Untitled Document
Sign Up | Login    
Dynamic website and Portals
  
March 18, 2015

ಆಜಂ ಖಾನ್ ವಿರುದ್ಧ ಫೇಸ್ ಬುಕ್ ನಲ್ಲಿ ಪೋಸ್ಟ್: ವಿದ್ಯಾರ್ಥಿ ಬಂಧನ

ಲಖ್ನೌ : 'ಉತ್ತರ ಪ್ರದೇಶ' ಸಚಿವ ಆಜಂ ಖಾನ್ ವಿರುದ್ಧ ಫೇಸ್ ಬುಕ್ ನಲ್ಲಿ ಕಾಮೆಂಟಿಸಿದ್ದಕ್ಕೆ ಪ್ರಥಮ ಪಿಯುಸಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬರೇಲಿ ಜಿಲ್ಲೆಯ ವಿಕಿ ಖಾನ್ ಎಂಬ ವಿದ್ಯಾರ್ಥಿ ವಿರುದ್ಧ ಆಜಂ ಖಾನ್ ಆಪ್ತ ಫಸಾಹತ್ ಅಲಿ ಖಾನ್ ಮಾ.15ರಂದು ದೂರು ದಾಖಲಿಸಿದ್ದರು. ದೂರಿನ ಅನ್ವಯ ಕ್ರಮ ಕೈಗೊಂಡಿರುವ ಪೊಲೀಸರು ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. ಸಚಿವರ ವಿರುದ್ಧ ಕಾಮೆಂಟಿಸಿದ್ದಕ್ಕಾಗಿ ಉತ್ತರ ಪ್ರದೇಶದ ನ್ಯಾಯಾಲಯ ವಿದ್ಯಾರ್ಥಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಆಜಂ ಖಾನ್ ವಿರುದ್ಧ ಹಾಕಲಾಗಿದ್ದ ಪೋಸ್ಟನ್ನು ತಮ್ಮ ಮಗ ಹಂಚಿಕೆ ಮಾಡಿದ್ದಾನೆ(ಶೇರ್ ಮಾಡಿದ್ದಾನೆ) ಆದರೆ ಆತನೇ ಸ್ವತಃ ಯಾವುದೇ ಪೋಸ್ಟ್ ಗಳನ್ನು ಅಪ್ಲೋಡ್ ಮಾಡಿಲ್ಲ ಎಂದು ಬಂಧನಕ್ಕೊಳಗಾಗಿರುವ ವಿದ್ಯಾರ್ಥಿಯ ಪೋಷಕರು ಹೇಳಿದ್ದಾರೆ.

ಆಜಂ ಖಾನ್ ಹೆಸರಿನಲ್ಲಿ ಬಂಧಿತ ವಿದ್ಯಾರ್ಥಿ ವಿಕಿ ಖಾನ್ ವಿವಾದಾತ್ಮಕ ಮತ್ತು ಪ್ರಚೋದನಾತ್ಮಕ ಪೋಸ್ಟ್ ಗಳನ್ನು ಫೇಸ್ ಬುಕ್ ನಲ್ಲಿ ಹಾಕಿದ್ದಾನೆ. ಇದರಿಂದಾಗಿ ಹಿಂದೂ-ಮುಸ್ಲಿಮರ ಭಾವನೆಗಳಿಗೆ ಧಕ್ಕೆಯುಂಟಾಗುತ್ತದೆ. ಆದ್ದರಿಂದ ವಿಕಿ ಖಾನ್ ವಿರುದ್ಧ ದೂರು ನೀಡಿರುವುದಾಗಿ ಆಜಂ ಖಾನ್ ಮಾಧ್ಯಮ ಕಾರ್ಯದರ್ಶಿ ಫಸಾಹತ್ ಅಲಿ ಖಾನ್ ಹೇಳಿದ್ದಾರೆ.

ತಾನು ಪೋಸ್ಟ್ ಮಾಡುತ್ತಿರುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡುವಂಥದ್ದು ಎಂದು ತನಗೆ ಗೊತ್ತಿರಲಿಲ್ಲ ಎಂದು ವಿಚಾರಣೆ ವೇಳೆ ವಿಕಿ ಖಾನ್ ಹೇಳಿದ್ದಾನೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited