Untitled Document
Sign Up | Login    
Dynamic website and Portals
  
March 6, 2015

ಕರ್ನಾಟಕ-ಮಹಾರಾಷ್ಟ್ರಗಡಿ ವಿವಾದ: ಸಮಿತಿ ಪುನರ್ರಚಿಸಿದ ಮಹಾ ಸರ್ಕಾರ

ಮುಂಬೈ : ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದವನ್ನು ಗಂಭಿರವಾಗಿ ಪರಿಗಣಿಸಿರುವ ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರ, ಈ ಸಂಬಂಧ ಉನ್ನತ ಮಟ್ಟದ ಸಮಿತಿಯನ್ನು ಪುನರ್ ರಚಿಸಿರುವುದಾಗಿ ಹೇಳಿದೆ.

ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಸಂಬಂಧ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನೇತೃತ್ವದ ಎಂಟು ಸದಸ್ಯರ ಸಮತಿಯನ್ನು ಪುನರ್ ರಚಿಸಲಾಗಿದ್ದು, ಎನ್‌ಸಿಪಿ ಹಿರಿಯ ನಾಯಕ ಶರದ್ ಪವಾರ್ ಹಾಗೂ ಬಿಜೆಪಿ, ಶಿವಸೇನೆಯ ಹಿರಿಯ ಸಚಿವರು ಈ ಸಮಿತಿಯಲ್ಲಿದ್ದಾರೆ.

ಈ ಸಂಬಂಧ ಮಹಾರಾಷ್ಟ್ರ ಸರ್ಕಾರ ಬಿಡುಗಡೆ ಮಾಡಿರುವ ಗೊತ್ತುವಳಿ ಪ್ರಕಾರ, ಮಹಾರಾಷ್ಟ್ರ ವಿಧಾನಸಭೆ ಪ್ರತಿಪಕ್ಷದ ನಾಯಕರೂ ಸಮಿತಿಯ ಭಾಗವಾಗಿರಲಿದ್ದಾರೆ ಎಂದು ಹೇಳಿದೆ.
ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ತುಂಬಾ ಹಳೆಯ ವಿವಾದವಾಗಿದ್ದು, ಕರ್ನಾಟಕದ ಬೆಳಗಾವಿ ಹಾಗೂ ಇತರೆ ಕೆಲವು ಗಡಿ ಭಾಗಗಳು ತನಗೆ ಸೇರಿದ್ದೆಂದು ಮಹಾರಾಷ್ಟ್ರ ಮೊದಲನಿಂದಲೂ ವಾದಿಸುತ್ತಾ ಬಂದಿದೆ. ಸದ್ಯ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದ್ದು, ವಿಚಾರಣೆ ಹಂತದಲ್ಲಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited