Untitled Document
Sign Up | Login    
Dynamic website and Portals
  
March 9, 2015

ರಾಜ್ಯದಲ್ಲಿ 50 ಲಕ್ಷ ದಾಟಿದ ಬಿಜೆಪಿ ಸದಸ್ಯತ್ವ ನೋಂದಣಿ

ಬೆಂಗಳೂರು : 'ಬಿಜೆಪಿ' ಸದಸ್ಯತ್ವ ರಾಜ್ಯದಲ್ಲಿ 50 ಲಕ್ಷ ದಾಟಿದೆ. ಈ ವರೆಗೂ ರಾಜ್ಯಾದ್ಯಂತ 52,50,064 ಜನರು ಬಿಜೆಪಿ ಸದಸ್ಯರಾಗಿದ್ದು, ಸದಸ್ಯತ್ವ ನೋಂದಣಿ ಚುರುಕುಪಡೆದಿದೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬೆಂಗಳೂರಿಗೆ ಭೇಟೀ ನೀಡಿದ್ದ ಸಂದರ್ಭದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನವನ್ನು ಚುರುಕುಗೊಳಿಸುವಂತೆ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದರು. ಅದರಂತೆಯೇ ಸದಸ್ಯತ್ವ ನೋಂದಣಿ ಚುರುಕುಪಡೆದಿದ್ದು, 50 ಲಕ್ಷ ದಾಟಿದೆ. ಆನ್‌ ಲೈನ್ ಮೂಲಕವೂ ಸದಸ್ಯತ್ವ ನೋಂದಣಿಗೆ ಅವಕಾಶವನ್ನು ಕಲ್ಪಿಸಲಾಗಿದೆ.

ರಾಜ್ಯದಲ್ಲಿ ಒಂದು ಕೋಟಿ ಸದಸ್ಯತ್ವ ನೋಂದಣಿ ಮಾಡುವ ಗುರಿಯನ್ನು ಬಿಜೆಪಿ ಹೊಂದಿದೆ. ಅದೇ ರೀತಿ ದೇಶದಲ್ಲಿ 10 ಕೋಟಿಗೂ ಹೆಚ್ಚು ಸದಸ್ಯತ್ವ ನೋಂದಣಿ ಮಾಡುವುದು ಉದ್ದೇಶ. ಮಾರ್ಚ್ ಅಂತ್ಯಕ್ಕೆ ಸದಸ್ಯತ್ವ ನೋಂದಣಿ ಮುಕ್ತಾಯವಾಗಲಿದೆ. ನೋಂದಣಿ ಮುಕ್ತಾಯಗೊಳ್ಳುವುದಕ್ಕೆ ಕೇವಲ 20 ದಿನಗಳು ಮಾತ್ರ ಬಾಕಿ ಉಳಿದಿದ್ದು, ಅಷ್ಟರಲ್ಲಿ ಬಾಕಿ ಉಳಿದಿರುವ ಸುಮಾರು ಅರ್ಧಕೋಟಿಯಷ್ಟು ಸದಸ್ಯತ್ವ ನೋಂದಣಿ ಮಾಡುವುದು ಬಿಜೆಪಿ ಮುಂದಿರುವ ಸವಾಲಾಗಿದೆ.

ರಾಜ್ಯಾದ್ಯಂತ ನಡೆದಿರುವ ಸದಸ್ಯತ್ವ ನೋಂದಣಿಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದ್ದು, ಶೇ.60ರಷ್ಟು ನೋಂದಣಿ ಮಾಡಲಾಗಿದೆ. ಬೆಂಗಳೂರು ಮಹಾನಗರಕ್ಕೆ 10 ಲಕ್ಷ ಸದಸ್ಯತ್ವ ನೋಂದಣಿ ಗುರಿ ನೀಡಲಾಗಿದ್ದು, 6 ಲಕ್ಷ ಸದಸ್ಯತ್ವ ನೋಂದಣಿ ಕಾರ್ಯ ಆಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited