ಮುಂಬೈ : ರೆಪೋ ದರ ಕಡಿತ ಮಾಡಿದ ಬೆನ್ನಲ್ಲೇ ಸೆನ್ಸೆಕ್ಸ್ ಐತಿಹಾಸಿಕ ದಾಖಲೆ ಏರಿಕೆಯಾಗಿ ಇದೇ ಮೊದಲ ಬಾರಿಗೆ 30,000 ಗಡಿ ದಾಟಿದೆ.
407.43ರಷ್ಟು ಏರಿಕೆ ಕಂಡಿರುವ ಸೆನ್ಸೆಕ್ಸ್ 30,001.16 ಅಂಕಗಳಷ್ಟು ಏರಿಕೆಯಾಗಿದೆ. ಸೆನ್ಸೆಕ್ಸ್ 30 ಸಾವಿರ ಗಡಿ ದಾಟಿರುವುದು ಷೇರು ಪೇಟೆ ಇತಿಹಾಸದಲ್ಲಿ ಇದೇ ಮೊದಲು.
ನಿಫ್ಟಿ ಸಹ 112.90 ಅಂಕಗಳ ಏರಿಕೆ ದಾಖಲಿಸಿದ್ದು 9109.15 ಅಂಕದಲ್ಲಿ ಕೊನೆಗೊಂಡಿದೆ.
ಆರ್.ಬಿ.ಐ ರೆಪೋ ದರ 0.25ರಷ್ಟು ಮೂಲ ಅಂಕಗಳಷ್ಟು ಕಡಿತಗೊಳಿಸಿರುವ ಕಾರಣ 7.75ರಷ್ಟಿದ್ದ ರಿಪೋ ದರ ಇದೀಗ 7.50ಕ್ಕೆ ಇಳಿದಂತಾಗಿದೆ. ರೆಪೋ ದರ ಇಳಿಕೆ ಘೋಷಣೆಯಾಗುತ್ತಿದ್ದಂತೆಯೇ ಷೇರು ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಕಂಡಿದ್ದು, ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ 30 ಸಾವಿರ ಗಡಿ ದಾಟಿದೆ.
ಇದೇ ವೇಳೆ ಶೆಡ್ನೂಲ್ಟ್ ಬ್ಯಾಂಕ್ ಗಳ ನಗದು ಮೀಸಲಾತಿ ಪ್ರಮಾಣ (ಸಿಆರ್ಆರ್) ತಲಾ ಬೇಡಿಕೆ ಮತ್ತು ಕಾಲಮಿತಿ ಬದ್ಧತೆಗಳಿಗೆ ಅನುಗುಣವಾಗಿ 4 ಪ್ರತಿಶತದಷ್ಟೇ ಉಳಿದುಕೊಂಡಿದೆ.
ಮಾರ್ಜಿನಲ್ ಸ್ಟಾಂಡಿಂಗ್ ಫೆಸಿಲಿಟಿ (ಎಂ.ಎಸ್.ಎಫ್) ದರ ಹಾಗೂ ಬ್ಯಾಂಕ್ ದರವನ್ನು ತಕ್ಷಣದಿಂದ ಜಾರಿಗೆ ಬರುವಂತೆ 8.5 ಪ್ರತಿಶತಕ್ಕೆ ಸರಿಪಡಿಸಲಾಗಿದೆ.