Untitled Document
Sign Up | Login    
Dynamic website and Portals
  
March 4, 2015

ಟೆಲೆಕಾಂ ತರಂಗಾಂತರ ಹರಾಜು ಪ್ರಕ್ರಿಯೆ ಆರಂಭ: ಒಂದು ಲಕ್ಷ ಕೋಟಿ ರೂ ಆದಾಯ ನಿರೀಕ್ಷೆ

ಸಾಂದರ್ಭಿಕ ಚಿತ್ರ ಸಾಂದರ್ಭಿಕ ಚಿತ್ರ

ನವದೆಹಲಿ : 'ಮೊಬೈಲ್' ತರಂಗಾಂತರ ಹರಾಜು ಪ್ರಕ್ರಿಯೆಗೆ ಮಾ.4ರಂದು ಚಾಲನೆ ದೊರೆತಿದ್ದು ಸರ್ಕಾರದ ಬೊಕ್ಕಸಕ್ಕೆ ಬೃಹತ್ ಪ್ರಮಾಣದಲ್ಲಿ ಆದಾಯ ಹರಿದು ಬರುವ ನಿರೀಕ್ಷೆ ಇದೆ.

ಮಾ.4ರಂದು ಬೆಳಿಗ್ಗೆಯಿಂದ ಪ್ರಾರಂಭವಾಗಿರುವ 4 ಬ್ಯಾಂಡ್ ಗಳ ಹರಾಜು ಪ್ರಕ್ರಿಯೆಯಲ್ಲಿ 8 ಸಂಸ್ಥೆಗಳು ಭಾಗಿಯಾಗಿವೆ. ಈ ಬಾರಿ ನಡೆಯುತ್ತಿರುವುದು 2ಜಿ, 3ಜಿ ತರಂಗಾಂತರಗಳ ಅತಿ ದೊಡ್ಡ ಹರಾಜು ಪ್ರಕ್ರಿಯೆ ಎಂದು ಹೇಳಲಾಗಿದ್ದು ಈ ಮೂಲಕ ಸರ್ಕಾರ ತನ್ನ ಬೊಕ್ಕಸಕ್ಕೆ ಒಂದು ಲಕ್ಷ ಕೋಟಿ ರೂ. ಆದಾಯವನ್ನು ಎದುರು ನೋಡುತ್ತಿದೆ.

ಏರ್ ಟೆಲ್, ವೊಡಾಫೋನ್, ಐಡಿಯಾ, ರಿಲಾಯನ್ಸ್ ಟೆಲಿಕಾಮ್ ಸಂಸ್ಥೆಗಳು ಹೆಚ್ಚಿನ ತರಂಗಾಂತರಗಳನ್ನು ಹೊಂದಿದ್ದು, ಇದರ ಪರವಾನಗಿ 2015-16ಕ್ಕೆ ಕೊನೆಗೊಳ್ಳಲಿದ್ದು, ಈ ಸಂಸ್ಥೆಗಳೂ ಕೂಡ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿದೆ.

ಹರಾಜು ಪ್ರಕ್ರಿಯೆಯಲ್ಲಿ 900 ಮೆಗಾ ಹರ್ಟ್ಜ್ ಬ್ಯಾಂಡ್, 1800 ಮೆಗಾ ಹರ್ಟ್ಜ್ ಬ್ಯಾಂಡ್, 800 ಮೆಗಾ ಹರ್ಟ್ಜ್ ನ ಮೂರು ಬ್ಯಾಂಡುಗಳಲ್ಲಿ ಒಟ್ಟು 380.75 ಮೆಗಾ ಹರ್ಟ್ಜ್ ತರಂಗಾಂತರವನ್ನು ಮಾರಾಟಕ್ಕೆ ಇಡಲಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Business & Economics

ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
  • ಆರ್ ಬಿಐ ನೂತನ ಅಧ್ಯಕ್ಷರಿಂದ ಮೊದಲ ಹಣಕಾಸು ನೀತಿ ಪ್ರಕಟ
  • ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited