Untitled Document
Sign Up | Login    
Dynamic website and Portals
  
February 28, 2015

ಕೇಂದ್ರ ಬಜೆಟ್: ನಿರುಪಯುಕ್ತ, ಕಾಲ್ಪನಿಕ ಬಜೆಟ್: ಖರ್ಗೆ

ನವದೆಹಲಿ : ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಲೋಕಸಭೆಯಲ್ಲಿ ಮಂಡಿಸಿದ 2015-16ರ ಬಜೆಟ್ ರೈವೆ ಬಜೆಟ್ ನಂತೆಯೇ ಕಾಲ್ಪನಿಕ ಬಜೆಟ್ ಮುಂಗಡಪತ್ರವಾಗಿದೆ. ಇದರಲ್ಲಿ ಯಾವ ಸಕಾರಾತ್ಮಕ ಅಂಶಗಳೂ ಇಲ್ಲ. ಇದೊಂದು ನಿರುಪಯುಕ್ತ ಬಜೆಟ್ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಬಜೆಟ್ ಮಂಡನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಜೆಟ್ ಗುಡ್ಡ ಬಗೆದು ಇಲಿ ಹಿಡಿದಂತಾಗಿದೆ ಎಂದರು. ಈ ಬಜೆಟ್‌ನಲ್ಲಿ ಹೆಸರಿಸುವಂತಹ ಯಾವುದೇ ಅಂಶಗಳು ಇಲ್ಲ. ಇದು ಜನಸಾಮಾನ್ಯರ ಪರ ಬಜೆಟ್ ಅಲ್ಲ. ಶ್ರೀಮಂತರ ಬಜೆಟ್. ಬಡವರು ಬಳಸುವ ಎಲ್ಲ ವಸ್ತುಗಳು ದುಬಾರಿಯೇ ಆಗಿವೆ ಎಂದು ಹೇಳಿದರು.

ಜನ ಈ ಬಜೆಟ್ ಬಗ್ಗೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಎಲ್ಲ ನಿರೀಕ್ಷೆಗಳು ಹುಸಿಯಾಗಿವೆ.ಬಜೆಟ್‌ನಲ್ಲಿ ಜನಸಾಮಾನ್ಯರ ನಿರೀಕ್ಷೆಗಳನ್ನು ಕಡೆಗಣಿಸಲಾಗಿದೆ, ಇದು ಬರೀ ದೂರದೃಷ್ಟಿಯ ದಾಖಲೆ ಅಷ್ಟೇ ಎಂದು ಟೀಕಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited