Untitled Document
Sign Up | Login    
Dynamic website and Portals
  
March 21, 2015

ಕ್ರಿಕೆಟ್ ವಿಶ್ವಕಪ್: ಸೆಮಿಫೈನಲ್ ಪ್ರವೇಶಿಸಿದ ನ್ಯೂಜಿಲ್ಯಾಂಡ್

ಕ್ರಿಕೆಟ್ ವಿಶ್ವಕಪ್: ಸೆಮಿಫೈನಲ್ ಪ್ರವೇಶಿಸಿದ ನ್ಯೂಜಿಲ್ಯಾಂಡ್

ವೆಲ್ಲಿಂಗ್ಟನ್ : ಮಾ.21ರಂದು ನಡೆದ ನ್ಯೂಜಿಲ್ಯಾಂಡ್- ವೆಸ್ಟ್ ಇಂಡೀಸ್ ವಿಶ್ವಕಪ್ ಕ್ವಾರ್ಟರ್ ಫೈನಲ್ ನಲ್ಲಿ ಭರ್ಜರಿ ಜಯಗಳಿಸಿರುವ ನ್ಯೂಜಿಲ್ಯಾಂಡ್ ತಂಡ ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ ಗೆ ಪ್ರವೇಶಿಸಿದೆ.

394 ರನ್‍ಗಳ ಕಠಿಣ ಸವಾಲು ಪಡೆದ ವೆಸ್ಟ್ ಇಂಡೀಸ್‍ ನ್ನು 30.3 ಓವರ್ ಗಳಲ್ಲಿ 250 ರನ್‍ ಗಳಿಗೆ ಆಲೌಟ್ ಮಾಡಿದ ನ್ಯೂಜಿಲ್ಯಾಂಡ್ ಸೆಮಿಫೈನಲ್ ಪ್ರವೇಶಿಸಿದೆ. ಮಾರ್ಟಿನ್ ಗುಪ್ಟಿಲ್ ಔಟಾಗದೇ 237 ರನ್ ಹಾಗೂ ಟೈಲರ್ 42 ರನ್, ಕೇನೆ ವಿಲಿಯಮ್ಸ್ 33 ರನ್ ಗಳಿಸುವ ಮೂಲಕ ನ್ಯೂಜಿಲ್ಯಾಂಡ್ ನಿಗದಿತ 50 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 393 ರನ್‍ಗಳಿಸಿತ್ತು.

ನ್ಯೂಜಿಲ್ಯಾಂಡ್ ಸವಾಲನ್ನು ಸ್ವೀಕರಿಸಿದ ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. 33 ಎಸೆತಗಳಲ್ಲಿ 61 ರನ್‍ಗಳಿಸಿದ್ದರು. ಆದರೆ ಮಿಲ್ನೆ ಬೌಲಿಂಗ್ ಬೌಲ್ಡ್ ಆದಾಗ ವೆಸ್ಟ್ ಇಂಡೀಸ್‍ ಸೆಮಿ ಫೈನಲ್ ತಲುಪುವ ಆಸೆಯನ್ನು ಕೈಬಿಡಬೇಕಾಯಿತು. ಕೊನೆಯಲ್ಲಿ ನಾಯಕ ಹೋಲ್ಡರ್ 42 ರನ್‍ ಗಳಿಸಿದರೂ ಉಳಿದ ಆಟಗಾರರು ಬೇಗನೇ ವಿಕೆಟ್ ಒಪ್ಪಿಸಿದ ಕಾರಣ ವೆಸ್ಟ್ ಇಂಡೀಸ್ ಪರಾಭವಗೊಳ್ಳಬೇಕಾಯಿತು.

ಕ್ವಾರ್ಟರ್ ಫೈನಲ್ ಪಂದ್ಯ ಕೆಲವು ದಾಖಲೆಗಳಿಗೂ ಸಾಕ್ಷಿಯಾಯಿತು. ದ್ವಿಶತಕ ಬಾರಿಸಿದ ಮೊದಲ ನ್ಯೂಜಿಲ್ಯಾಂಡ್ ಆಟಗಾರ ಎಂಬ ಖ್ಯಾತಿಗೆ ಮಾರ್ಟಿನ್ ಗುಪ್ಟಿಲ್ ಪಾತ್ರರಾದರು. ಅಷ್ಟೇ ಅಲ್ಲದೇ ಏಕದಿನ ವಿಶ್ವಕಪ್ಕ್ರಿಕೆಟ್‌ ಇತಿಹಾಸದಲ್ಲಿ ಆಟಗಾರನೊಬ್ಬ ಗಳಿಸಿದ ಗರಿಷ್ಠ ಮೊತ್ತ ಎಂಬ ದಾಖಲೆಯನ್ನೂ ಗಳಿಸಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Sports

ಪದ್ಮಭೂಷಣ ಪ್ರಶಸ್ತಿಗೆ ಪಿ.ವಿ ಸಿಂಧು ಹೆಸರು ಶಿಫಾರಸು
  • ಪದ್ಮಭೂಷಣ ಪ್ರಶಸ್ತಿಗೆ ಪಿ.ವಿ ಸಿಂಧು ಹೆಸರು ಶಿಫಾರಸು
  • ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಹೆಸರನ್ನು ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಗೆ ಕೇಂದ್ರ ಕ್ರೀಡಾ ಸಚಿವಾಲಯ ಶಿಫಾರಸ್ಸು ಮಾಡಿದೆ.
  • ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಗಳು ಅಗತ್ಯ : ರಾಮಲಿಂಗಾರೆಡ್ಡಿ
  • ರಿಯೋ ಒಲಂಪಿಕ್ಸ್ 2016 ಕ್ರೀಡಾ ಉತ್ಸವಕ್ಕೆ ಅದ್ದೂರಿ ತೆರೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited