Untitled Document
Sign Up | Login    
Dynamic website and Portals
  
March 5, 2015

ನಿಷೇಧದ ನಡುವೆ ಬಿಬಿಸಿ ಸಾಕ್ಷ್ಯ ಚಿತ್ರ ಪ್ರಸಾರ: ಕೇಂದ್ರ ಸರ್ಕಾರದಿಂದ ಕ್ರಮ ಸಾಧ್ಯತೆ

ನಿಷೇಧದ ನಡುವೆ ಬಿಬಿಸಿ ಸಾಕ್ಷ್ಯ ಚಿತ್ರ ಪ್ರಸಾರ: ಕೇಂದ್ರ ಸರ್ಕಾರದಿಂದ ಕ್ರಮ ಸಾಧ್ಯತೆ

ನವದೆಹಲಿ : 'ನಿಷೇಧ'ದ ಹೊರತಾಗಿಯೂ ಬಿಬಿಸಿ ವಾಹಿನಿ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿ ಮುಖೇಶ್ ಸಿಂಗ್ ಸಂದರ್ಶನವನ್ನು ನಿಗದಿಗಿಂತ ಮೊದಲೇ ಪ್ರಸಾರ ಮಾಡಿದೆ.

ಸಂದರ್ಶನ ಪ್ರಸಾರ ಮಾಡುವ ಮೂಲಕ, ಕೇಂದ್ರ ಸರ್ಕಾರ&id=17488'>ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಇಂಗ್ಲೆಂಡ್ ಸೇರಿದಂತೆ ಇತರೆ ದೇಶಗಳಲ್ಲಿ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರಸಾರವಾಗಿದೆ.

ದೆಹಲಿ ಅತ್ಯಾಚಾರ ಪ್ರಕರಣದ ಅಪರಾಧಿ ಮುಖೇಶ್‌ ಸಿಂಗ್‌ ನ ಸಂದರ್ಶನ ಒಳಗೊಂಡಿರುವ ವಿವಾದಾತ್ಮಕ ಸಾಕ್ಷ್ಯ­ಚಿತ್ರ ಪ್ರಸಾರ ಮಾಡದಂತೆ ಬಿಬಿಸಿಗೆ ಸರ್ಕಾರ ಹಾಗೂ ನ್ಯಾಯಾಂಗ ಸೂಚಿಸಿತ್ತು. ಮಾ.8ರಂದು ಅಂತಾರಾಷ್ಟ್ರೀಯ ಮಹಿಳಾದಿನಾಚರಣೆಯ ಅಂಗವಾಗಿ ಈ ಸಂದರ್ಶನವನ್ನು ಪ್ರಸಾರ ಮಾಡಲು ಬಿಬಿಸಿ ನಿರ್ಧರಿಸಿತ್ತು.

ಬಿಬಿಸಿ ಕ್ರಮದಿಂದ ತೀವ್ರ ಅಸಮಾಧಾನಕ್ಕೊಳಗಾಗಿರುವ ಕೇಂದ್ರ ಸರ್ಕಾರ&id=17488'>ಕೇಂದ್ರ ಸರ್ಕಾರ ಬಿಬಿಸಿ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದೆ ಎಂದು ಹೇಳಲಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited