Untitled Document
Sign Up | Login    
Dynamic website and Portals
  
March 11, 2015

ಸಿಎಂ ಸ್ಥಾನಕ್ಕೆ ಅದರದ್ದೇ ಆದ ಘನತೆಯಿದೆ: ಹೆಚ್.ಸಿ.ಮಹದೇವಪ್ಪ

ನವದೆಹಲಿ : ಮುಖ್ಯಮಂತ್ರಿ ಸ್ಥಾನಕ್ಕೆ ಅದರದೇ ಆದ ಘನತೆ ಇರುತ್ತದೆ. ಮುಖ್ಯಮಂತ್ರಿ ಸ್ಥಾನ ಸಂತೆಯಲ್ಲಿ ಬದನೆಕಾಯಿ ಕೊಂಡಂತಲ್ಲ ಎಂದು ಲೋಕೋಪಯೋಗಿ ಸಚಿವ ಹೆಚ್.ಸಿ.ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಫಾಸಿಸ್ಟ್ ಮತ್ತು ಕ್ಯಾಸ್ಟಿಸ್ಟ್‌ ಗಳ ಕುತಂತ್ರದಿಂದ ದಲಿತ ಸಿಎಂ ವಿಚಾರದ ಹೋರಾಟ ನಡೆಯುತ್ತಿದೆ ಎಂದರು.

ಕೆಪಿಸಿಸಿ ಅಧ್ಯಕ್ಷರಾದ ಪರಮೇಶ್ವರ್ ಅವರಿಗೆ ಇದರ ಅಗತ್ಯವಿಲ್ಲದಿರುವಾಗ, ದಲಿತ ಜನಾಂಗ ಮತ್ತು ಸರ್ಕಾರದ ನಡುವೆ ಸಂಘರ್ಷ ಉಂಟು ಮಾಡಲು ಕೆಲವು ಕುತಂತ್ರಿಗಳು ಈ ಕೆಲಸ ಮಾಡುತ್ತಿದ್ದಾರೆ. ಇದರ ಹಿಂದೆ ಪರಮೇಶ್ವರ್ ಕೈವಾಡವಿಲ್ಲ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ 2018ರವರೆಗೆ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಮುಂದಿನ ಚುನಾವಣೆಯಲ್ಲೂ ಅವರೇ ಗೆದ್ದು ಸಿಎಂ ಆಗಲಿದ್ದಾರೆ ಎಂದ ಅವರು, ಕೆಲ ದಲಿತ ಸಂಘಟನೆಗಳು ಮುಖ್ಯಮಂತ್ರಿ ಬದಲಾವಣೆ ಮಾಡಬೇಕೆಂದು ಒತ್ತಾಯ ಮಾಡುತ್ತಿರುವ ಕ್ರಮ ಸರಿಯಲ್ಲ. ಹೋರಾಟದ ಹಿನ್ನೆಲೆಯಲ್ಲಿ ಬಂದಿರುವ ಸಿದ್ದರಾಮಯ್ಯನವರು ದಲಿತರು, ಹಿಂದುಳಿದವರ ಪರವಾಗಿಯೇ ಕೆಲಸ ಮಾಡುತ್ತಿದ್ದಾರೆ ಎಂದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited