆ ನ್ಯೂಜಿಲ್ಯಾಂಡ್ ತಂಡ, ವಿಶ್ವಕಪ್ ಫೈನಲ್ ಪ್ರವೇಶಿಸಿದೆ. ಸೆಮಿ ಫೈನಲ್‍ ನಲ್ಲಿ ಗೆಲ್ಲಲು ನ್ಯೂಜಿಲ್ಯಾಂಡ್ ಗೆ ದಕ್ಷಿಣ ಆಫ್ರಿಕಾ ತಂಡ 298 ರನ್ ಗಳ ಕಠಿಣ ಸವಾಲೊಡ್ಡಿತ್ತು. 43 ಓವರ್ 298ರನ್ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್, ಒಂದು ಎಸೆತ ಬಾಕಿ ಇರುವಾಗಲೇ ಗುರಿಯನ್ನು ತಲುಪಿ ಪಂದ್ಯವನ್ನು ಗೆದ್ದಿದೆ.

ದಕ್ಷಿಣ ಆಫ್ರಿಕಾ ತಂಡ ಬ್ಯಾಟಿಂಗ್ ಮಾಡುತ್ತಿರುವ ವೇಳೆ ಮಳೆ ಬಂದ ಕಾರಣ 50 ಓವರ್ ಗಳ ಪಂದ್ಯವನ್ನು ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 43 ಓವರ್ ಗಳಿಗೆ ಕಡಿತಗೊಳಿಸಲಾಯಿತು. ಸವಾಲಿನ ಮೊತ್ತವನ್ನು ಬೆನ್ನತ್ತಿದ ನ್ಯೂಜಿಲ್ಯಾಂಡ್ ಗೆ ಆಸರೆಯಾಗಿದ್ದ ಗ್ರ್ಯಾಂಟ್‌ ಇಲಿಯಟ್‌ , ವೆಟ್ಟೋರಿ ತಂಡವನ್ನು ಫೈನಲ್ ಪ್ರವೇಶಿಸುವ ನಿಟ್ಟಿನಲ್ಲಿ ದಕ್ಷಿಣ ಆಫ್ರಿಕಾದ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದರೆ, ಆರಂಭದಲ್ಲಿ ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್‌ ನಾಯಕ, ಮೆಕಲಮ್‌ 22 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿ ಮೊರ್ಕೆಲ್‌ ಎಸೆತದಲ್ಲಿ ಪೆವಿಲಿಯನ್‌ಗೆ ಮರಳಿದರು.

ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಗುಪ್ಟಿಲ್‌ 34 ರನ್‌ ಗಳಿಸಿ ರನ್‌ ಔಟ್‌ ಗೆ ಬಲಿಯಾದರು. ಟಯ್ಲರ್‌ 30 ರನ್‌ ಗಳಿಸಿ ಪೆವಿಲಿಯನ್ ಗೆ ಮರಳಿದರು. ಆಕರ್ಷಕ ಅರ್ಧಶತಕ ಸಿಡಿಸಿದ ಕೋರಿ ಆ್ಯಂಡರ್ಸನ್‌ 58 ರನ್‌ ಗಳಿಸಿ ಔಟಾದರು. ರೊಂಚಿ 8 ರನ್‌ಗೆ ಪೆಲಿವಿಯನ್‌ ಸೇರಿದರು.

ಅಮೋಘ ಬ್ಯಾಟಿಂಗ್‌‌ ಪ್ರದಶಿಸಿದ ಗ್ರ್ಯಾಂಟ್‌ ಇಲಿಯಟ್‌ ಔಟಾಗದೆ 84 ರನ್‌ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. 6 ಬಾರಿ ಸೆಮಿಫೈನಲ್‌ ನಲ್ಲಿ ಮುಗ್ಗರಿಸಿದ್ದ ನ್ಯೂಜಿಲ್ಯಾಂಡ್ ಇದೇ ಮೊದಲ ಬಾರಿಗೆ ವಿಶ್ವಕಪ್ ನ ಫೈನಲ್ ಗೆ ಪ್ರವೇಶಿಸಿದೆ. ಭಾನುವಾರ ನಡೆಯಲಿರುವ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ, ಆಸ್ಟ್ರೇಲಿಯಾ ಅಥವಾ ಭಾರತವನ್ನು ಎದುರಿಸಬೇಕಿದೆ

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Sports

ಪದ್ಮಭೂಷಣ ಪ್ರಶಸ್ತಿಗೆ ಪಿ.ವಿ ಸಿಂಧು ಹೆಸರು ಶಿಫಾರಸು
  • ಪದ್ಮಭೂಷಣ ಪ್ರಶಸ್ತಿಗೆ ಪಿ.ವಿ ಸಿಂಧು ಹೆಸರು ಶಿಫಾರಸು
  • ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಹೆಸರನ್ನು ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಗೆ ಕೇಂದ್ರ ಕ್ರೀಡಾ ಸಚಿವಾಲಯ ಶಿಫಾರಸ್ಸು ಮಾಡಿದೆ.
  • ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಗಳು ಅಗತ್ಯ : ರಾಮಲಿಂಗಾರೆಡ್ಡಿ
  • ರಿಯೋ ಒಲಂಪಿಕ್ಸ್ 2016 ಕ್ರೀಡಾ ಉತ್ಸವಕ್ಕೆ ಅದ್ದೂರಿ ತೆರೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited