ಕೋಹಿಮಾ : ತಮ್ಮ ವಿರುದ್ಧ ಕೇಳಿ ಬಂದಿರುವ ಕಪ್ಪು ಹಣದ ಆರೋಪ ಕುರಿತಂತೆ ತನಿಖೆ ನಡೆಸಬೇಕು ಎಂದು ನಾಗಾಲ್ಯಾಂಡ್ ಮುಖ್ಯಮಂತ್ರಿ ಟಿ.ಆರ್.ಜಿಲಾಂಗ್ ಅವರೇ ಸ್ವತಃ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.
ಮುಖ್ಯಮಂತ್ರಿ ಜಿಲಾಂಗ್ ವಿರುದ್ಧ 80ಕೋಟಿ ರೂ. ಅವ್ಯವಹಾರದ ಆರೋಪ ಕೇಳಿ ಬಂದಿದೆ. ಜಿಲಾಂಗ್ ಅವರು ತಮ್ಮ ವಿದೇಶಿ ಬ್ಯಾಂಕ್ ಖಾತೆಯಲ್ಲಿ 80 ಕೋಟಿ ರೂ.ಗಳನ್ನು ಇಟ್ಟಿದ್ದಾರೆ ಎಂಬುದು ಸದ್ಯ ಅವರ ಮೇಲಿನ ಆರೋಪ.
ಇದಕ್ಕೆ ಪ್ರತಿಕ್ರಿಯಿಸಿರುವ ಜಿಲಾಂಗ್, ತಮ್ಮ ವಿರುದ್ಧದ ಆರೋಪದ ತನಿಖೆ ಮಾಡುವಂತೆ ಕೋರಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.
ಮುಖ್ಯಮಂತ್ರಿಯೊಬ್ಬರು ಈ ರೀತಿ ತಮ್ಮ ಮೇಲಿನ ದೂರು ಕುರಿತು ಖುದ್ದಾಗಿ ತಾವೇ ತನಿಖೆ ನಡೆಸಲು ಕೋರಿ ಪತ್ರ ಬರೆದಿರುವುದು ಇದೇ ಮೊದಲು ಎನ್ನಲಾಗಿದೆ.