Untitled Document
Sign Up | Login    
Dynamic website and Portals
  
March 13, 2015

2015-16ನೇ ಸಾಲಿನ ರಾಜ್ಯ ಬಜೆಟ್ ಮುಖ್ಯಾಂಶಗಳು

ಬಜೆಟ್ ಮಂಡಿಸುತ್ತಿರಿವ ಸಿ.ಎಂ ಸಿದ್ದರಾಮಯ್ಯ ಬಜೆಟ್ ಮಂಡಿಸುತ್ತಿರಿವ ಸಿ.ಎಂ ಸಿದ್ದರಾಮಯ್ಯ

ಬೆಂಗಳೂರು : 2015-16ನೇ ಸಾಲಿನ ಬಜೆಟ್ ಮಂಡನೆ ಪ್ರಾರಂಭವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ 10ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ.

ಸಾಮಾಜಿಕ ನ್ಯಾಯ, ಕೋಮು ಸೌಹಾರ್ದತೆ ಕಾಪಾಡುವುದೇ ನಮ್ಮ ಸರ್ಕಾರದ ಪ್ರಮುಖ ಆದ್ಯತೆ, ಸರ್ಕಾರದ ಆದ್ಯತೆಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಯಶಸ್ವಿ ಯೋಜನೆಗಳನ್ನು ಬಲಗೊಳಿಸಿದ್ದೇವೆ ಎಂದು ಸಿ.ಎಂ ಸಿದ್ದರಾಮಯ್ಯ ಹೇಳಿದ್ದಾರೆ. ಲಘು ನೀರಾವರಿ ನೀತಿ 2015-16 ಜಾರಿ ಮಾಡುತ್ತೇವೆ ಎಂದು ಸಿ.ಎಂ ಭರವಸೆ ನೀಡಿದ್ದಾರೆ.

ಬಜೆಟ್ ಪ್ರಮುಖಾಂಶಗಳು

*ಮಂಡ್ಯ, ಮುಧೋಳದಲ್ಲಿ ಬೆಲ್ಲದ ಸಾವಯವ ಪಾರ್ಕ್ ಸ್ಥಾಪನೆ
*ರಾಜ್ಯದ 25 ಜಿಲ್ಲೆಗಳಲ್ಲಿ ಕೃಷಿ ಭಾಗ್ಯ ಯೋಜನೆ ಜಾರಿ. ಶೇ.8.9ರಲ್ಲಿ ಪ್ರಸಕ್ತ ಸಾಲಿನ ಸೇವಾ ವಲಯದ ಬೆಳವಣಿಗೆ
*500 ಕೋಟಿ ರೂ ವೆಚ್ಚದಲ್ಲಿ ಕೃಷಿ ಭಾಗ್ಯ
*ರಾಜ್ಯದಲ್ಲಿ ಪಶುಭಾಗ್ಯ ಯೋಜನೆ ಜಾರಿ
*ಮಳೆಯಾಶ್ರಿತ ರೈತರಿಗೆ ಅನೂಕೂಲವಾಗುವ ಯೋಜನೆ
*ನೀರಾ ಇಳಿಸಲು ಅಬಕಾರಿ ಇಲಾಖೆಯಿಂದ ರೈತರಿಗೆ ಅನುಮತಿ
*ವ್ಯಾಟ್ಃ ಶೇ.17ರಿಂದ 20ರಷ್ಟು ಏರಿಕೆ
*130 ಟನ್ ಆಹಾರ ಉತ್ಪಾದನೆ ಗುರಿ
*ಹಿರಿಯ ನಾಗರಿಕರಿಗೆ ವೃತ್ತಿ ತೆರಿಗೆ ವಿನಾಯ್ತಿ.
*ಡಿಸೇಲ್ ಪೆಟ್ರೋಲ್ ಮೇಲೆ ಶೇ.1ರಷ್ಟು ತೆರಿಗೆ ಏರಿಕೆ
*ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೂ ವಿದ್ಯಾಸಿರಿ ಯೋಜನೆ ವಿಸ್ತರಣೆ
*ಬೀದರ್ ಜಿಲ್ಲೆಯನ್ನು ಮಿಲ್ಕ್ ಶೆಡ್ ಪ್ರದೇಶವಾಗಿ ಅಭಿವೃದ್ಧಿಗೊಳಿಸಲು ಕ್ರಮ
*ಕೊಳಚೆ ನೀರು ಸಂಸ್ಕರಿಸಿ ಕೆರೆಗೆ ತುಂಬುವ ಯೋಜನೆ
*ರೇಷ್ಮೆ ಬೆಳೆ ಉತ್ತೇಜಿಸಲು ರೈತ ಉತ್ಪಾದಕಾ ಸಂಘ ಸ್ಥಾಪನೆ
*ಕೇಬಲ್ ಮೇಲಿನ ತೆರಿಗೆ ಶೇ5ರಷ್ಟು ಇಳಿಕೆ
*ನಿರಂತರ ಬರಕ್ಕೆ ತುತ್ತಾದ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್
*ವನ್ಯಜೀವಿಗಳಿಂದ ಬೆಳೆಗೆ ಹಾನಿ ಃ ಪರಿಹಾರದ ಮೊತ್ತ ಹೆಚ್ಚಳಕ್ಕೆ ಕ್ರಮ
*ತಾಲೂಕಿಗೊಂದು ಹಸಿರು ಶಾಲಾವನ ಅಭಿವೃದ್ಧಿ
*192 ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿ
*ಜಲಸಂಪನ್ಮೂಲ ಇಲಾಖೆಗೆ 12956ಕೋಟಿ ರೂ ಮೀಸಲು
*ಕೃಷಿ ತ್ಯಾಜ್ಯಗಳಿಂದ ತಯಾರಿಸಿದ ವಸ್ತುಗಳಿಗೆ ತೆರಿಗೆ ವಿನಾಯ್ತಿ
*ಮೊಬೈಲ್, ಮೊಬೈಲ್ ಚಾರ್ಜರ್ ಮೇಲೆ, ಶೇ.5ರಷ್ಟು ತೆರಿಗೆ ಇಳಿಕೆ


*ಶಿವಮೊಗ್ಗದಲ್ಲಿ ಕೃಷಿ, ತೋಟಗಾರಿಕಾ ವಿಜ್ಞಾನಗಳ ಹೊಸ ಕ್ಯಾಂಪಸ್
*ಬೆಳೆ ಸಮಸ್ಯೆ ನಿವಾರಣಗೆ ಕೃಷಿ ಅಭಿಯಾನ
*ಯಶಸ್ವಿನಿ ಯೋಜನೆಗೆ 110 ಕೋಟಿ ರು. ಅನುದಾನ
*ಮೀನುಗಾರಿಕೆ ಚಟುವಟಿಕೆ ಬಗ್ಗೆ ಮಾಹಿತಿ ನೀಡಲು ಮತ್ಸ್ಯ ಮೇಳ
*ಕೆ.ಆರ್.ಎಸ್ ಜಲಾಶಯದ ಬೃಂದಾವನ ವಿಶ್ವ ದರ್ಜೆಗೆ ಏರಿಕೆ
*219 ನಗರಗಳಲ್ಲಿ ಸ್ವಚ್ಛತಾ ಅಭಿಯಾನ
*ಹಾವೇರಿಯಲ್ಲಿ ತೋಟಗಾರಿಕಾ ಕಾಲೇಜು
*ಸರ್ಜಾಪುರ ಹೊರವರ್ತುಲ ರಸ್ತೆಯಿಂದ ದೊಮ್ಮಸಂದ್ರದ ವರೆಗೆ ರಸ್ತೆ ಅಗಲೀಕರಣ
*ಆಯ್ದ 25 ಸ್ಥಳಗಳಲ್ಲಿ ಸ್ಕೈವಾಕ್ ನಿರ್ಮಾಣ
*5 ಸಾವಿರ ನಿವೇಶನ ನಿರ್ಮಾಣ
*ಹೆಬ್ಬಾಳ ಜಂಕ್ಷನ್ ನ ಕೆಳಸೇತುವೆ ಮೇಲ್ಸೇತುವೆ ವಿಸ್ತರಣೆ
*ಮಂಗಳೂರು ವಿವಿಯಲ್ಲಿ ರಾಣಿ ಅಬ್ಬಕ್ಕ ಪೀಠ ಸ್ಥಾಪನೆ, ಇದಕ್ಕಾಗಿ ರು.1 ಕೋಟಿ ಮೀಸಲು
*ಮೈಸೂರು ವಿವಿ ಶತಮಾನೋತ್ಸವಕ್ಕಾಗಿ ರು.50 ಕೋಟಿ ಮೀಸಲು, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಲ್ಲಿ ಕಲಿಕಾ ಪರಿಣಾಮಕ್ಕಾಗಿ ರು.40 ಕೋಟಿ ವೆಚ್ಚದಲ್ಲಿ ಅಭ್ಯಾಸ ಯೋಜನೆ ಜಾರಿ.
*ಬರಪೀಡಿತ ಜಿಲ್ಲೆಗಳಲ್ಲಿ ಸೂಕ್ಷ್ಮ ನೀರಾವರಿ ಪದ್ಧತಿ ಜಾರಿ
*ಶಿಂಷಾ ಅಣೆಕಟ್ಟಿನ ಬಲದಂಡೆ ಕಾಲುವೆಗಳ ಅಭಿವೃದ್ಧಿ
*ದಾವಣಗೆರೆ, ಚಿತ್ರದುರ್ಗ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ
*ಅಂಗನವಾಡಿ ಸಹಾಯಕಿಯರ ಪ್ರೋತ್ಸಾಹ ಧನ 250 ರೂ. ಹೆಚ್ಚಳ,
*13 ಪುರಸಭೆಗಳನ್ನು ನಗರಸಭೆಯನ್ನಾಗಿ ಮಾರ್ಪಾಡು.
*ಮಹಿಳೆಯರ ತುರ್ತು ಚಿಕಿತ್ಸೆಗಾಗಿ ರು. 2 ಕೋಟಿ ಮೀಸಲು


* ಅಂತರ್ಜಾತಿ ವಿವಾಹಕ್ಕೆ 2 ಲಕ್ಷ ರೂ ಪ್ರೋತ್ಸಾಹ ಧನ
*ಸರಳ ವಿವಾಹವಾಗುವ ದಂಪತಿಗಳಿಗೆ 50 ಸಾವಿರ ನಗದು.
*ಬಡತನರೇಖೆಗಿಂತ ಮೇಲಿರುವವರಿಗೆ ರಾಜೀವ್ ಗಾಂಧಿ ಆರೋಗ್ಯ ಭಾಗ್ಯ ಯೋಜನೆ
*ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪರ್ಯಾಯ ರಸ್ತೆ
*ಸಾಲುಮರದ ತಿಮ್ಮಕ್ಕನ ನೆರಳು ಯೋಜನೆ ಜಾರಿ. 3 ಸಾವಿರ ಕಿ.ಮೀ ರಸ್ತೆ ಅಕ್ಕಪಕ್ಕ ಗಿಡ ನೆಡುವ ಯೋಜನೆ
*ಶಾದಿ ಮಹಲ್, ಸಮುದಾಯ ಭವನಗಳಿಗೆ 60 ಕೋಟಿ ರೂ
*ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಸ್ಮಾರಕ ಅಭಿವೃದ್ಧಿಗೆ 2ಕೋಟಿ ರೂಪಾಯಿ
*ಜೈನ ದೇಗುಗಳ ಅಭಿವೃದ್ಧಿಗೆ 2ಕೋಟಿ ರೂ
*ಸಕಾಲ ವ್ಯಾಪ್ತಿಗೆ ಸ್ಪೆಷಲ್ ಅಕೌಂಟಿಂಗ್ ಸ್ಕೀಮ್
*ಸ್ಕೌಟ್ಸ್ ಗೈಡ್ಸ್ ಸಂಸ್ಥೆಗೆ 5 ಕೋಟಿ ಅನುದಾನ
*ದೇವಸ್ಥಾನಗಳಲ್ಲಿ ಸ್ವಚ್ಛತೆಗೆ ಆದ್ಯತೆ
*ಕೊಲ್ಲೂರು ಮೂಕಾಂಬಿಕೆ, ಗಾಣಗಾಪುರ ಶ್ರೀ ದತ್ತತ್ರೇಯ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ನಂಜನಗೂಡಿನ ನಂಜುಡೇಶ್ವರ ದೇವಸ್ಥಾನ, ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದ ಅಭಿವೃದ್ಧಿಗೆ ಆದ್ಯತೆ
*ನಗರ ಪ್ರದೇಶದಲ್ಲಿ 50 ಸಾವಿರ ಮನೆ ನಿರ್ಮಾಣ
*ಅತಿಕ್ರಮಣಗೊಂಡ ವಕ್ಫ್ ಆಸ್ತಿ ತೆರವಿಗೆ ಕ್ರಮ
*ಮೈಸೂರಿನಲ್ಲಿ 100 ಎಕರೆ ಪ್ರದೇಶದಲ್ಲಿ ಚಿತ್ರ ನಗರಿ ನಿರ್ಮಾಣ
*ರಾಷ್ಟ್ರೀಯ ಅಂತಾರಾಷ್ಟ್ರೀಯ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳಿಗೆ ಉತ್ತೇಜನ
*ಸೀಮೆಎಣ್ಣೆ, ಬತ್ತಿ ಸ್ಟವ್ ಮೇಲಿನ ತೆರಿಗೆ ಶೇ.14.5 ರಿಂದ ಶೇ.5.5 ಇಳಿಕೆ
*500 ರೂ ಒಳಪಟ್ಟ ಪಾದರಕ್ಷೆಗಳಿಗೆ ತೆರಿಗೆ ವಿನಾಯ್ತಿ
*ಫೀಲ್ಡ್ ಮಾರ್ಷಲ್ ಕಾರ್ಯಪ್ಪ ನಿವಾಸವನ್ನು ವಸ್ತು ಸಂಗ್ರಹಾಲಯವಾಗಿ ಅಭಿವೃದ್ಧಿಪಡಿಸಲು 1ಕೋಟಿ ರೂ
*ಶಿವರಾಮ ಕಾರಂತರ ಸ್ಮಾರಕ ನಿರ್ಮಾಣ 1 ಕೋಟಿ
*ಆದಿ ಕವಿ ಪಂಪನ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆಗೆ 1 ಕೋಟಿ ರೂಪಾಯಿ
*ಅಲ್ಪಸಂಖ್ಯಾತರ ಕಲ್ಯಾಣಕ್ಕೆ 1 ಸಾವಿರ ಕೋಟಿ
*ಇಂಧನ ಇಲಾಖೆಗೆ 12878ಕೋಟಿ
*ವಸತಿ ಇಲಾಖೆಗೆ 3829ಕೋಟಿ
*ಎಪಿಎಲ್ ಕಾರ್ಡ್ ಹೊಂದಿರುವವರಿಗೂ ಅನ್ನಭಾಗ್ಯ ಯೋಜನೆ
*ಬೆಂಗಳೂರು-ಮುಂಬೈ ಆರ್ಥಿಕ ಕಾರಿಡಾರ್ ಅಭಿವೃದ್ಧಿ
*ಎಲ್ಲಾ ವಿವಿಗಳಲ್ಲಿ ಹೊರ ವಿವಿ ವಿದ್ಯಾರ್ಥಿಗಳಿಗಾಗಿ ಶೇ.15ರಷ್ಟು ಸೀಟು. ಉನ್ನತ ಶಿಕ್ಷಣ ಇಲಾಖೆಗೆ 3,896 ಕೋಟಿ.


*ಬೆಂಗಳೂರಿನಲ್ಲಿ ಮೈಮಾಂತರಿಕ್ಷ ತಾಂತ್ರಿಕ ಕೇಂದ್ರ ಸ್ಥಾಪನೆ
*ವಾರ್ತಾ ಇಲಾಖೆಗೆ 93ಕೋಟಿ ಅನುದಾನ
*ವಿದೇಶಿ ಪ್ರವಾಸಿಗರಿಗೆ ಏರ್ ಚಾರ್ಟರ್ ಫ್ಲೈಟ್
*ಕೃಷಿ ಉದ್ದೇಶಿತ ಕೊಳವೆ ಬಾವಿ ವಿಫಲವಾದ್ರೆ ಸಾಲಮನ್ನಾ
*ಯಾದಗಿರಿಯ 3,200 ಎಕರೆ ಪ್ರದೇಶದಲ್ಲಿ ಅಭಿವೃದ್ಧಿ. ಹಾಲಿ ಕೈಗಾರಿಕಾ ಪ್ರದೇಶಗಳಿಗೆ ರು.100 ಅನುದಾನ
*ಬೆಂಗಳೂರು-ಮುಂಬೈ ಆರ್ಥಿಕ ಕಾರಿಡಾರ್ ಅಭಿವೃದ್ಧಿ

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited